ETV Bharat / bharat

ಪ್ರತಿಕೂಲ ಹವಾಮಾನ.. ರಕ್ಷಣಾ ಸಚಿವ ಪ್ರಯಾಣಿಸುತ್ತಿದ್ದ ಫ್ಲೈಟ್​ ಸೇರಿದಂತೆ 11 ವಿಮಾನಗಳ ಮಾರ್ಗ ಬದಲಾವಣೆ

ಪ್ರತಿಕೂಲ ಹವಾಮಾನದಿಂದಾಗಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವಿಮಾನ ಸೇರಿದಂತೆ ಕನಿಷ್ಠ 11 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

Rajnath Singhs flight diverted  Agra to Delhi flight  rains in Delhi  ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಮಾರ್ಗ ಬದಲಾವಣೆ  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಯಾಣಿಸುತ್ತಿದ್ದ ವಿಮಾನ ಮಾರ್ಗ ಬದಲಾವಣೆ  ದೆಹಲಿಯಲ್ಲಿ ವಿಪರೀತ ಮಳೆ
ಪ್ರತಿಕೂಲ ಹವಾಮಾನ
author img

By

Published : May 21, 2022, 11:56 AM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಯಾಣಿಸುತ್ತಿದ್ದ ವಿಮಾನವೂ ಸೇರಿ 11 ವಿಮಾನಗಳಿಗೆ ದೇಶದ ವಿವಿಧ ಸ್ಥಳಗಳ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಕೂಲ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಓದಿ: ಮುಂಬೈನಿಂದ ಬೆಂಗಳೂರಿಗೆ ಹಾರಾಟ ಮಾಡುತ್ತಿದ್ದಾಗಲೇ ಏರ್​ ಇಂಡಿಯಾ ವಿಮಾನದ ಇಂಜಿನ್​ 'ಆಫ್'!

ಮೂಲಗಳ ಪ್ರಕಾರ, ರಕ್ಷಣಾ ಸಚಿವರು ಗುಜರಾತ್‌ನ ವಡೋದರಾದ ಶ್ರೀ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಂತರ ದೆಹಲಿಗೆ ಹಿಂತಿರುಗುತ್ತಿದ್ದರು. ಪ್ರತಿಕೂಲ ಹವಾಮಾನದಿಂದಾಗಿ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವಿಮಾನ ಸೇರಿದಂತೆ ಕನಿಷ್ಠ 11 ವಿಮಾನಗಳನ್ನು ಅಹಮದಾಬಾದ್, ಜೈಪುರ, ಲಖನೌ ಮತ್ತು ಆಗ್ರಾಕ್ಕೆ ಮಾರ್ಗ ಬದಲಾಯಿಸಿಲಾಗಿದೆ ಎಂದು ತಿಳಿದುಬಂದಿದೆ.

ಶುಕ್ರವಾರದಂದು ದೆಹಲಿಯ ಕೆಲವು ಭಾಗಗಳಲ್ಲಿ ಮಳೆಯಾದ ಹಿನ್ನೆಲೆ ತಂಪಾದ ವಾತಾವರಣ ನಿರ್ಮಾಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.