ETV Bharat / bharat

'ಮಿಲೇ ಸುರ್ ಮೇರಾ ತುಮ್ಹಾರಾ' ಹಾಡಿನ ಹೊಸ ಆವೃತ್ತಿ ಬಿಡುಗಡೆ ಮಾಡಿದ ರೈಲ್ವೆ ಇಲಾಖೆ.. - ಮಿಲೆ ಸುರ್ ಮೇರಾ ತುಮ್ಹಾರಾ ಹೊಸ ಆವೃತ್ತಿ ಬಿಡುಗಡೆ

ರೈಲ್ವೆ ನೌಕರರು ಪ್ರತ್ಯೇಕವಾಗಿ ಹಾಡಿರುವ ಈ ಹಾಡಿನಲ್ಲಿ ವಿವಿಧ ರೈಲ್ವೆ ಉದ್ಯೋಗಿಗಳು, ಖ್ಯಾತ ರೈಲ್ವೆ ಕ್ರೀಡಾಪಟುಗಳು, ಟೋಕಿಯೊ ಒಲಿಂಪಿಕ್ ಪದಕ ವಿಜೇತರು, ರೈಲ್ವೆ ಸಚಿವರು ಮತ್ತು ಸಚಿವಾಲಯದ ರಾಜ್ಯ ಸಚಿವರಲ್ಲದೆ ಗಣ್ಯ ವ್ಯಕ್ತಿಗಳು ಇದ್ದಾರೆ. 1988ರಲ್ಲಿ ಈ ಹಾಡನ್ನು ಮೊದಲು ಬಿಡುಗಡೆ ಮಾಡಲಾಗಿತ್ತು..

railway-ministry-dedicates-new-version-of-mile-sur-mera-tumhara-song-to-the-nation
ಮಿಲೆ ಸುರ್ ಮೇರಾ ತುಮ್ಹಾರಾ
author img

By

Published : Oct 8, 2021, 6:55 PM IST

Updated : Oct 8, 2021, 7:09 PM IST

ಹೊಸದಿಲ್ಲಿ : ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವ ದರ್ಶನ ಜರ್ದೋಶ್ ಶುಕ್ರವಾರ 'ಮಿಲೆ ಸುರ್ ಮೇರಾ ತುಮ್ಹಾರಾ' ಎಂಬ ಹಾಡಿನ ಹೊಸ ಆವೃತ್ತಿಯನ್ನು ವಿಡಿಯೋ ಕಾನ್ಫರೆನ್ಸ್​ ಕಾರ್ಯಕ್ರಮದ ಮೂಲಕ ಲೋಕಾರ್ಪಣೆ ಮಾಡಿದರು.

ಮಿಲೆ ಸುರ್ ಮೇರಾ ತುಮ್ಹಾರಾ ಹಾಡು ಅನಾವರಣ..

ರೈಲ್ವೆ ನೌಕರರು ಪ್ರತ್ಯೇಕವಾಗಿ ಹಾಡಿರುವ ಈ ಹಾಡಿನಲ್ಲಿ ವಿವಿಧ ರೈಲ್ವೆ ಉದ್ಯೋಗಿಗಳು, ಖ್ಯಾತ ರೈಲ್ವೆ ಕ್ರೀಡಾಪಟುಗಳು, ಟೋಕಿಯೊ ಒಲಿಂಪಿಕ್ ಪದಕ ವಿಜೇತರು, ರೈಲ್ವೆ ಸಚಿವರು ಮತ್ತು ಸಚಿವಾಲಯದ ರಾಜ್ಯ ಸಚಿವರಲ್ಲದೆ ಗಣ್ಯ ವ್ಯಕ್ತಿಗಳು ಇದ್ದಾರೆ. 1988ರಲ್ಲಿ ಈ ಹಾಡನ್ನು ಮೊದಲು ಬಿಡುಗಡೆ ಮಾಡಲಾಗಿತ್ತು.

ಈ ಹಾಡನ್ನು 13 ಭಾಷೆಗಳಲ್ಲಿ ಹಾಡಲಾಗಿದೆ. 75ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ರೈಲ್ವೆ ಇಲಾಖೆಯ ಅಮೃತ ಮಹೋತ್ಸವದ ಪ್ರಯುಕ್ತ ಈ ಹಾಡು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಜರ್ದೋಶ್​​​, 'ಆಜಾದಿ ಕಾ ಅಮೃತ್ ಮಹೋತ್ಸವದ ಒಂದು ಭಾಗವಾಗಿ, ಈ ಹಾಡು ವೈವಿಧ್ಯತೆಯಲ್ಲಿ ಏಕತೆ ಪ್ರತಿನಿಧಿಸುತ್ತದೆ. ಹಾಡಿನ ಹೊಸ ಆವೃತ್ತಿಯು ರೈಲ್ವೆ ಉದ್ಯೋಗಿಗಳನ್ನು ಮಾತ್ರವಲ್ಲದೆ ಇಡೀ ರಾಷ್ಟ್ರವನ್ನು ಪ್ರೇರೇಪಿಸುತ್ತದೆ. ಇದು ಭವಿಷ್ಯದ ಪೀಳಿಗೆಗೂ ಸ್ಫೂರ್ತಿ ನೀಡುತ್ತದೆ ಎಂದರು.

Last Updated : Oct 8, 2021, 7:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.