ETV Bharat / bharat

ಅಪಹರಣಗೊಂಡಿದ್ದ 38 ಮಹಿಳೆಯರು, ಮಕ್ಕಳನ್ನು ರಕ್ಷಿಸಿದ ಪೊಲೀಸರು - ಅಪಹರಣಗೊಂಡಿದ್ದ ಮಕ್ಕಳ ರಕ್ಷಣೆ

100 ಜನರಿಂದ ಅಪಹರಿಸಲ್ಪಟ್ಟ 38 ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ರಾಜಸ್ಥಾನ ಪೊಲೀಸರು ಮಾಹಿತಿ ನೀಡಿದ್ದಾರೆ.

Police rescue 38 kidnapped women, children
ಅಪಹರಣಗೊಂಡಿದ್ದ ಮಹಿಳೆಯರ ರಕ್ಷಣೆ
author img

By

Published : Jan 7, 2021, 8:03 AM IST

ಝಾಲವರ್​​ (ರಾಜಸ್ಥಾನ): ಝಾಲವರ್‌ನ ಉನ್ಹೆರ್ ಪೊಲೀಸ್ ಠಾಣೆ ಪ್ರದೇಶದ ಬಾಮನ್ ದೇವರಿಯನ್ ಗ್ರಾಮದಲ್ಲಿ ಸುಮಾರು 100 ಜನರಿಂದ ಅಪಹರಿಸಲ್ಪಟ್ಟ 38 ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ರಾಜಸ್ಥಾನ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ, ಎಸ್ಪಿ ಡಾ. ಕಿರಣ್ ಕಾಂಗ್ ಸಿಂಧು, ಕತ್ತಿಗಳು ಮತ್ತು ಇತರ ಶಸ್ತ್ರಾಸ್ತ್ರಗಳೊಂದಿಗೆ ಸುಮಾರು 100 ಜನರು ಗ್ರಾಮಕ್ಕೆ ಬಂದು ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿದ್ದಾರೆ ಎಂದು ಹೇಳಿದರು.

  • Rajasthan: About 100 people from Ratlam district of Madhya Pradesh allegedly kidnapped 38 people, including women & children from a village in Jhalawar district. "All of them have been rescued and 6 people have been detained," said SP Kiran Kang Sidhu. (06.01.2021) pic.twitter.com/voCxADzBc2

    — ANI (@ANI) January 7, 2021 " class="align-text-top noRightClick twitterSection" data=" ">

ರಾಜಸ್ಥಾನದ ಝಾಲವರ್​ನಲ್ಲಿರುವ ಉನ್ಹೆರ್ ಪೊಲೀಸ್ ಠಾಣೆ ಪ್ರದೇಶದ ಬಾಮನ್ ದೇವರಿಯನ್ ಗ್ರಾಮಕ್ಕೆ ಸುಮಾರು 100 ಜನರು ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ಅವರು ಮಧ್ಯಪ್ರದೇಶದ ರತ್ನಂ ಜಿಲ್ಲೆಯ ಅಲೋಟ್ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಬಸ್ ಮತ್ತು ಇತರ ವಾಹನಗಳಲ್ಲಿ ಬಂದಿದ್ದರು. ಅವರ ಬಳಿ ಚಾಕು ಮತ್ತು ಕತ್ತಿ ಸೇರಿದಂತೆ ಶಸ್ತ್ರಾಸ್ತ್ರಗಳಿದ್ದು, ಬಾಮನ್ ದೇವರಿಯನ್ ಗ್ರಾಮದಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿದ್ದಾರೆ" ಎಂದು ಸಿಂಧು ಹೇಳಿದ್ದಾರೆ.

ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ 38 ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರು ಜನರು ಮತ್ತು ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪರಾರಿಯಾಗಿರುವ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.