ETV Bharat / bharat

ಶಾಸಕರಿಗೆ ದುಬಾರಿ ಐಫೋನ್​ ಗಿಫ್ಟ್​ ನೀಡಿದ ರಾಜಸ್ತಾನ ಸರ್ಕಾರ: ವಾಪಸ್​ ನೀಡಲು ಬಿಜೆಪಿಗರ ನಿರ್ಧಾರ - ಕಾಗದರಹಿತ ಸದನಕ್ಕಾಗಿ ಶಾಸಕರಿಗೆ ಐಫೋನ್​ ಗಿಫ್ಟ್​

ರಾಜಸ್ತಾನ ವಿಧಾನಸಭೆ ಕಾಗದರಹಿತವಾಗಿ ನಡೆಯುತ್ತಿದ್ದು, ಸದನದ ಸದಸ್ಯರನ್ನು ಹೈಟೆಕ್​ ಮಾಡುವ ಉದ್ದೇಶದಿಂದ ಸ್ಮಾರ್ಟ್​ಫೋನ್​ಗಳನ್ನು ನೀಡಲಾಗಿದೆ ಎಂದು ಸರ್ಕಾರದ ಸಚಿವರೊಬ್ಬರು ಈ ಬಗ್ಗೆ ತಿಳಿಸಿದ್ದಾರೆ.

Rajasthan govt
ಐಫೋನ್​ ಗಿಫ್ಟ್
author img

By

Published : Feb 24, 2022, 8:50 AM IST

ಜೈಪುರ(ರಾಜಸ್ತಾನ): ರಾಜಸ್ತಾನ ಸರ್ಕಾರ ಎಲ್ಲಾ 200 ಶಾಸಕರಿಗೆ ದುಬಾರಿ ಮೊತ್ತದ ಐಫೋನ್​ ಮೊಬೈಲ್​ ಉಡುಗೊರೆಯಾಗಿ ನೀಡಿದೆ. ಆದರೆ, ರಾಜ್ಯದ ಬಿಜೆಪಿ ಶಾಸಕರು ಸರ್ಕಾರದ ಈ ಉಡುಗೊರೆಯನ್ನು ವಾಪಸ್​ ನೀಡಲು ಮುಂದಾಗಿದ್ದಾರೆ.

ವಿಧಾನಸಭೆ ಕಾಗದರಹಿತವಾಗಿ ಮಾಡಲು, ಕಾಂಗ್ರೆಸ್​ ಸರ್ಕಾರ ಬಜೆಟ್​ ಮಂಡನೆಯ ವೇಳೆ ನೆರವಾಗಲು ಎಲ್ಲಾ ಶಾಸಕರಿಗೆ ಐಫೋನ್​ ನೀಡಿದೆ. ಆದರೆ, ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಶಾಸಕರು ದುಬಾರಿ ಐಫೋನ್​ ಅನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರು ನಿನ್ನೆಯಷ್ಟೇ (ಬುಧವಾರ) ಬಜೆಟ್ ಮಂಡಿಸಿದ ಬಳಿಕ ಸದನದ ಎಲ್ಲಾ ಶಾಸಕರಿಗೆ 70 ಸಾವಿರ ರೂಪಾಯಿ ಮೌಲ್ಯದ ಐಫೋನ್​ 13 ಮೊಬೈಲ್​ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ರಾಜಸ್ತಾನ ವಿಧಾನಸಭೆ ಕಾಗದರಹಿತವಾಗಿ ನಡೆಯುತ್ತಿದ್ದು, ಸದನದ ಸದಸ್ಯರನ್ನು ಹೈಟೆಕ್​ ಮಾಡುವ ಉದ್ದೇಶದಿಂದ ಸ್ಮಾರ್ಟ್​ಫೋನ್​ಗಳನ್ನು ನೀಡಲಾಗಿದೆ ಎಂದು ಸರ್ಕಾರದ ಸಚಿವರೊಬ್ಬರು ಈ ಬಗ್ಗೆ ತಿಳಿಸಿದ್ದಾರೆ.

ಆದರೆ, ಪ್ರತಿಪಕ್ಷ ಬಿಜೆಪಿ ರಾಜ್ಯ ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವಾಗ ಜನಪ್ರತಿನಿಧಿಗಳು ದುಬಾರಿ ಮೊಬೈಲ್​ ಬಳಕೆ ಮಾಡುವುದು ಸರಿಯಲ್ಲ ಎಂದು ಸರ್ಕಾರದ ನಡೆಯನ್ನು ಟೀಕಿಸಿದೆ.

ಅಲ್ಲದೇ ಈ ಬಗ್ಗೆ ಟ್ವೀಟ್​ ಮಾಡಿರುವ ರಾಜ್ಯ ಬಿಜೆಪಿ, 'ಸರ್ಕಾರದ ಕಾಗದರಹಿತ ಮತ್ತು ಹೈಟೆಕ್​ ಆಗಿರುವುದು ಸ್ವಾಗತಾರ್ಹ. ಆದರೆ, ರಾಜ್ಯದ ಆರ್ಥಿತೆ ಕಳಪೆ ಸ್ಥಿತಿಯಲ್ಲಿದ್ದು, ಇಷ್ಟು ದುಬಾರಿ ಮೊತ್ತದ ಮೊಬೈಲ್​ ಖರೀದಿ ಮಾಡಿದ್ದು ಸರಿಯಲ್ಲ. ಹೀಗಾಗಿ 71 ಬಿಜೆಪಿ ಶಾಸಕರು ಸರ್ಕಾರದ ಉಡುಗೊರೆಯನ್ನು ವಾಪಸ್​ ನೀಡಲಿದ್ದಾರೆ' ಎಂದು ತಿಳಿಸಿದೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಳೆದ ವರ್ಷ ಬಜೆಟ್ ಮಂಡನೆ ಬಳಿಕ ಎಲ್ಲಾ 200 ಶಾಸಕರಿಗೆ ಐ-ಪ್ಯಾಡ್‌ ಉಡುಗೊರೆಯಾಗಿ ನೀಡಿದ್ದರು.

ಇದನ್ನೂ ಓದಿ: 'ದೇಶಭಕ್ತ ಹರ್ಷನ ಮನೆಗೆ ಬಂದು ಸಾಂತ್ವನ ಹೇಳುವಷ್ಟು ಪುರುಸೊತ್ತು ಕಾಂಗ್ರೆಸ್‌ ನಾಯಕರಿಗೆ ಇಲ್ಲ'

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.