ಜೈಪುರ: ಹಳ್ಳಿಯಿಂದ 13-14 ಕಿಮೀ ದೂರ ಹೋಗಿ ಗ್ರಂಥಾಲಯದಲ್ಲಿ ಓದುವುದಕ್ಕೆ ಕುಟುಂಬದಿಂದ ಅನುಮತಿ ಸಿಗದ ಕಾರಣ ತನ್ನೂರಿನಲ್ಲೇ ಒಂದು ಪುಟ್ಟ ಗ್ರಂಥಾಯವನ್ನು ನಿರ್ಮಿಸಿ, ಅಲ್ಲಿನ ಮಹಿಳೆಯರ ವಿದ್ಯಾರ್ಜನೆಗೆ ಬಾಲಕಿಯೊಬ್ಬಳು ನೆರವಾಗಿದ್ದಾಳೆ.
ರಾಜಸ್ಥಾನದ ಜೈಪುರದ ಹತ್ತಿರದ ಬಾಸ್ಸಿ ಎಂಬ ಹಳ್ಳಿಯ ಕವಿತಾ ರಾಣಿ ಎಂಬ ಬಾಲಕಿಗೆ ಪುಸ್ತಕಗಳನ್ನು ಓದುವ ಆಸೆ. ಊರಿನ ಗ್ರಂಥಾಲಯದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಆದರೆ ಹತ್ತಿರದ ಗ್ರಂಥಾಲಯಕ್ಕೆ ತನ್ನ ಹಳ್ಳಿಯಿಂದ 13-14 ಕಿಲೋಮೀಟರ್ ಪ್ರಯಾಣಿಸಬೇಕು. ಪ್ರಯಾಣದ ವೇಳೆ ಕಿರುಕುಳಕ್ಕೆ ಒಳಗಾಗಬಹುದೆಂಬ ಭಯದಿಂದ ಪೋಷಕರು ಪಕ್ಕದೂರಿಗೆ ಕಳುಹಿಸಲು ಒಪ್ಪದ ಕಾರಣ ಆ ಬಾಲಕಿ ತನ್ನ ಹಳ್ಳಿಯಲ್ಲೇ ಒಂದು ಗ್ರಂಥಾಯಲವನ್ನು ಸ್ಥಾಪಿಸಿದ್ದು, ಓದಲು ಇಚ್ಛಿಸುವ ತನ್ನಂತಹ ಬಾಲಕಿಯರಿಗೆ ನೆರವಾಗಿದ್ದಾಳೆ.
" ನನ್ಮ ಊರಿನಲ್ಲಿ ಮಹಿಳೆಯರಿಗೆ ಗ್ರಂಥಾಲಯಕ್ಕೆ ಪ್ರವೇಶವಿರಲಿಲ್ಲ. ಹತ್ತಿರದ ಲೈಬ್ರರಿ ಇಲ್ಲಿಂದ 13-14 ಕಿಮೀ ಇದೆ. ಓದುವುದಕ್ಕಾಗಿ ಅಷ್ಟು ದೂರ ಪ್ರಯಾಣಿಸಬೇಕಾಗಿತ್ತು. ಆದರೆ ಮನೆಯಲ್ಲಿ ಹುಡುಗಿಯರು ಪ್ರಯಾಣದ ವೇಳೆ ಕಿರುಕುಳಕ್ಕೆ ಒಳಗಾಗಬಹುದು ಎಂದು ಅನುಮತಿ ನೀಡುತ್ತಿರಲಿಲ್ಲ. ಈ ಕಾರಣದಿಂದ ಈ ಗ್ರಂಥಾಲಯವನ್ನು ನಾನು ಪ್ರಾರಂಭಿಸಿದ್ದೇನೆ" ಎಂದು ಕವಿತಾ ರಾಣಿ ಹೇಳಿದ್ದಾರೆ.
" ಪ್ರಸ್ತುತ ಈ ಗ್ರಂಥಾಲಯದಲ್ಲಿ 398 ಪುಸ್ತಕಗಳಿವೆ. ಬೆಳಿಗೆ 9ರಿಂದ ಸಂಜೆ 5ರವರೆಗೆ ಪುಸ್ತಕಗಳನ್ನು ಓದುವುದಕ್ಕೆ ಗ್ರಂಥಾಲಯ ತೆರೆದಿರುತ್ತದೆ" ಎಂದು ಕವಿತಾ ತಿಳಿಸಿದ್ದಾರೆ.
ಇದನ್ನೂ ಓದಿ:ಏನ್ ಗಟ್ಟಿರೀ ಈಕೆ.. ವಯಸ್ಸು 81 ಆದ್ರೂ ಕೆಲಸಕ್ಕೆಂದು 22 ಕಿ.ಮೀ ಸೈಕಲ್ ತುಳಿಯುವ ಅಜ್ಜಿ!