ಮೆಹಸಾನ(ಗುಜರಾತ್) : ಕಾಂಗ್ರೆಸ್ ವತಿಯಿಂದ ಸೋಮವಾರದಂದು ಮೆಹಸಾನದಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು. ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಂದರ್ಭದಲ್ಲಿ ಗೂಳಿಯೊಂದು ಸಭೆಯ ಸ್ಥಳಕ್ಕೆ ನುಗ್ಗಿದೆ.
ಮೆಹ್ಸಾನಾದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರ ಭಾಷಣ ಮಾಡುತ್ತಿರುವ ಸಮಯದಲ್ಲಿ ಗೂಳಿಯೊಂದು ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶಿಸಿತು. ಸಭೆಯ ನುಡವೆ ಗೂಳಿ ಬಂದ ತಕ್ಷಣ ಜನರು ಕಂಗಾಲಾಗಿ ಹೋದರು. ಅದೃಷ್ಟವಶಾತ್, ಗೂಳಿ ಸ್ಥಳದಿಂದ ಹೊರಬಂದಾಗ ಯಾವುದೇ ಗಂಭೀರ ಘಟನೆಗಳು ಸಂಭವಿಸಲಿಲ್ಲ. ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್ ಗೂಳಿಯನ್ನು ಕಳುಹಿಸಿದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದರು.
ನಗರಸಭೆಯ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದರು. ಪ್ರತಿಪಕ್ಷದ ನಾಯಕ ಕಮಲೇಶ್ ಸುತಾರಿಯಾ ಅವರು ಪ್ರಾಣಿಗಳನ್ನು ಮುಟ್ಟುಗೋಲು ಹಾಕುವ ಅಧಿಕಾರಿ ಮತ್ತು ಏಜೆನ್ಸಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಪೌರಾಡಳಿತ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯ: ಮೆಹಸಾನ ಪುರಸಭೆಯಲ್ಲಿ ವಿಷಯ ಮಂಡಿಸಿದ ವಿಪಕ್ಷ ನಾಯಕ ಕಮಲೇಶ್ ಸುತಾರಿಯಾ ಮಾತನಾಡಿ, ಕಾಂಗ್ರೆಸ್ ಸಭೆಗೆ ಗೂಳಿ ನುಗ್ಗಿದ ವಿಚಾರ ಅತ್ಯಂತ ಗಂಭೀರವಾಗಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಆದರೆ, ಮೆಹಸಾನ ಪುರಸಭೆಯಿಂದ ದನಗಳನ್ನು ಹಿಡಿಯುವ ಕೆಲಸ ಸರಿಯಾಗಿ ನಡೆಯುತ್ತಿಲ್ಲ, ಕಾಂಗ್ರೆಸ್ ನ ವಿಶೇಷ ರಾಷ್ಟ್ರೀಯ ಮುಖಂಡರ ಸಭೆಯ ಬಗ್ಗೆ ಪೂರ್ವ ಮಾಹಿತಿ ಇದ್ದರೂ ಜಾನುವಾರು ಹಿಡಿಯುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಪ್ರಾಣಿ ಹಿಡಿಯುವ ಕಾರ್ಯಾಚರಣೆಗೆ ಕಾರಣರಾದ ಅಧಿಕಾರಿ ಮತ್ತು ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಅಧಿಕಾರಿಗೆ ಆಗ್ರಹಿಸಿದರು.
ಇದನ್ನೂ ಓದಿ: ಗುಜರಾತ್ನಲ್ಲಿ ಬಿಜೆಪಿ ಪ್ರಚಾರ ಅಬ್ಬರ.. ಮತದಾರರನ್ನು ಆಕರ್ಷಿಸಿದ ಮೋದಿ ತದ್ರೂಪಿ ಲಾಲ್ಜಿ ದೇವಾರಿಯಾ