ETV Bharat / bharat

ಮತದಾನಕ್ಕೂ ಮೊದಲೇ ಸಭಾತ್ಯಾಗ ಮಾಡಿದ ವಿಪಕ್ಷಗಳ ಸದಸ್ಯರು.. ಛತ್ತೀಸ್​ಗಢ ಸಿಎಂ ವಿರುದ್ಧದ 'ಅವಿಶ್ವಾಸ'ಕ್ಕೆ ಸೋಲು

ಛತ್ತೀಸ್​ಗಢ ಸಿಎಂ ವಿರುದ್ಧ ಬಿಜೆಪಿ ಸೇರಿದಂತೆ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಸೋಲಾಗಿದೆ. ಸಿಎಂ ಭಾಷಣದ ಮಧ್ಯೆಯೇ ವಿಪಕ್ಷಗಳ ಸದಸ್ಯರು ಮತದಾನಕ್ಕೂ ಮೊದಲೇ ಸಭಾತ್ಯಾಗ ಮಾಡಿದರು.

ಛತ್ತೀಸ್​ಗಢ ಸಿಎಂ ವಿರುದ್ಧದ 'ಅವಿಶ್ವಾಸ'ಕ್ಕೆ ಸೋಲು

author img

By

Published : Jul 22, 2023, 11:04 AM IST

ರಾಯ್‌ಪುರ: ಛತ್ತೀಸ್​ಗಢ ವಿಧಾನಸಭೆಯಲ್ಲಿ ನಾಟಕೀಯ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲಾ ಅವರ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಇದನ್ನೇ ಬಳಸಿಕೊಂಡ ಸಿಎಂ ಬಘೇಲಾ ಅವರು ಸರ್ಕಾರದ ಸಾಧನೆಯ ಬಗ್ಗೆ ಮಾತನಾಡುತ್ತಿದ್ದಾಗ, ರೊಚ್ಚಿಗೆದ್ದ ವಿಪಕ್ಷಗಳು ಅರ್ಧದಲ್ಲೇ ಸಭಾತ್ಯಾಗ ಮಾಡಿದರು. ಇದರಿಂದ ಗೊತ್ತುವಳಿಗೆ ಸೋಲಾಯಿತು.

ಛತ್ತೀಸ್​ಗಢದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಿದೆ. ಜನರು ಸಮಸ್ಯೆಗೀಡಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದರು. ಇದಕ್ಕೆ ಸಿಎಂ ಉತ್ತರ ನೀಡುವ ವೇಳೆ ತೀವ್ರ ಗದ್ದಲ ಎಬ್ಬಿಸಿದ ಪ್ರತಿಪಕ್ಷಗಳು ಭಾಷಣ ಪೂರ್ಣಗೊಳಿಸಲು ಬಿಡದೇ ಸಭಾತ್ಯಾಗ ಮಾಡಿದರು. ಹೀಗಾಗಿ ಪ್ರತಿಪಕ್ಷಗಳು ತಂದಿದ್ದ ಅವಿಶ್ವಾಸ ಗೊತ್ತುವಳಿ ತಿರಸ್ಕೃತಗೊಂಡಿದೆ.

ಮಾತು ಮುಂದುವರಿಸಿದ ಸಿಎಂ ಬಘೇಲಾ ಅವರು, ವಿಪಕ್ಷಗಳು ತಂದಿರುವ ಅವಿಶ್ವಾಸ ನಿರ್ಣಯ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಲು ಅವಕಾಶ ನೀಡಿದಂತಾಗಿದೆ. ಇದಕ್ಕೆ ವಿಪಕ್ಷಗಳಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಮದು ಅವರು ಹೇಳಿದರು.

ಸತ್ಯಾಂಶಗಳಿಲ್ಲದ ಅವಿಶ್ವಾಸ ನಿರ್ಣಯ: ವಿಪಕ್ಷಗಳು ತಂದಿರುವ ಅವಿಶ್ವಾಸ ನಿರ್ಣಯದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲಾ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಹೇಳಿದರು. ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳಿಗೆ ಅಪನಂಬಿಕೆ ವ್ಯಕ್ತಪಡಿಸುವ ಹಕ್ಕಿದೆ. ಆಡಳಿತಾರೂಢ ಪಕ್ಷಕ್ಕೂ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುವ ಅವಕಾಶವಿದೆ. ಅವರು 109 ಆರೋಪಗಳನ್ನು ಮಾಡಿದರು. ಆದರೆ, ಅವುಗಳಿಗೆ ಯಾವುದೇ ಆಧಾರವನ್ನು ನೀಡಲಿಲ್ಲ. ಈ ಹಿಂದೆ ಅವಿಶ್ವಾಸ ಗೊತ್ತುವಳಿ ಮಂಡನೆಯಾದಾಗ ನಕ್ಸಲೀಯರ ಸಮಸ್ಯೆಯೇ ಮೊದಲು ಚರ್ಚೆಯಾಗುತ್ತಿತ್ತು. ಈ ಬಾರಿ ಅದಾಗಲಿಲ್ಲ. ಇದೇ ಅಲ್ಲವೆ ನಮ್ಮ ಸಾಧನೆ ಎಂದು ಅವರು ಹೇಳಿದರು.

ಅತಿ ಹಿಂದುಳಿದ ಪ್ರದೇಶಗಳೆಂಬ ಹಣೆಪಟ್ಟಿ ಹೊಂದಿದ್ದ ಬಸ್ತಾರ್, ಸರ್ಗುಜಾದಲ್ಲಿ ಮಹತ್ತರ ಬದಲಾವಣೆ ತರಲಾಗಿದೆ. ಮಹಿಳೆಯರಿಗೆ ಉತ್ತಮ ಜೀವನ ಕಲ್ಪಿಸಲಾಗಿದೆ. ಮಕ್ಕಳಿಗೆ ಶಿಕ್ಷಣ ಸಿಗುತ್ತಿದೆ. ರೈತರಿಗೆ 20 ಸಾವಿರ ಕೋಟಿ ರೂಪಾಯಿ ಸಬ್ಸಿಡಿ ನೀಡಿದ್ದೇವೆ. ರೈತ ಸಮುದಾಯ ಇಂದು ಸಂತೋಷವಾಗಿದೆ ಎಂದು ಅವರು ಸರ್ಕಾರದ ಬಗ್ಗೆ ಹೊಗಳಿದರು.

ತಲಾ ಆದಾಯ ಹೆಚ್ಚಳ: ನವ ಛತ್ತೀಸ್‌ಗಢದ ನಿರ್ಣಯದೊಂದಿಗೆ ಸರ್ಕಾರ ರಚಿಸಿದ್ದೆವು. ಹಲವಾರು ಅಡೆತಡೆಗಳನ್ನು ಮೆಟ್ಟಿನಿಂತು ನಾವು ಅದನ್ನು ಸಾಧಿಸಿದ್ದೇವೆ. ಎಲ್ಲರ ನೆರವಿನಿಂದ ನಮ್ಮ ಸಂಕಲ್ಪ ಈಡೇರಿಸಿದೆ. 33 ಜಿಲ್ಲೆಗಳು, ತಹಸಿಲ್‌ಗಳೂ ಹೆಚ್ಚಿವೆ. ಜನರ ತಲಾ ಆದಾಯ ಕೂಡ ಹೆಚ್ಚಿದೆ ಎಂದು ಸಿಎಂ ಬಘೇಲಾ ಅವರು ತಿಳಿಸಿದರು.

ಮತಕ್ಕೂ ಮೊದಲೇ ಸಭಾತ್ಯಾಗ: ಸಿಎಂ ಬಘೇಲಾ ಅವರು ಸರ್ಕಾರದ ಸಾಧನೆಗಳ ಪಟ್ಟಿಯನ್ನು ನೀಡುತ್ತಿದ್ದರೆ, ಇತ್ತ ವಿಪಕ್ಷಗಳು ಭಾರಿ ಗದ್ದಲ ಎಬ್ಬಿಸಿದವು. ಮುಖ್ಯಮಂತ್ರಿಗಳು ಬೇಕಂತಲೇ ಸಮಯ ಹಾಳು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿ ಮತದಾನಕ್ಕೂ ಮೊದಲೇ ಸಭಾತ್ಯಾಗ ಮಾಡಿದರು. ಇದರಿಂದ ಮಂಡಿಸಿದ್ದ ಗೊತ್ತುವಳಿ ಬಿದ್ದು ಹೋಯಿತು.

ಇದನ್ನೂ ಓದಿ: ಹೊತ್ತಿ ಉರಿಯುತ್ತಿರುವ ಮಣಿಪುರದಲ್ಲಿ ಭಾರಿ ಕಟ್ಟೆಚ್ಚರ: ಈವರೆಗೆ 6 ಸಾವಿರ ಕೇಸ್, 140 ಕ್ಕೂ ಅಧಿಕ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.