ಚೆನ್ನೈ : ಸೂಪರ್ಸ್ಟಾರ್ ರಜಿನಿಕಾಂತ್ ರಾಜಕೀಯ ಪ್ರವೇಶ ಕುರಿತಂತೆ ತಮ್ಮ ನಿರ್ಧಾರ ಪ್ರಕಟಿಸುವ ಸಭೆ ಆರಂಭವಾಗಿದೆ. ಈ ಕುರಿತು ನಿರ್ಣಯ ಕೈಗೊಳ್ಳಲು ಮಕ್ಕಳ್ ಮಂದ್ರಂ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳ ಸಭೆ ಕರೆದಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಇದೇ ವರ್ಷದ ಅಕ್ಟೋಬರ್ನಲ್ಲಿ ರಾಜಕೀಯ ಪ್ರವೇಶ ಸ್ವಲ್ಪ ತಡವಾಗಬಹುದು ಎಂದು ರಜಿನಿಕಾಂತ್ ಸುಳಿವು ನೀಡಿದ್ದರು. ಅವರ ಆರೋಗ್ಯದ ಕುರಿತು ಒಂದು ಪತ್ರ ಹರಿದಾಡಿದ್ದು, ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿತ್ತು.
ಆ ಪತ್ರದಲ್ಲಿ ಕೊರೊನಾ ಕಾರಣದಿಂದ ರಜಿನಿಕಾಂತ್ ಅತಿಯಾದ ಪ್ರಯಾಣ ಮಾಡಬಾರದು. ಒಂದು ವೇಳೆ ಕೊರೊನಾ ಸೋಂಕಿಗೆ ಒಳಗಾದ್ರೆ ಕಿಡ್ನಿ ಸೋಂಕಿನಿಂದ ಮತ್ತಷ್ಟು ಅಪಾಯವಾಗುವ ಸಾಧ್ಯತೆ ದಟ್ಟವಾಗಿರುತ್ತದೆ ಎಂದು ಹೇಳಿತ್ತು.
ಹಿಂದಿನ ವಾರ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ತಮಿಳುನಾಡಿಗೆ ಭೇಟಿ ನೀಡಿದ್ದ ವೇಳೆ, ಬಿಜೆಪಿ ಹಾಗೂ ಎಐಎಡಿಎಂಕೆ ಮೈತ್ರಿ ಮುಂದುವರೆಯಲಿದೆ ಎಂದು ಸ್ಪಷ್ಟನೆ ನೀಡಿದ್ದರು. ಇದು ತಮಿಳುನಾಡು ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿತ್ತು.
ಇದು ರಜಿನಿಕಾಂತ್ ಅವರ ಹೊಸ ಪಕ್ಷಕ್ಕೂ ಕೂಡ ಕೆಲ ತಿರುವು ತಂದಿದೆ. ಹಾಗಾಗಿ ಇಂದು ರಾಜಕೀಯ ಪ್ರವೇಶದ ಬಗ್ಗೆ ರಜಿನಿ ಸ್ಪಷ್ಟನೆ ನೀಡಲಿದ್ದಾರೆ.
ಇದನ್ನೂ ಓದಿ: ನ.30ಕ್ಕೆ ರಾಜಕೀಯ ಪ್ರವೇಶದ ಬಗ್ಗೆ ನಿಲುವು ವ್ಯಕ್ತಪಡಿಸ್ತಾರೆ ಸೂಪರ್ ಸ್ಟಾರ್ ರಜಿನಿ