ETV Bharat / bharat

4 ತಿಂಗಳಿನಿಂದ ವೃದ್ಧನ ಹೊಟ್ಟೆಯೊಳಗೆ ಸಿಲುಕಿರುವ ಲೋಟ.. ಇಷ್ಟು ದಿನ ವಿಷಯ ಮುಚ್ಚಿಟ್ಟಿದ್ದು ಯಾಕೆ? - ಹೊಟ್ಟೆಯಲ್ಲಿ ಲೋಟ ಸಿಲುಕಿರುವುದು ಪತ್ತೆ

ಕಳೆದ ನಾಲ್ಕು ತಿಂಗಳ ಹಿಂದೆ ಈ ವೃದ್ಧ ಯಾವುದೋ ಗಲಾಟೆಯಲ್ಲಿ ತೊಡಗಿಸಿದ್ದರು. ಈ ವೇಳೆ ಕೆಲವರು ಆತನನ್ನು ವಿವಸ್ತ್ರಗೊಳಿಸಿ ಥಳಿಸಿ, ಲೋಟದ ಮೇಲೆ ಕೂರಿಸಿದ್ದರು. ಇದರಿಂದ ಹೊಟ್ಟೆಯೊಳಗೆ ಲೋಟ ಸೇರಿದೆ ಎಂದು ಹೇಳಲಾಗಿದೆ.

rajgarh-glass-found-in-patient-stomach-in-elderman-ramdas-admitted-to-rajgarh-district-hospital
4 ತಿಂಗಳಿನಿಂದ ವೃದ್ಧನ ಹೊಟ್ಟೆಯೊಳಗೆ ಸಿಲುಕಿರುವ ಲೋಟ... ಇಷ್ಟು ದಿನ ವಿಷಯ ಮುಚ್ಚಿಟ್ಟಿದ್ದು ಯಾಕೆ?
author img

By

Published : Oct 4, 2022, 8:17 PM IST

ರಾಜಗಢ (ಮಧ್ಯಪ್ರದೇಶ): ಆಸ್ಪತ್ರೆಗೆ ದಾಖಲಾದ ವೃದ್ಧನ ಹೊಟ್ಟೆಯೊಳಗೆ ಲೋಟವೊಂದು ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿ ನಡೆದಿದೆ. ಕಳೆದ 4 ತಿಂಗಳಿನಿಂದ ಈ ಲೋಟ ಹೊಟ್ಟೆಯೊಳಗೇ ಇದೆ ಎಂದು ಹೇಳಲಾಗುತ್ತಿದೆ.

ರಾಮದಾಸ್ ಎಂಬ ವೃದ್ಧ ಹೊಟ್ಟೆ ನೋವು ತಾಳಲಾಗದೇ ಆಸ್ಪತ್ರೆಗೆ ಬಂದಿದ್ದು, ಆಸ್ಪತ್ರೆಯಲ್ಲಿ ಎಕ್ಸ್​ರೇ ಮಾಡಿದಾಗ ಲೋಟ ಸಿಲುಕಿರುವುದು ಪತ್ತೆಯಾಗಿದೆ. ಸದ್ಯ ವೃದ್ಧ ರಾಮದಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ವೃದ್ಧನ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಈ ಲೋಟ ಹೊಟ್ಟೆಯೊಳಗೆ ಸೇರಿದ್ದು ಹೇಗೆ?: ಕಳೆದ ನಾಲ್ಕು ತಿಂಗಳ ಹಿಂದೆ ಈ ವೃದ್ಧ ಯಾವುದೋ ಗಲಾಟೆಯಲ್ಲಿ ತೊಡಗಿಸಿದ್ದರು. ಈ ವೇಳೆ ಕೆಲವರು ಆತನನ್ನು ವಿವಸ್ತ್ರಗೊಳಿಸಿ ಥಳಿಸಿ, ಲೋಟದ ಮೇಲೆ ಕೂರಿಸಿದ್ದರು. ಇದರಿಂದ ಲೋಟವು ಗುಪ್ತಾಂಗದ ಮೂಲಕ ಹೊಟ್ಟೆಯೊಳಗೆ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಈ ವಿಷಯವನ್ನು ವೃದ್ಧ ಭಯ ಮತ್ತು ಅವಮಾನದಿಂದ ಯಾರಿಗೂ ತಿಳಿಸಿರಲಿಲ್ಲ. ಈಗ ನೋವು ನಿರಂತರವಾಗಿ ಹೆಚ್ಚಾದ ಕಾರಣ ಆ ನೋವು ತಾಳದೇ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಗ್ರಾಮದ ಜನರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗ ಹೊಟ್ಟೆಯಲ್ಲಿ ಲೋಟ ಸಿಲುಕಿರುವುದು ಪತ್ತೆಯಾಗಿದೆ.

ಆದರೆ, ವೃದ್ಧನ ಮೇಲೆ ಹಲ್ಲೆ ನಡೆಸಿದವರು ಯಾರು ಎಂಬುವುದು ಇನ್ನೂ ಗೊತ್ತಾಗಿಲ್ಲ. ಗಲಾಟೆ ಸಂದರ್ಭದಲ್ಲಿ ಲೋಟ ಹೊಟ್ಟೆಯೊಳಗೆ ಸೇರಿದೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಹಿಮಪಾತ ದುರಂತ: 7 ಪರ್ವತಾರೋಹಿಗಳ ದುರ್ಮರಣ, ಇನ್ನೂ 25 ಜನರು ನಾಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.