ವಯನಾಡು(ಕೇರಳ): ರಾಷ್ಟ್ರಪಿತ ಮಹಾತ್ಮ ಗಾಂಧಿ ಏನೇ ಹೇಳಿದರೂ ಅದನ್ನು ಆಚರಣೆಗೆ ತಂದವರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಕೇರಳದ ತಮ್ಮ ತವರು ಕ್ಷೇತ್ರವಾದ ವಯನಾಡಿಗೆ ಭೇಟಿ ನೀಡಿರುವ ರಾಹುಲ್, ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಗೊಳಿಸಿದರು. ಬಾಪೂಜಿ ಅವರ ಪ್ರತಿಮೆ ನೋಡಿದಾಗ ಅವರು ಮಾಡಿದ ಒಳ್ಳೆಯ ಕಾರ್ಯಗಳು ಮತ್ತು ಜೀವನಶೈಲಿ ನೆನಪಾಗುತ್ತದೆ ಎಂದರು.
ಭಾರತ ಧಾರ್ಮಿಕ ಸಹಿಷ್ಣುತೆಯನ್ನು ಅಭ್ಯಾಸ ಮಾಡಲು ಹೇಳಿದರೆ, ಗಾಂಧೀಜಿ ಅವರು ಸಹಿಷ್ಣುರಾಗಿದ್ದರು. ಅವರು ಮಹಿಳೆಯರನ್ನು ಗೌರವಿಸಬೇಕೆಂದು ಹೇಳಿ ಅದನ್ನು ಅನುಸರಿಸುತ್ತಿದ್ದರು. ಭಾರತವು ಜಾತ್ಯತೀತ ದೇಶವಾಗಬೇಕೆಂದು ಹೇಳಿದ ಗಾಂಧಿ ಅವರು ಹಾಗೆಯೇ ನಡೆದುಕೊಂಡಿದ್ದರು ಎಂದು ರಾಹುಲ್ ಹೇಳಿದ್ದಾರೆ.
ಎರಡು ದಿನಗಳ ವಯನಾಡು ಪ್ರವಾಸಕ್ಕಾಗಿ ಬೆಳಗ್ಗೆ ಕೋಯಿಕ್ಕೋಡ್‌ಗೆ ಆಗಮಿಸಿದ ರಾಹುಲ್, ಬುಡಕಟ್ಟು ವಿದ್ಯಾರ್ಥಿಗಳೊಂದಿಗೆ ಊಟ ಮಾಡಿದರು. ನೀವು ದೇಶದ ಅತ್ಯುನ್ನತ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಬೇಕು ಎಂಬುದುನ್ನು ಬಯಸಿದ್ದೇನೆ ಎಂದು ಹೇಳಿದರು. ನಂತರ ಸಂಸದರ ನಿಧಿಯಲ್ಲಿ ವಯನಾಡಿನಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಚಾಲನೆ ನೀಡಿದರು.