ETV Bharat / bharat

ರಾಜಸ್ಥಾನ ಚುನಾವಣೆ: 199 ಕ್ಷೇತ್ರಗಳಿಗೆ ಶೇ.68ರಷ್ಟು ಮತದಾನ, ಕಳೆದ ಬಾರಿಗಿಂತ ಕಡಿಮೆ ವೋಟಿಂಗ್​ - ಕಾಂಗ್ರೆಸ್

Rajasthan Assembly polls: ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಿಗೆ ಶನಿವಾರ ಮತದಾನ ಮುಕ್ತಾಯವಾಗಿದೆ. ಸಂಜೆ 5 ಗಂಟೆಯವರೆಗೆ ಶೇ.68.24ರಷ್ಟು ಮತದಾನ ಜರುಗಿದೆ.

Rajasthan Assembly polls: Over 68 pc voting, stray incidents of violence
ರಾಜಸ್ಥಾನ ಚುನಾವಣೆ: 199 ಕ್ಷೇತ್ರಗಳಿಗೆ ಶೇ.68ರಷ್ಟು ಮತದಾನ
author img

By ETV Bharat Karnataka Team

Published : Nov 25, 2023, 9:57 PM IST

ಜೈಪುರ (ರಾಜಸ್ಥಾನ): ಶನಿವಾರ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಸಂಜೆ 5 ಗಂಟೆಯವರೆಗೆ ಶೇ.68.24ರಷ್ಟು ಮತದಾನವಾಗಿದೆ. ಕೆಲವು ಹಿಂಸಾಚಾರದ ಘಟನೆಗಳನ್ನು ಹೊರತುಪಡಿಸಿ ಮತದಾನ ಶಾಂತಿಯುತವಾಗಿ ಜರುಗಿದೆ. ದತ್ತಾಂಶ ಸಂಗ್ರಹಿಸಿದ ನಂತರ ಅಂತಿಮ ಮತದಾನದ ಅಂಕಿ -ಅಂಶ ಲಭ್ಯವಾಗಲಿದೆ. ಆದರೆ, ಸದ್ಯದ ಮಾಹಿತಿ ಪ್ರಕಾರ, ಕಳೆದ ಬಾರಿಗೆ ಹೋಲಿಕೆ ಮಾಡಿದರೆ, ಶೇ.6ರಷ್ಟು ಮತದಾನದ ಪ್ರಮಾಣ ಕಡಿಮೆಯಾಗಿದೆ.

ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಿಗೆ ಮತದಾನ ಜರುಗಿತು. 51 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ. ಶ್ರೀಗಂಗಾನಗರ ಜಿಲ್ಲೆಯ ಕರಣಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕುನ್ನಾರ್ ನಿಧನದ ಹಿನ್ನೆಲೆಯಲ್ಲಿ ಅಲ್ಲಿ ಮಾತ್ರ ಚುನಾವಣೆ ಮುಂದೂಡಲಾಗಿದೆ.

ಮರುಭೂಮಿ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ಆಡಳಿತ ಬದಲಾವಣೆ ಮಾಡುವ ವಾಡಿಕೆಯನ್ನು ಇಲ್ಲಿನ ಮತದಾರರು ಹೊಂದಿದ್ದಾರೆ. ಈ ಬಾರಿ ವಾಡಿಕೆಯನ್ನು ಮುರಿದು ಮತ್ತೊಮ್ಮೆ ಅಧಿಕಾರಕ್ಕೆ ಬರುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ. ಆದರೆ, ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಮರಳುವ ನಿರೀಕ್ಷೆಯಲ್ಲಿ ಇದೆ.

ಕಳೆದ ಬಾರಿಕ್ಕಿಂತ ಕಡಿಮೆ ಮತದಾನ: ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ.74.06ರಷ್ಟು ಮತದಾನವಾಗಿತ್ತು. ಆದರೆ, ಈ ಬಾರಿ ಸಂಜೆ 5 ಗಂಟೆಯವರೆಗೆ ಶೇ.68.24ರಷ್ಟು ಮತದಾನ ವರದಿಯಾಗಿದೆ. ಹೀಗಾಗಿ ಕಳೆದ ಬಾರಿಗೆ ಹೋಲಿಕೆ ಮಾಡಿದರೆ, ಶೇ.6ರಷ್ಟು ಮತದಾನದ ಪ್ರಮಾಣ ಕಡಿಮೆಯಾಗಿದೆ. ಈ ಬಾರಿ ಪ್ರತಿ ಕ್ಷೇತ್ರದಲ್ಲಿ ಕನಿಷ್ಠ ಶೇ.75ರಷ್ಟು ಮತದಾನವಾಗುವಂತೆ ಚುನಾವಣಾ ಆಯೋಗ ಗುರಿ ಹಾಕಿಕೊಂಡಿತ್ತು. ಜೈಸಲ್ಮೇರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ನಂತರ ಹನುಮಾನ್‌ಗಢ ಮತ್ತು ಧೋಲ್‌ಪುರ್ ಜಿಲ್ಲೆಗಳಲ್ಲಿ ಹೆಚ್ಚಿನ ಮತದಾನವಾಗಿದೆ.

ಗಮನ ಸೆಳೆದ ಘಟನಾವಳಿಗಳು: ರಾಜ್ಯಾದ್ಯಂತ ಮತದಾನ ಪ್ರಕ್ರಿಯೆಯಲ್ಲಿ ಬೆಳಗ್ಗೆಯಿಂದ ಮತದಾರರು ಹುಮ್ಮಸ್ಸಿನಿಂದ ಪಾಲ್ಗೊಂಡರು. ಯುವಕರು, ಮಹಿಳೆಯರು ಹಾಗೂ ವೃದ್ಧರು ಹೀಗೆ.. ಎಲ್ಲರೂ ಮತಗಟ್ಟೆಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ತಮ್ಮ ಮತ ಹಕ್ಕು ಚಲಾಯಿಸಿದರು. ಮದುವೆ ವಸ್ತ್ರದಲ್ಲೇ ಜೋಡಿಗಳು ಮತ ಚಲಾವಣೆ ಮಾಡಿದರೆ, ಮತದಾನ ಮಾಡಲೆಂದೇ ವಿದೇಶದಿಂದ ದಂಪತಿ ಬಂದು ಗಮನ ಸೆಳೆದರು. ಇದರ ನಡುವೆ ಕೆಲವು ಹಿಂಸಾಚಾರದ ಘಟನೆಗಳು ವರದಿಯಾಗಿದೆ.

ಇದನ್ನೂ ಓದಿ: ಬಿಆರ್​ಎಸ್, ಕಾಂಗ್ರೆಸ್​ನಿಂದ ಜನತೆ ಮುಕ್ತಿ ಬಯಸಿದ್ದಾರೆ, ತೆಲಂಗಾಣದಲ್ಲಿ ಬಿಜೆಪಿ ಗೆಲ್ಲಲಿದೆ: ಪಿಎಂ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.