ರಾಯಬರೇಲಿ (ಉತ್ತರ ಪ್ರದೇಶ): ರೈಲ್ ಕೋಚ್ ಕಾರ್ಖಾನೆಯ ವೈದ್ಯ, ಅವರ ಪತ್ನಿ ಹಾಗೂ ಮಕ್ಕಳ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಾಥಮಿಕ ತನಿಖೆಯ ಆಧಾರ ಮೇಲೆ ವೈದ್ಯ ಡಾ.ಅರುಣ್ ಸಿಂಗ್ ಖಿನ್ನತೆಗೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದರು. ಖಿನ್ನತೆಗೆ ಒಳಗಾಗಿದ್ದ ವೈದ್ಯ ಮೊದಲು ತನ್ನ ಹೆಂಡತಿ, ನಂತರ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾನೆ. ಬಳಿಕ ಅವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ವೈದ್ಯರ ಮಾವ ಪೊಲೀಸ್ ಪ್ರಾಥಮಿಕ ತನಿಖೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಮೃತರ ಕುಟುಂಬದ ಸದಸ್ಯರ ಮಾತು: ''ಪತಿ - ಪತ್ನಿಯ ನಡುವೆ ಸೌಹಾರ್ದಯುತ ಸಂಬಂಧವಿತ್ತು. ಅರುಣ್ ಸಿಂಗ್‌ನಲ್ಲಿ ಖಿನ್ನತೆಯಂತಹ ಯಾವುದೇ ಲಕ್ಷಣಗಳನ್ನು ಹೊಂದಿರಲಿಲ್ಲ. 2008ರಲ್ಲಿ ಇಬ್ಬರೂ ವಿವಾಹವಾಗಿದ್ದು, ಇದುವರೆಗೂ ಯಾವುದೇ ವಿವಾದಗಳು ಇಬ್ಬರ ನಡುವೆ ಕಂಡು ಬಂದಿಲ್ಲ. ಅವರ ಕರೆಗಳು ನಿಯಮಿತವಾಗಿ ಬರುತ್ತಿದ್ದವು. ಸಾಮಾನ್ಯ ಸಂಭಾಷಣೆಗಳು ನಡೆಯುತ್ತಿದ್ದವು. ಕಳೆದ ಭಾನುವಾರವಷ್ಟೇ ಕರೆ ಬಂದಿತ್ತು. ಎಲ್ಲವೂ ಸಾಮಾನ್ಯವಾಗಿತ್ತು. ಆದರೆ, ಮಂಗಳವಾರ ತಡರಾತ್ರಿ ಅಳಿಯನ ತಾಯಿ ಕರೆ ಮಾಡಿ, ಇಬ್ಬರು ತಮ್ಮ ಫೋನ್ಗೆ ಬಂದ ಕರೆಗಳಿಗೆ ಉತ್ತರಿಸುತ್ತಿಲ್ಲ'' ಎಂದು ಮೃತ ವೈದ್ಯ ಡಾ.ಅರುಣ್ ಸಿಂಗ್ ಅವರ ಮಾವ ಜೈ ಪ್ರಕಾಶ್ ಹೇಳಿದ್ದಾರೆ.
ಉನ್ನತ ಪೊಲೀಸ್ ಅಧಿಕಾರಿಗಳ ಮಾಹಿತಿ: ''ಬಹುಶಃ ಎಲ್ಲರೂ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರಬಹುದು. ಮತ್ತೊಂದೆಡೆ, ಮೊದಲ ನೋಟದ ಸಾಕ್ಷ್ಯದಿಂದ ವೈದ್ಯರು ಖಿನ್ನತೆಗೆ ಒಳಗಾಗಿದ್ದು, ಪತ್ನಿ ಮತ್ತು ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ'' ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
''ಈ ಘಟನೆ ಕುರಿತು ಮಾಹಿತಿ ಬಂದ ಕೂಡಲೇ ನಾವೆಲ್ಲರೂ ಅರ್ಚನಾ ಅವರ ತಂದೆಯೊಂದಿಗೆ ರೈಲ್ವೆ ಕೋಚ್ ಫ್ಯಾಕ್ಟರಿಯ ವಸತಿ ಆವರಣಕ್ಕೆ ತಲುಪಿದೆವು. ಅಲ್ಲಿ ನಾವು ಐಜಿ ತರುಣ್ ಗಾಬಾ ಅವರನ್ನು ಭೇಟಿ ಮಾಡಿದೆವು. ಈ ಪ್ರಕರಣ ಬಗ್ಗೆ ಅರ್ಚನಾ ತಂದೆ ಪೊಲೀಸರಿಗೆ ಮಾಹಿತಿ ನೀಡಿದರು. 2008ರಲ್ಲಿ ಇಬ್ಬರೂ ವಿವಾಹವಾದರು ಮತ್ತು ನಂತರ ಅವರಿಬ್ಬರ ನಡುವೆ ಯಾವುದೇ ವಿವಾದಗಳಿಲ್ಲ ಎಂದು ಅರ್ಚನಾ ಅವರ ಸಂಬಂಧಿ ರಾಮಶಿರೋಮಣಿ ಸ್ಪಷ್ಟವಾಗಿ ಹೇಳಿದ್ದಾರೆ.
''ಕುಟುಂಬದವರೊಂದಿಗೆ ನಿರಂತರ ಮಾತುಕತೆ ನಡೆಯುತ್ತಿತ್ತು. ಇತ್ತೀಚೆಗೆ, ನನ್ನ ಸೊಸೆಯ ಬೇಬಿ ಶವರ್ ಆಯೊಜನೆ ಮಾಡಲಾಗಿದೆ. ಅದರಲ್ಲಿ ಅರ್ಚನಾ ಅವರ ಕುಟುಂಬವೂ ಭಾಗವಹಿಸಲಿದೆ ಎಂದು ನಾವು ಭಾವಿಸಿದ್ದೆವು. ಇದಕ್ಕಾಗಿ ನಮ್ಮ ಮನೆಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೆವು'' ಎಂದು ಅವರು ತಿಳಿಸಿದ್ದಾರೆ.
ಮತ್ತೊಂದೆಡೆ, ದೊರೆತಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ವೈದ್ಯರು ಖಿನ್ನತೆಗೆ ಒಳಗಾಗಿ ಪತ್ನಿ ಮತ್ತು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಪುನರುಚ್ಚರಿಸಿದ್ದಾರೆ. ಆದರೆ, ಕುಟುಂಬದ ಸದಸ್ಯರು ಪೊಲೀಸರ ಮಾಹಿತಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.
ಇದನ್ನೂ ಓದಿ: ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷನ ಹತ್ಯೆ: ದೂರು ನೀಡಿದ ಮೃತರ ಪತ್ನಿ ಶೀಲಾ ಶೇಖಾವತ್