ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿದ್ದ ಭಾರತೀಯ ವಾಯುಪಡೆಗೆ ಸೇರಿದ ಸೂಪರ್ ಹರ್ಕ್ಯುಲಸ್ C-130J ವಿಮಾನ ಇಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ಮೂಲಕ ಹೆದ್ದಾರಿ ಉದ್ಘಾಟನೆ ಮಾಡಲಾಗಿದೆ.
ಸೂಪರ್ ಹರ್ಕ್ಯುಲಸ್ C-130J ವಿಮಾನವನ್ನು ಭಾರತೀಯ ವಾಯುಸೇನೆಯ ಅತ್ಯಂತ ಅಪಾಯಕಾರಿ ಫೈಟರ್ ಜೆಟ್ ಎಂದೇ ಕರೆಯಲಾಗುತ್ತದೆ. ಇನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಸೇನೆಯ ಸೌಲಭ್ಯಕ್ಕೆ ಎಂದು ಭಾರತಮಾಲಾ ಯೋಜನೆಯ ಅಡಿ 765.52 ಕೋಟಿ ರೂ. ವೆಚ್ಚದಲ್ಲಿ ಗಗರಿಯಾ - ಭಕಾಸರ್ ಮತ್ತು ಸತ್ತ-ಗಾಂಧವ್ ವಿಭಾಗದ ದ್ವಿಪಥದ ಒಟ್ಟು 196.97 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಿದೆ. ಇನ್ನು ವಾಯುಪಡೆ ತುರ್ತು ಭೂ ಸ್ಪರ್ಶಕ್ಕಾಗಿ ಬಳಸಲಾಗಿರುವ ಮೊದಲ ರಾಷ್ಟ್ರೀಯ ಹೆದ್ದಾರಿ ಕೂಡಾ ಇದಾಗಿದೆ.
-
Leaving New Delhi for Barmer on a day-long visit to Rajasthan. Shall inaugurate the Emergency Landing Facility on NH-925A near Barmer, along with the Minister for Road Transport & Highways, Shri @nitin_gadkari. I shall also be attending the MRSAM induction ceremony in Jaisalmer.
— Rajnath Singh (@rajnathsingh) September 9, 2021 " class="align-text-top noRightClick twitterSection" data="
">Leaving New Delhi for Barmer on a day-long visit to Rajasthan. Shall inaugurate the Emergency Landing Facility on NH-925A near Barmer, along with the Minister for Road Transport & Highways, Shri @nitin_gadkari. I shall also be attending the MRSAM induction ceremony in Jaisalmer.
— Rajnath Singh (@rajnathsingh) September 9, 2021Leaving New Delhi for Barmer on a day-long visit to Rajasthan. Shall inaugurate the Emergency Landing Facility on NH-925A near Barmer, along with the Minister for Road Transport & Highways, Shri @nitin_gadkari. I shall also be attending the MRSAM induction ceremony in Jaisalmer.
— Rajnath Singh (@rajnathsingh) September 9, 2021
ಇಬ್ಬರು ಕೇಂದ್ರ ಸಚಿವರು ಹಾಗೂ ವಾಯುಪಡೆಯ ಚೀಫ್ ಮಾರ್ಷಲ್ ಆರ್ಕೆಎಸ್ ಬದೂರಿಯ ಈ ವಿಮಾನದಲ್ಲಿ ಪ್ರಯಾಣಿಸಿದ್ದು, ತುರ್ತು ಭೂ ಸ್ಪರ್ಶ ಮಾಡುವ ಮೂಲಕ ಹೆದ್ದಾರಿಯನ್ನು ಉದ್ಘಾಟನೆ ಮಾಡಿದ್ದಾರೆ.