ETV Bharat / bharat

ಪ್ರಿಯತಮೆಯ ಭೇಟಿಗೆ ಹೋಗಿ ಪಾಕ್​ ಪ್ರವೇಶಿಸಿದ್ದ ರಾಜಸ್ಥಾನಿ ಯುವಕ: ಪ್ರೇಮಿಗಳ ದಿನವೇ ತಾಯ್ನಾಡಿಗೆ ವಾಪಸ್​! - ಗಡಿ ಭದ್ರತಾ ಪಡೆ

ಇಂದು ಪ್ರೇಮಿಗಳ ದಿನ. ಈ ದಿನವನ್ನು ಅನೇಕರು ವಿಶೇಷವಾಗಿ ಆಚರಿಸಿದ್ದಾರೆ. ಆದರೆ, ರಾಜಸ್ಥಾನದ ಯುವಕನಿಗೆ ಈ ದಿನ ಎಂದಿಗೂ ಮರೆಯಲು ಆಗುವುದಿಲ್ಲ. ಯಾಕೆಂದರೆ, ಎರಡು ವರ್ಷಗಳ ಹಿಂದೆ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಭೇಟಿ ಮಾಡಲು ಹೋಗಿದ್ದ ಈ ಯುವಕ ತಪ್ಪಿ ಪಾಕಿಸ್ತಾನಕ್ಕೆ ಪ್ರವೇಶಿಸಿದ್ದ. ಅಲ್ಲಿಂದ ಶತ್ರು ನೆಲದಲ್ಲೇ ಇದ್ದ ಆತ ಪ್ರೇಮಿಗಳ ದಿನವೇ ತನ್ನ ತಾಯ್ನಾಡಿಗೆ ವಾಪಸ್​ ಆಗಿದ್ದಾನೆ.

rajasthan-boy-who-entered-pak-border-returns-to-india
ಪ್ರಿಯತಮೆಯ ಭೇಟಿ ಹೋಗಿ ಪಾಕ್​ ಪ್ರವೇಶಿಸಿದ್ದ ರಾಜಸ್ಥಾನಿ ಯುವಕ: ಪ್ರೇಮಿಗಳ ದಿನವೇ ತಾಯ್ನಾಡಿಗೆ ವಾಪಸ್
author img

By

Published : Feb 14, 2023, 8:32 PM IST

Updated : Feb 14, 2023, 8:39 PM IST

ಬಾರ್ಮರ್ (ರಾಜಸ್ಥಾನ): ಆಕಸ್ಮಿಕವಾಗಿ ಭಾರತದ ಗಡಿ ಪಾಕಿಸ್ತಾನಕ್ಕೆ ಪ್ರವೇಶಿಸಿದ್ದ ರಾಜಸ್ಥಾನದ ಬಾರ್ಮರ್​ ಮೂಲದ ಗೆಮಾರ ರಾಮ್ ಮೇಘವಾಲ್ ಎಂಬ ಯುವಕ 28 ತಿಂಗಳ ಬಳಿಕ ತಾಯ್ನಾಡಿಗೆ ಮರಳಲಿದ್ದಾರೆ. ಇಂದು ಪಾಕಿಸ್ತಾನದ ಅಧಿಕಾರಿಗಳು ರಾಮ್​ನನ್ನು ಭಾರತಕ್ಕೆ ಹಸ್ತಾಂತರಿಸಿದ್ದು, ಪಂಜಾಬ್​ನ ವಾಘಾ ಗಡಿ ಮೂಲಕ ತವರಿಗೆ ಬಂದಿದ್ದಾರೆ.

2020ರ ನವೆಂಬರ್​ 5ರಂದು ಜೀವಭಯದಲ್ಲಿ ಗೆಮಾರ ರಾಮ್ ಭಾರತದ ಗಡಿ ದಾಟಿ ಪಾಕಿಸ್ತಾನ ಗಡಿದ ಪ್ರವೇಶಿಸಿದ್ದರು. ಇದಾದ ಹತ್ತು ದಿನಗಳ ನಂತರ ಈತ ಅಂತಾರಾಷ್ಟ್ರೀಯ ಗಡಿ ಗಡಿದಾಟಿ ಹೋಗಿರುವುದು ಖಚಿತವಾಗಿತ್ತು. ಮತ್ತೊಂದೆಡೆ, ಪಾಕಿಸ್ತಾನವು ಗೆಮಾರ ರಾಮ್​ನ್ನು ತನ್ನ ವಶಕ್ಕೆ ಪಡೆದಿತ್ತು. ಅಲ್ಲದೇ, 2021ರ ಜನವರಿ 24ರಿಂದ ಪಾಕಿಸ್ತಾನದ ಹೈದರಾಬಾದ್​ ಜೈಲಿನಲ್ಲಿ ಇರಿಸಲಾಗಿತ್ತು.

ರಾಜಸ್ಥಾನದ ಬಾರ್ಮರ್​ನ ಗೆಮಾರ ರಾಮ್ ಮೇಘವಾಲ್ ಕುಟುಂಬ

ಈ ವಿಷಯವನ್ನು ಪಾಕಿಸ್ತಾನವು ಭಾರತದ ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಇದರ ಬಳಿಕ ಕುಟುಂಬಸ್ಥರು ತಮ್ಮ ಮಗನನ್ನು ತವರು ರಾಷ್ಟ್ರಕ್ಕೆ ಮರಳಿ ಕರೆತರುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು. ಜೊತೆಗೆ ಕೇಂದ್ರ ಸಚಿವ ಕೈಲಾಶ್ ಚೌಧರಿ, ಮಾಜಿ ಸಂಸದ ಕರ್ನಲ್ ಮಾನವೇಂದ್ರ ಸಿಂಗ್ ಸೇರಿದಂತೆ ಹಲವು ಜನಪ್ರತಿನಿಧಿಗಳನ್ನು ಸಂಪರ್ಕಿಸಿದ್ದರು. ಗೆಮಾರ ರಾಮ್​ ಕುರಿತು ಸರ್ಕಾರಕ್ಕೆ ಜನಪ್ರತಿನಿಧಿಗಳು ಸಹ ಪತ್ರ ಬರೆದಿದ್ದರು.

ಇದಾದ ನಂತರ ಗೆಮಾರ ರಾಮ್ ಬಿಡುಗಡೆ ಮತ್ತು ಸುರಕ್ಷಿತವಾಗಿ ಭಾರತಕ್ಕೆ ಮರಳಲು ಪ್ರಯತ್ನಗಳು ಪ್ರಾರಂಭವಾಗಿದ್ದವು. ಆಗ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನಿರಂತರವಾಗಿ ಮಾತುಕತೆ ಸಹ ನಡೆಸಲಾಗಿತ್ತು. ಇದೀಗ ಗೆಮಾರ ರಾಮ್​ ಮೇಘವಾಲ್ ಭಾರತಕ್ಕೆ ಮರಳಿ ಬಂದಿದ್ದಾರೆ.

ಸತತ ಪ್ರಯತ್ನಕ್ಕೆ ಸಿಕ್ಕ ಫಲ: ಈ ಕುರಿತು ಟ್ವೀಟ್​ ಮಾಡಿದ್ದ ಕೇಂದ್ರ ಸಚಿವ ಕೈಲಾಶ್ ಚೌಧರಿ, ಎರಡು ವರ್ಷಗಳ ಹಿಂದೆ ನನ್ನ ಸಂಸದೀಯ ಕ್ಷೇತ್ರ ಬಾರ್ಮರ್‌ನ ಗಡಿ ಪ್ರದೇಶದ ಯುವಕ ಗೆಮಾರ ರಾಮ್ ಮೇಘವಾಲ್ ತಪ್ಪಿ ಅಂತಾರಾಷ್ಟ್ರೀಯ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದ. ಅವರನ್ನು ಭಾರತಕ್ಕೆ ಕರೆತರಲು ಸತತವಾಗಿ ಪ್ರಯತ್ನ ಮಾಡಲಾಗಿತ್ತು. ಇದರ ಫಲವಾಗಿ ಇಂದು ಗೆಮಾರ ರಾಮ್ ಬಿಡುಗಡೆಯಾಗಿ, ಸುರಕ್ಷಿತವಾಗಿ ಭಾರತಕ್ಕೆ ಮರಳುವ ಖುಷಿ ಸುದ್ದಿ ದೊರೆತಿದೆ ಎಂದು ತಿಳಿಸಿದ್ದರು.

  • संसदीय क्षेत्र बाड़मेर के सीमावर्ती क्षेत्र का युवक गेमराराम मेघवाल दो साल पहले भूलवश अंतरराष्ट्रीय सीमा को पार कर पाकिस्तान चला गया था। उसकी भारत वापसी को लेकर लगातार प्रयासरत रहने के परिणामस्वरूप आज गेमराराम की रिहाई और सुरक्षित भारत वापसी सुनिश्चित होने का सुखद समाचार मिला है। pic.twitter.com/yvPGIYW0RQ

    — Kailash Choudhary (@KailashBaytu) February 14, 2023 " class="align-text-top noRightClick twitterSection" data=" ">

ಅಲ್ಲದೇ, ಗೆಮಾರ ರಾಮ್​ ಯುವಕನಾಗಿದ್ದು, ಅವರ ಕುಟುಂಬವು ಬಡತನದಿಂದ ಕೂಡಿದೆ. ಭಾರತಕ್ಕೆ ರಾಮ್​ ಮರಳುವುದು ಅತ್ಯಂತ ಅಗತ್ಯವಾಗಿತ್ತು ಎಂದು ಸಚಿವ ಚೌಧರಿ ಹೇಳಿದ್ದು, ಪಾಕಿಸ್ತಾನದಿಂದ ಭಾರತಕ್ಕೆ ಮರಳಿಸುವ ಕರೆತರುವಲ್ಲಿ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಪ್ರೇಮಿಗಳ ದಿನವೇ ಪ್ರಿಯಕರ ವಾಪಸ್​: ಬಾರ್ಮರ್​ನ ಗೆಮಾರ ರಾಮ್ ಮೇಘವಾಲ್ ತಮ್ಮ ಮನೆಯ ಪಕ್ಕದ ಯುವತಿಯನ್ನು ಪ್ರೀತಿಸುತ್ತಿದ್ದ. ಈ ನಡುವೆ 2020ರ ನವೆಂಬರ್​ 4ರಂದು ರಾತ್ರಿ ಪ್ರಿಯತಮೆಯನ್ನು ಭೇಟಿ ಮಾಡಲೆಂದು ಆಕೆಯ ಮನೆಗೆ ತೆರಳಿದ್ದ. ಅಷ್ಟರಲ್ಲಿ ಪ್ರಿಯತಮೆಯ ಕುಟುಂಬಸ್ಥರು ಗೆಮಾರ ರಾಮ್​ನನ್ನು ನೋಡಿದ್ದರು. ಆದ್ದರಿಂದ ಯುವತಿಯ ಕುಟುಂಬದವರ ಕೈಯಲ್ಲಿ ಸಿಕ್ಕಿ ಬೀಳುವ ಭಯದಲ್ಲಿ ಅಲ್ಲಿಂದ ಓಡಿ ಬಂದಿದ್ದ. ಹಾಗೆ, ಭಯದಲ್ಲಿ ಭಾರತದ ಬ್ಯಾರಿಕೇಡ್​ ದಾಟಿ ಪಾಕಿಸ್ತಾನಕ್ಕೆ ಪ್ರವೇಶಿಸಿ ಬಿಟ್ಟಿದ್ದ. ವಿಶೇಷ ಎಂದರೆ ಈ ಪ್ರೇಮಿಗಳ ದಿನದಂದೇ ಗೆಮಾರ ರಾಮ್​ ತವರಿಗೆ ಮರಳಿದ್ದಾರೆ.

ಇದನ್ನೂ ಓದಿ: ನವೆಂಬರ್​ನಲ್ಲಿ ನಾಪತ್ತೆಯಾಗಿದ್ದ ಭಾರತದ ಯುವಕ ಪಾಕ್​ನಲ್ಲಿ ಪತ್ತೆ..!

Last Updated : Feb 14, 2023, 8:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.