ETV Bharat / bharat

ರಾಜ್ ಠಾಕ್ರೆಗೆ ಕೋವಿಡ್​​ ಸೋಂಕು: ಇಂದು ನಡೆಯಬೇಕಿದ್ದ ಶಸ್ತ್ರಚಿಕಿತ್ಸೆ ಮುಂದೂಡಿಕೆ - ರಾಜ್ ಠಾಕ್ರೆ ಅವರಿಗೆ ಇಂದು ನಡೆಯಬೇಕಿದ್ದ ಶಸ್ತ್ರಚಿಕಿತ್ಸೆ ಮುಂದೂಡಿಕೆ

53 ವರ್ಷದ ಠಾಕ್ರೆ ಅವರು ಈ ತಿಂಗಳ ಆರಂಭದಲ್ಲಿ ತಾವು ಮೊಣಕಾಲು ಮತ್ತು ಬೆನ್ನಿನ ಸಮಸ್ಯೆಗಳಿಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ಹೇಳಿದ್ದರು.

​Raj Thackeray
ರಾಜ್ ಠಾಕ್ರೆ
author img

By

Published : Jun 1, 2022, 9:15 AM IST

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮೊಣಕಾಲು ಮತ್ತು ಬೆನ್ನಿನ ಸಮಸ್ಯೆಯಿಂದ ರಾಜ್ ಠಾಕ್ರೆ ಅವರನ್ನು ಮಂಗಳವಾರ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಇಂದು (ಬುಧವಾರ) ಶಸ್ತ್ರ ಚಿಕಿತ್ಸೆ ನಡೆಯಬೇಕಿತ್ತು. ಆದರೆ, ಈ ನಡುವೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಎಂಎನ್ಎಸ್ ಕಾರ್ಯದರ್ಶಿ ಸಚಿನ್ ಮೋರೆ ಮಾಹಿತಿ ನೀಡಿದ್ದಾರೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ, ಸಚಿನ್ ಮೋರೆ, "ಶಸ್ತ್ರಚಿಕಿತ್ಸೆಗೆ ಮೊದಲು ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ರಾಜ್ ಠಾಕ್ರೆಗೆ ಕೋವಿಡ್​​ ಸೋಂಕು ಕಂಡು ಬಂದಿದೆ. ಆದ್ದರಿಂದ, ಜೂನ್ 1 ರಂದು ಮಾಡಬೇಕಿದ್ದ ಶಸ್ತ್ರಚಿಕಿತ್ಸೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ರಾಜ್ ಠಾಕ್ರೆ ಅವರು ಮೊಣಕಾಲು ಮತ್ತು ಬೆನ್ನಿನ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ಹೇಳಿದ್ದರು. ಇನ್ನು ರಾಜ್ ಠಾಕ್ರೆ ಅವರು ಜೂನ್ 5 ರಂದು ಅಯೋಧ್ಯೆಗೆ ತೆರಳಬೇಕಿತ್ತು. ಆದರೆ, ಅನಾರೋಗ್ಯದ ಕಾರಣ ಪ್ರವಾಸ ರದ್ದುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿ, ಔರಂಗಾಬಾದ್ ನಗರದ ಹೆಸರು ಬದಲಿಸಲು ರಾಜ್​ ಠಾಕ್ರೆ ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.