ಬರಾನ್ (ರಾಜಸ್ತಾನ): ಭಾರೀ ಮಳೆಯಿಂದ ಜಿಲ್ಲೆಯ ಚಿಪ್ಪಾಬರೋಡ್ ಪೊಲೀಸ್ ಠಾಣೆಯೊಳಗೆ ನೀರು ನುಗ್ಗಿ ಪೊಲೀಸರು, ಆರೋಪಿಗಳು ಪರದಾಡುವಂತಾಯಿತು. ಠಾಣೆಯ ಒಳಗೆ ಎರಡು ಅಡಿಯಷ್ಟು ಎತ್ತರಕ್ಕೆ ನೀರು ತುಂಬಿತ್ತು.
ಸೋಮವಾರ ಬೆಳಗ್ಗೆ 9 ಗಂಟೆಯ ವೇಳೆಗೆ ಠಾಣೆಯ ಒಳಗೆ ನೀರು ಬರಲು ಪ್ರಾರಂಭವಾಗಿತ್ತು. ಕಂಪ್ಯೂಟರ್, ದಾಖಲೆ ಕೊಠಡಿ ಸೇರಿದಂತೆ ಇಡೀ ಠಾಣೆ ಜಲಾವೃತವಾಗಿದೆ ಎಂದು ಹೆಡ್ ಕಾನ್ಸ್ಟೇಬಲ್ ಅಬ್ದುಲ್ ವಹೀದ್ ತಿಳಿಸಿದ್ದಾರೆ. ಠಾಣೆಯ ದಾಖಲೆಗಳು ಮತ್ತು ಆರೋಪಿಗಳನ್ನು ಬೇರೆಡೆ ಸ್ಥಳಾಂತರಿಸುವ ಕಾರ್ಯ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಓದಿ: Video ವೈರಲ್: ನಡುರಸ್ತೆಯಲ್ಲೇ ಕ್ಯಾಬ್ ಡ್ರೈವರ್ ಮೇಲೆ ಹಲ್ಲೆ ನಡೆಸಿದ ಯುವತಿ!
ಭಾರೀ ಮಳೆ ಮತ್ತು ಪಂಚ್ನಾ ಡ್ಯಾಂನಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ರಾಜಸ್ಥಾನ ಕರೌಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಆಗಸ್ಟ್ 2 ರಿಂದ 6ರ ವರೆಗೆ ಪೂರ್ವ ರಾಜಸ್ಥಾನದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮತ್ತು ಮಾಪನ ಶಾಸ್ತ್ರ ಮುನ್ಸೂಚನೆ ನೀಡಿದೆ.
ಆಗಸ್ಟ್ 2 ರಿಂದ 4ರ ಒಳಗೆ ಅತಿ ಹೆಚ್ಚು ಮಳೆಯಾಗಲಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಐಎಂಡಿ ಎಚ್ಚರಿಸಿದೆ.