ಜಾಮ್‌ನಗರ(ಗುಜರಾತ್): ಸೌರಾಷ್ಟ್ರದ ಇತಿಹಾಸದಲ್ಲಿ ಅತ್ಯಂತ ಭೀಕರ ಯುದ್ಧ ಜಾಮ್‌ನಗರ ಜಿಲ್ಲೆಯ ಧ್ರೋಲ್ ನಗರದಿಂದ 2 ಕಿಮೀ ದೂರದಲ್ಲಿರುವ ಭೂಚಾರ್ ಮೋರಿ (ಐತಿಹಾಸಿಕ ಹುತಾತ್ಮರ ನಾಡು) ಭೂಮಿಯಲ್ಲಿ ನಡೆಯಿತು. ಇತಿಹಾಸಕಾರರು ಇದನ್ನು ಪಾಣಿಪತ್ ಕದನಕ್ಕೆ ಹೋಲಿಸಿದ್ದಾರೆ. ಶರಣಾದ ಮುಸಲ್ಮಾನ್ ಚಕ್ರವರ್ತಿ ಮುಜಾಫರ್ ಷಾ III ನನ್ನು ರಕ್ಷಿಸಲು ಕ್ಷೇತ್ರದ ಎಲ್ಲ ಜನರು ತಮ್ಮ ರಕ್ತವನ್ನು ಚೆಲ್ಲಿದರು. 429 ವರ್ಷಗಳ ಹಿಂದೆ ಸಾವಿರಾರು ಕ್ಷತ್ರಿಯರ ತಮ್ಮ ಪ್ರಾಣ ತ್ಯಾಗ ಮಾಡಿದ ಯುದ್ಧಭೂಮಿ ಇದಾಗಿದೆ.
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್: ರಾಜ್ಯದ 17 ಜಿಲ್ಲೆಗಳ 5 ಸಾವಿರ ರಜಪೂತ ಯುವಕರು ನಡೆಸಿದ ಕತ್ತಿವರಸೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದೆ. ಅಖಿಲ ಗುಜರಾತ್ ರಜಪೂತ ಯುವ ಸಂಘ ಮತ್ತು ಭೂಚಾರ್ ಮೋರಿ ಶಹೀದ್ ಸ್ಮಾರಕ ಟ್ರಸ್ಟ್ ವತಿಯಿಂದ ಕತ್ತಿವರಸೆ ಆಯೋಜಿಸಲಾಗಿತ್ತು. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ರಾಜ್ಯ ಸಚಿವ ಕೀರ್ತಿಸಿಂಹ ವಘೇಲಾ ಉಪಸ್ಥಿತರಿದ್ದರು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರ್ಪಡೆಗೊಂಡ ಪ್ರಮಾಣ ಪತ್ರವನ್ನು ಸಹ ಇದೇ ವೇಳೆ ನೀಡಲಾಯಿತು.
ಇತಿಹಾಸ ಪುಟಗಳಿಂದ: 1629ರ ಸಮಯದಲ್ಲಿ ದೆಹಲಿಯ ಚಕ್ರವರ್ತಿ ಅಕ್ಬರ್, ಗುಜರಾತ್‌ನ ಕೊನೆಯ ಚಕ್ರವರ್ತಿ ಮುಜಾಫರ್ ಷಾ III ನನ್ನು ಸೋಲಿಸಿ ಅವನ ರಾಜ್ಯವನ್ನು ವಶಪಡಿಸಿಕೊಂಡನು. ಅಕ್ಬರ್ ಮುಜಾಫರ್ ಷಾನನ್ನು ಬಂಧಿಸಿ ದೆಹಲಿಯ ಕಪ್ಪು ಕೋಣೆಯಲ್ಲಿ ಇರಿಸಿದ. ಆದರೆ ಮುಜಾಫರ್ ಷಾ ಅಲ್ಲಿಂದ ತಪ್ಪಿಸಿಕೊಂಡಿದ್ದ. ಈ ವಿಚಾರವನ್ನು ತಿಳಿದ ಅಕ್ಬರ್ ಮುಜಾಫರ್ನನ್ನು ಸೆರೆಹಿಡಿಯಲು ತನ್ನ ಸೈನ್ಯವನ್ನು ಕಳುಹಿಸಿದ್ದ.
ಓಡಿ ಹೋಗುತ್ತಿದ್ದ ಮುಜಾಫರ್ನ್ನು ಅಕ್ಬರ್‌ನ ಸೈನ್ಯ ಬೆನ್ನಟ್ಟಿತ್ತು. ಮುಜಾಫರ್ ಷಾ ಆಶ್ರಯಕ್ಕಾಗಿ ಅನೇಕ ರಾಜರ ಬಳಿ ಸಹಾಯಕ್ಕಾಗಿ ಹೋದರು, ಆದರೆ, ಯಾರೂ ಅವರಿಗೆ ಆಶ್ರಯ ನೀಡಲಿಲ್ಲ. ಆಗ ಮುಜಾಫರ್ ಷಾ ಜಾಮ್‌ನಗರದ ರಾಜ ಜಂಸ್ತಾಜಿಗೆ ಶರಣಾದರು. ಜಂಸ್ತಾಜಿ ಮುಜಾಫರ್ ಷಾಗೆ ಆಶ್ರಯ ನೀಡಿದನು. ಅಹಮದಾಬಾದ್‌ನಲ್ಲಿ ಅಕ್ಬರ್‌ನ ಉಪ ಮುರ್ಜಾ ಅಜೀಜ್‌ಗೆ ಜಂಸ್ತಾಜಿ ಮುಜಾಫರ್‌ಗೆ ಆಶ್ರಯ ನೀಡಿದ್ದಾನೆಂದು ತಿಳಿಯಿತು.
ಆಗ ಅಕ್ಬರ್ ಕೂಡಲೇ ತನ್ನ ಸೈನ್ಯವನ್ನು ಜಾಮ್‌ನಗರದ ಕಡೆಗೆ ಕಳುಹಿಸಿ ಮುಜಾಫರ್ ಷಾನನ್ನು ಹಸ್ತಾಂತರಿಸುವಂತೆ ಜಂಸ್ತಾಜಿಗೆ ಆದೇಶಿದ. ಆದರೆ ಶರಣಾದವರನ್ನು ಹೊರಹಾಕುವುದು ಕ್ಷತ್ರಿಯರ ಧರ್ಮವಲ್ಲ ಎಂದು ಜಂಸ್ತಾಜಿ ಉತ್ತರಿಸಿದ.
ಇದರಿಂದ ಕೆರಳಿದ ಅಕ್ಬರ್ ಯುದ್ಧ ಘೋಷಿಸಿದ. ಧ್ರೋಲ್ ಬಳಿಯ ಭೂಚಾರ್ ಮೋರಿ ಬಯಲಿನಲ್ಲಿ ಅಕ್ಬರನ ಸೈನ್ಯ ಮತ್ತು ಜಂಸ್ತಾಜಿ ಸೈನ್ಯದ ನಡುವೆ ಯುದ್ಧ ನಡೆಯಿತು. ಆದರೆ, ಈ ಯುದ್ಧದಲ್ಲಿ ಕ್ಷತ್ರಿಯರು ತಮ್ಮ ಶೌರ್ಯವನ್ನು ತೋರಿದರೂ, ಜಂಸ್ತಾಜಿ ಸೈನ್ಯ ವಂಚನೆಗೆ ಬಲಿಯಾಯಿತು ಎಂದು ಇತಿಹಾಸದಲ್ಲಿ ಬರೆಯಲಾಗಿದೆ.
ಆದರೆ, ಕ್ಷತ್ರಿಯರ ಶೌರ್ಯಕ್ಕೆ ಸಾಟಿಯಾಗಿರಲಿಲ್ಲ. 1648ರ ವಿಕ್ರಮ್ ಸಾವಂತ್‌ನಲ್ಲಿ ಹಲಾರಿ ಶ್ರಾವಣದಲ್ಲಿ ಈ ಯುದ್ಧ ನಡೆಯಿತು. ಹಾಗಾಗಿ ಸುಮಾರು ಇನ್ನೂರು ವರ್ಷಗಳಿಂದ ಜನರು ಜಾಮ್‌ನಗರದಲ್ಲಿ ಸತಮ್ ಹಬ್ಬವನ್ನು ಆಚರಿಸಲಿಲ್ಲ. ಯುದ್ದರಲ್ಲಿ ಸಾವಿರಾರು ರಜಪೂತರು ಪ್ರಾಣ ತ್ಯಾಗ ಮಾಡಿದರು. ಇಂದಿಗೂ ಭೂಚಾರ್ ಮೋರಿಯ ನಾಡು ಯುದ್ಧದಲ್ಲಿ ಹರಿಯುವ ರಕ್ತದ ನದಿಯಂತೆ ಕೆಂಪಾಗಿ ಕಾಣುತ್ತಿದೆ.
ಸ್ಮಾರಕ ನಿರ್ಮಾಣ: ಅಖಿಲ್ ಗುಜರಾತ್ ರಜಪೂತ ಯುವ ಸಂಘ ಮತ್ತು ಡಾ. ಜಯೇಂದ್ರಸಿನ್ಹ ಜಡೇಜಾ ಅವರ ಪರಿಶ್ರಮದಿಂದ ಹೊಸ ಸುಂದರ ಸ್ಮಾರಕ ಇಲ್ಲಿ ನಿರ್ಮಾಣವಾಗಿದೆ. ಅಂದಿನ ಮುಖ್ಯಮಂತ್ರಿ ಹಾಗೂ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ್ದರು. ಗುಜರಾತ್ ಸರ್ಕಾರ ಸುಮಾರು 8 ಕೋಟಿ ವೆಚ್ಚದಲ್ಲಿ ಬೃಹತ್ ಶಹೀದ್ ಅರಣ್ಯವನ್ನು ನಿರ್ಮಿಸಿದೆ. ಇದರಲ್ಲಿ ಜಂಸ್ತಾಜಿಯ ಸುಂದರ ಪ್ರತಿಮೆಯನ್ನು ಇರಿಸಲಾಗಿದೆ.
ಇದನ್ನೂ ಓದಿ: ಭಾರತ ಸರ್ಕಾರದ ಹೊಸ ಫೇಸ್ ರಿಕಗ್ನಿಶನ್ ಸಿಸ್ಟಮ್.. ಮಾಸ್ಕ್ ಹಾಕಿದ್ರೂ ಗುರುತಿಸುತ್ತೆ