ಚೆನ್ನೈ (ತಮಿಳುನಾಡು): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ ಒಂದು ತಿಂಗಳು ಪೆರೋಲ್ ಮೇಲೆ ಇಂದು ಬಿಡುಗಡೆಯಾಗಲಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ಅವರ ತಾಯಿ ನಿರಂತರವಾಗಿ ಮನವಿ ಮಾಡಿಕೊಂಡ ಪರಿಣಾಮ ಸರ್ಕಾರ ನಳಿನಿಯನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲು ಒಪ್ಪಿಕೊಂಡಿತ್ತು. ಇದನ್ನು ಮದ್ರಾಸ್ ಹೈಕೋರ್ಟ್ ಗಮನಕ್ಕೂ ತಂದಿತ್ತು.
ಪೆರೋಲ್ ಪಡೆಯಲು ಶ್ಯೂರಿಟಿ ದಾಖಲೆಗಳನ್ನು ನೀಡಿದ ಬಳಿಕ ನಳಿನಿ ಶ್ರೀಹರನ್ ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ನಳಿನಿ ಪರ ವಕೀಲ ರಾಧಾಕೃಷ್ಣನ್ ತಿಳಿಸಿದ್ದಾರೆ.
1991 ರಲ್ಲಿ ತಮಿಳುನಾಡಿನ ಪೆರಂಬದೂರಿನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಆತ್ಮಹತ್ಯಾ ಬಾಂಬರ್ ಬಳಸಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನಿ ಶ್ರೀಹರನ್ ಸೇರಿದಂತೆ 6 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.