ನವದೆಹಲಿ/ಗಾಜಿಯಾಬಾದ್: ಕೃಷಿ ಕಾನೂನಿನ ವಿರುದ್ಧ ಆಂದೋಲನ ನಡೆಸುತ್ತಿರುವ ರೈತ ಮುಖಂಡ ರಾಕೇಶ್ ಟಿಕಾಯತ್ ಇತ್ತೀಚೆಗೆ ಪ್ರತಿಭಟನೆ ಮುಂದುವರೆಸುವ ಭಾಗವಾಗಿ ಉತ್ತರ ಪ್ರದೇಶದ ಲಖನೌ ಸುತ್ತಮುತ್ತಲಿನ ರಸ್ತೆಗಳನ್ನು ಮುಚ್ಚುವ ಬಗ್ಗೆ ಮಾತನಾಡಿದ್ದರು. ಆ ಬಳಿಕ ಉತ್ತರ ಪ್ರದೇಶ ಬಿಜೆಪಿ ಮತ್ತು ಭಾರತೀಯ ಕಿಸಾನ್ ಯೂನಿಯನ್ ನಡುವೆ ಪೋಸ್ಟರ್ ವಾರ್ ಆರಂಭವಾಗಿದೆ.
-
ओ भाई जरा संभल कर जइयो लखनऊ में...#BJP4UP pic.twitter.com/TKwrjaIXYz
— BJP Uttar Pradesh (@BJP4UP) July 29, 2021 " class="align-text-top noRightClick twitterSection" data="
">ओ भाई जरा संभल कर जइयो लखनऊ में...#BJP4UP pic.twitter.com/TKwrjaIXYz
— BJP Uttar Pradesh (@BJP4UP) July 29, 2021ओ भाई जरा संभल कर जइयो लखनऊ में...#BJP4UP pic.twitter.com/TKwrjaIXYz
— BJP Uttar Pradesh (@BJP4UP) July 29, 2021
ರಾಕೇಶ್ ಟಿಕಾಯತ್ ಅವರ ಹೇಳಿಕೆಗೆ ಜುಲೈ 29ರಂದು ತನ್ನ ಅಧಿಕೃತ ಖಾತೆಯಲ್ಲಿ ಉತ್ತರ ಪ್ರದೇಶ ಬಿಜೆಪಿ ವಿವಾದಾತ್ಮಕ ಟ್ವೀಟ್ ಮಾಡಿತ್ತು. "ಓ ಅಣ್ಣಾ ಲಖನೌದಲ್ಲಿ ಬಹಳ ಹುಷಾರಾಗಿರಿ" ಎಂಬ ಶೀರ್ಷಿಕೆಯೊಂದಿಗೆ ಹಾಗೂ ಟಿಕಾಯತ್ ಉತ್ತರಪ್ರದೇಶಕ್ಕೆ ಪ್ರವೇಶಸುವ ಮಾರ್ಗದಲ್ಲಿ ವ್ಯಕ್ತಿಯೊಬ್ಬ (ಬಾಹುಬಲಿ) ಅಡ್ಡಗಡ್ಡಿ "ನೀವು ಲಖನೌಗೆ ಹೋಗುತ್ತಿದ್ದೀರಿ ಎಂದು ಕೇಳ್ಪಟ್ಟೆ. ಅಲ್ಲಿ ಯೋಗಿ ಕುಳಿತಿದ್ದಾರೆ" ಎಂದು ಬೆದರಿಸುವ ಕಾರ್ಟೂನ್ವೊಂದನ್ನು ಶೇರ್ ಮಾಡಿತ್ತು. ಇದೇ ಕಾರ್ಟೂನ್ನಲ್ಲಿ ಟಿಕಾಯತ್ರನ್ನು ಸಿಎಂ ಯೋಗಿ ಎಳೆದೊಯ್ಯುತ್ತಿರುವುದನ್ನೂ ಪರೋಕ್ಷವಾಗಿ ತೋರಿಸಲಾಗಿತ್ತು.
-
लखनऊ भी आएंगे और तारीख भी बताएंगे ।
— Bhartiya kisan Union (@OfficialBKU) August 6, 2021 " class="align-text-top noRightClick twitterSection" data="
👉 आज आ रहा हूं लखनऊ 🚜#FarmersProtest https://t.co/qs6MTXLvdv
">लखनऊ भी आएंगे और तारीख भी बताएंगे ।
— Bhartiya kisan Union (@OfficialBKU) August 6, 2021
👉 आज आ रहा हूं लखनऊ 🚜#FarmersProtest https://t.co/qs6MTXLvdvलखनऊ भी आएंगे और तारीख भी बताएंगे ।
— Bhartiya kisan Union (@OfficialBKU) August 6, 2021
👉 आज आ रहा हूं लखनऊ 🚜#FarmersProtest https://t.co/qs6MTXLvdv
ಇದಕ್ಕೆ ಪ್ರತಿಕ್ರಿಯಿಸಿದ್ದ ಟಿಕಾಯತ್, ಬಿಜೆಪಿಯು ಜಾಹೀರಾತುಗಳ ಮೇಲೆ ಅಪಾರ ಪ್ರಮಾಣದ ಹಣ ಸುರಿಯುತ್ತದೆ. ಅವರು ಕಚೇರಿಯಲ್ಲಿ ಕುಳಿತು ಟ್ವೀಟ್ ಮಾಡುತ್ತಾರೆ, ಆದರೆ, ಅವರಿಗೆ ನೈಜತೆ ಗೊತ್ತಿರುವುದಿಲ್ಲ ಎಂದು ಹೇಳಿದ್ದರು. ಇಂದು ಮತ್ತೆ ತಿರುಗೇಟು ನೀಡಿರುವ ಅವರು, ನಾನು ಲಖನೌದಲ್ಲಿ ಇಂದಿನ ಸಂಜೆಯ ಕಾರ್ಯಕ್ರಮಕ್ಕೆ ಹಾಜರಾಗುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ರಿಟ್ವೀಟ್ ಮಾಡಿರುವ ಭಾರತೀಯ ಕಿಸಾನ್ ಯೂನಿಯನ್, ಟಿಕಾಯತ್ ಅವರು ಲಖನೌಗೆ ಬಂದು ಪ್ರತಿಭಟನೆಯ ದಿನಾಂಕವನ್ನೂ ನಿಗದಿ ಮಾಡುತ್ತಾರೆ ಎಂದು ಹೇಳಿದೆ.