ರಜೌರಿ(ಜಮ್ಮು-ಕಾಶ್ಮೀರ): ರಜೌರಿ ಜಿಲ್ಲೆಯ ಉಪ-ವಿಭಾಗದ ಥನ್ನಾ ಮಂಡಿಯಲ್ಲಿರುವ ಖಬ್ಲಾನ್ ಗ್ರಾಮದಲ್ಲಿ ನಿನ್ನೆ ರಾತ್ರಿಯಿಂದ ಉಗ್ರರಿಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ಇಂದೂ ಕೂಡ ಮುಂದುವರೆದಿದೆ. ಕೆಲ ಪೊಲೀಸ್ ಮೂಲಗಳ ಪ್ರಕಾರ ಇಬ್ಬರು ಉಗ್ರರು ಸಿಕ್ಕಿಬಿದ್ದಿದ್ದಾರೆ ಎನ್ನಲಾಗ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸೇನಾಧಿಕಾರಿಗಳು, ರಜೌರಿ-ಬುಫ್ಲಿಯಾಜ್ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿ ಭಯೋತ್ಪಾದಕರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಉಪವಿಭಾಗದ ಉದ್ದಕ್ಕೂ ಥನ್ನಾ ಮಂಡಿ ಮತ್ತು ದರಹಳ್ಳಿ ಸೇತುವೆಯ ರಸ್ತೆ ಮಾರ್ಗವನ್ನು ನಿನ್ನೆ ಸಂಜೆಯಿಂದ ಬಂದ್ ಮಾಡಲಾಗಿದೆ. ಇದರಿಂದ ನೂರಾರು ವಾಹನಗಳು ಹೆದ್ದಾರಿಯಲ್ಲಿ ಸಿಲುಕಿವೆ. ಪೂಂಚ್ ಹಾಗೂ ರಜೌರಿ ಜಿಲ್ಲೆಗಳಲ್ಲಿ ಕಳೆದ 27 ದಿನಗಳಿಂದ ಮುಂದುವರಿದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ 2 ಜೆಸಿಒಗಳು ಸೇರಿದಂತೆ 11 ಮಂದಿ ಯೋಧರು ಹುತಾತ್ಮರಾಗಿದ್ದಾರೆ.