ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಕೋವಿಡ್ನಿಂದ ಇಡೀ ದೇಶದ ರೈತರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆರ್ಥಿಕತೆ ನೆಲ ಕಚ್ಚಿದ್ದು, ಅನ್ನದಾತರ ನೆರವಿಗೆ ಬರಬೇಕೆಂದು ಒತ್ತಾಯಿಸಿದ್ದಾರೆ.
ವಯನಾಡು ಕ್ಷೇತ್ರದ ಸಂಸದರಾದ ರಾಹುಲ್ಗಾಂಧಿ, ನಮ್ಮ ಕ್ಷೇತ್ರದಲ್ಲಿ ಸಣ್ಣ ರೈತರು ಹೆಚ್ಚಾಗಿ ವಾಸಿಸುತ್ತಿದ್ದಾರೆ. 2018 ಮತ್ತು 2019 ರಲ್ಲಿ ಕೇರಳ ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ರೈತರು, ಕೋವಿಡ್ ಹೊಡೆತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇದೀಗ ಬಡ್ಡಿ ಸಬ್ವೆನ್ಷನ್ ಯೋಜನೆಯಡಿ ರಿಯಾಯಿತಿ ದರದಲ್ಲಿ ಅಲ್ಪಾವಧಿಯ ಬೆಳೆ ಸಾಲ ತೆಗೆದುಕೊಳ್ಳುತ್ತಿದ್ದಾರೆ.
ಹಲವಾರು ಬಾರಿ ಲಾಕ್ಡೌನ್ ವಿಧಿಸಿರುವುದರಿಂದ ಪೂರೈಕೆ ಸರಪಳಿಗೆ ಅಡಚಣೆ ಉಂಟಾಗಿದೆ. ಕೋವಿಡ್, ಪ್ರವಾಹ, ಮಾರುಕಟ್ಟೆಗಳಲ್ಲಿನ ಅವ್ಯವಸ್ಥೆ ರೈತರ ಆದಾಯದ ಮೇಲೆ ದುಷ್ಪರಿಣಾಮ ಬೀರಿದೆ. ಹೆಚ್ಚುತ್ತಿರುವ ಸಾಲ ಮತ್ತು ಭವಿಷ್ಯದ ಆರ್ಥಿಕ ಅನಿಶ್ಚಿತತೆಯು ರೈತರಿಗೆ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ದೆಹಲಿಗೆ ತೆರಳಿದ ಸಿಎಂ: ಮೋದಿ - ಶಾ ಭೇಟಿ, ನಡೆಯುತ್ತಾ ಸಂಪುಟ ರಚನೆ ಮಾತುಕತೆ...?
ಭಾರತದಾದ್ಯಂತ ಬಹುತೇಕ ರೈತರು ಇದೇ ಸ್ಥಿತಿಯಲ್ಲಿದ್ದಾರೆ. ಈ ಹಿನ್ನೆಲೆ ಅಲ್ಪಾವಧಿ ಬೆಳಗಳ ಮೇಲಿನ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದ್ದಾರೆ.