ETV Bharat / bharat

ವಿಪಕ್ಷಗಳ ಗದ್ದಲ ನಡುವೆಯೇ ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ)-2021 ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ - ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ-2021

ಕಾರ್ಪೊರೇಟ್ ಸಾಲಗಾರರ ದಿವಾಳಿತನವನ್ನು ಪರಿಹರಿಸಲು (330 ದಿನಗಳಲ್ಲಿ) ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆ (CIRP) ಎಂದು ಕರೆಯಲಾಗುವ ಕಾಲಮಿತಿಯ ಪ್ರಕ್ರಿಯೆಯನ್ನು ಕೋಡ್ ನಿರ್ದೇಶಿಸುತ್ತದೆ..

Rajya Sabha passes Insolvency and Bankruptcy Code (Amendment) Bill,2021
ವಿಕ್ಷಗಳ ಗದ್ದಲ ನಡುವೆಯೇ ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ)-2021 ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ
author img

By

Published : Aug 3, 2021, 9:24 PM IST

ನವದೆಹಲಿ : ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ 2021ಅನ್ನು ರಾಜ್ಯಸಭೆಯಲ್ಲಿಂದು ವಿರೋಧ ಪಕ್ಷಗಳ ಗದ್ದಲದ ನಡುವೆ ಅಂಗೀಕರಿಸಲಾಯಿತು. ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ. ಮಸೂದೆಯನ್ನು ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ತಿದ್ದುಪಡಿ ಮಸೂದೆ ವೆಚ್ಚವನ್ನು ಕಡಿತಗೊಳಿಸುತ್ತದೆ. ದಿವಾಳಿತನದ ಪರಿಹಾರದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಎಂದು ಹೇಳಿದರು.

ವಿಪಕ್ಷಗಳ ಗದ್ದಲ ನಡುವೆಯೇ ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ)-2021 ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

ಈ ಪ್ರಕ್ರಿಯೆಯು 120 ದಿನಗಳಲ್ಲಿ ಮುಗಿಯುವುದರಿಂದ MSMEಗಳು ಪರಿಹಾರವನ್ನು ಪಡೆಯುತ್ತವೆ. ಕೋವಿಡ್ ನಡುವೆ ಐಬಿಸಿಯನ್ನು ಸ್ಥಗಿತಗೊಳಿಸಿದ ನಂತರ ನಿರೀಕ್ಷೆಗೆ ವಿರುದ್ಧವಾಗಿ, ಎಂಎಸ್‌ಎಂಇಗಳ ದಿವಾಳಿತನದಲ್ಲಿ ಯಾವುದೇ ಏರಿಕೆಯಿಲ್ಲ ಎಂದು ಸೀತಾರಾಮನ್ ಕಲಾಪಕ್ಕೆ ತಿಳಿಸಿದರು. 2021ರ ಜುಲೈ 28ರಂದು ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು. ಮಸೂದೆ ದಿವಾಳಿತನ ಮತ್ತು ದಿವಾಳಿತನ ಸಂಹಿತೆ 2016ಕ್ಕೆ ತಿದ್ದುಪಡಿ ತಂದಿದೆ.

ಇದನ್ನೂ ಓದಿ: ಪಿ.ವಿ ಸಿಂಧು ಐತಿಹಾಸಿಕ ಒಲಿಂಪಿಕ್ಸ್‌ ಸಾಧನೆಗೆ ರಾಜ್ಯಸಭೆ, ಲೋಕಸಭೆಯಲ್ಲಿ ಅಭಿನಂದನೆ

ಕಾರ್ಪೊರೇಟ್ ಸಾಲಗಾರರ ದಿವಾಳಿತನವನ್ನು ಪರಿಹರಿಸಲು (330 ದಿನಗಳಲ್ಲಿ) ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆ (CIRP) ಎಂದು ಕರೆಯಲಾಗುವ ಕಾಲಮಿತಿಯ ಪ್ರಕ್ರಿಯೆಯನ್ನು ಕೋಡ್ ನಿರ್ದೇಶಿಸುತ್ತದೆ.

ಏತನ್ಮಧ್ಯೆ, ಪ್ರತಿಪಕ್ಷಗಳು ಸಂಸತ್ತಿನಲ್ಲಿ ಗದ್ದಲವನ್ನು ಸೃಷ್ಟಿಸಿದವು. ಕೆಲ ಸಂಸದರು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ವಿರೋಧ ಪಕ್ಷಗಳು ಪೆಗಾಸಸ್ ಸ್ಪೈವೇರ್‌, ಕೃಷಿ ಕಾಯ್ದೆಗಲು ಹಾಗೂ ಕೋವಿಡ್ ಬಿಕ್ಕಟ್ಟಿನ ಮೇಲಿನ ಚರ್ಚೆಗೆ ಒತ್ತಡ ಹೇರುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.