ETV Bharat / bharat

ಹೈದರಾಬಾದ್ ಪಬ್​ ಮೇಲೆ ಪೊಲೀಸ್ ದಾಳಿ: ತೆಲುಗು ಬಿಗ್‌ಬಾಸ್‌ ವಿಜೇತ ಸೇರಿ ಹಲವರು ವಶಕ್ಕೆ - ಟಾಲಿವುಡ್​ನ ಜನಪ್ರಿಯ ಗಾಯಕ ರಾಹುಲ್ ಸಿಪ್ಲಿಗಂಜ್

ಹೈದರಾಬಾದ್​ನ ಪ್ರತಿಷ್ಟಿತ ಬಂಜಾರಾ ಹಿಲ್ಸ್​ ಪ್ರದೇಶದ ಪಬ್​ ಮೇಲೆ ದಾಳಿ ನಡೆಸಿರುವ ಹೈದರಾಬಾದ್ ಪೊಲೀಸರ ಟಾಸ್ಕ್​ ಫೋರ್ಸ್​ ತೆಲುಗು ಬಿಗ್ ಬಾಸ್ ವಿಜೇತ ಸೇರಿದಂತೆ ಸುಮಾರು 130 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Raids on Pudding and Mink Pub in Hyderabad, signer other celebrities  detained
ಹೈದರಾಬಾದ್ ಪಬ್​ ಮೇಲೆ ಪೊಲೀಸರ ದಾಳಿ: ನಟರು ಮತ್ತು ಗಾಯಕರು ವಶಕ್ಕೆ
author img

By

Published : Apr 3, 2022, 9:59 AM IST

ಹೈದರಾಬಾದ್(ತೆಲಂಗಾಣ): ಟಾಲಿವುಡ್​ ಸೆಲೆಬ್ರಿಟಿಗಳು ಹೆಚ್ಚಿರುವ ಹೈದರಾಬಾದ್​ನ ಬಂಜಾರಾ ಹಿಲ್ಸ್​ನ ಪಬ್​ ಮೇಲೆ ದಾಳಿ ನಡೆಸಿರುವ ಪೊಲೀಸರು, ಪಬ್​ ಮಾಲೀಕ ಸೇರಿ 130 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ತೆಲುಗು ಬಿಗ್‌ಬಾಸ್ ವಿಜೇತ ಹಾಗೂ ಟಾಲಿವುಡ್​ನ ಜನಪ್ರಿಯ ಗಾಯಕ ರಾಹುಲ್ ಸಿಪ್ಲಿಗಂಜ್ ಕೂಡಾ ಇದ್ದಾರೆಂದು ತಿಳಿದುಬಂದಿದೆ. ಪುಡ್ಡಿಂಗ್ ಮತ್ತು ಮಿಂಕ್ ಪಬ್ ಮೇಲೆ ದಾಳಿ ನಡೆಸಲಾಗಿದ್ದು, ಸಮಯ ಮೀರಿ ಪಬ್​ ತೆರೆದಿದ್ದಕ್ಕಾಗಿ ದೂರು ದಾಖಲಿಸಿಕೊಳ್ಳಲಾಗಿದೆ.

ಪಬ್‌ನಲ್ಲಿ ಕೊಕೇನ್, ಗಾಂಜಾ ಮತ್ತು ಐಎಸ್‌ಡಿಯನ್ನು ಪತ್ತೆ ಮಾಡಲಾಗಿದೆ. ವಶಕ್ಕೆ ಪಡೆದಿರುವ 130 ಮಂದಿಯಲ್ಲಿ 33 ಯುವತಿಯರು ಮತ್ತು 95 ಯುವಕರು ಸೇರಿದ್ದಾರೆ ಎನ್ನಲಾಗಿದೆ. ಬೆಳಗಿನ ಜಾವ 3 ಗಂಟೆಗೆ ಪಬ್ ಮೇಲೆ ದಾಳಿ ನಡೆಸಿದ್ದು, ವಶಕ್ಕೆ ಪಡೆದವರನ್ನು ಪೊಲೀಸ್ ಠಾಣೆಗೆ ಕರೆತರಲಾಗಿದೆ. ಈ ವೇಳೆ ಕೆಲವು ಯುವಕರು ಪೊಲೀಸ್ ಠಾಣೆಯ ಆವರಣದಲ್ಲಿಯೇ ಗಲಾಟೆ ನಡೆಸಿದ್ದು, ಏಕೆ ವಶಕ್ಕೆ ಪಡೆದಿದ್ದೀರಿ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಧ್ವನಿವರ್ಧಕ ತೆಗೆಯದಿದ್ದರೆ ಮಸೀದಿಗಳ ಮುಂದೆ ಹನುಮಾನ್ ಚಾಲೀಸಾ ಹಾಕ್ತೇವೆ: ರಾಜ್ ಠಾಕ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.