ETV Bharat / bharat

ಇಂದಿನಿಂದ ರಾಹುಲ್​ ಗಾಂಧಿ ಮಣಿಪುರ ಪ್ರವಾಸ.. ನಿರಾಶ್ರಿತರ ಭೇಟಿ, ಸಂವಾದ - ಮಣಿಪುರದಲ್ಲಿ ಹಿಂಸಾಚಾರ ಆರಂಭ

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರು ಎರಡು ದಿನಗಳ ಕಾಲ ಮಣಿಪುರಕ್ಕೆ ಪ್ರವಾಸ ಕೈಗೊಂಡಿದ್ದು, ಇಂದು ಇಂಫಾಲ್ ತಲುಪಿದ ನಂತರ ರಾಹುಲ್ ಗಾಂಧಿ ಮೊದಲು ಚುರಚಂದಪುರಕ್ಕೆ ಭೇಟಿ ನೀಡಲಿದ್ದಾರೆ.

Rahul Gandhis two days visit of Manipur  violence in Manipur  manipur violence  Rahul Gandhis visit to Manipur  ಇಂದಿನಿಂದ ರಾಹುಲ್​ ಗಾಂಧಿ ಮಣಿಪುರ ಪ್ರವಾಸ  ನಿರಾಶ್ರಿತರ ಭೇಟಿ  ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ  ಗಾಂಧಿ ಅವರು ಎರಡು ದಿನಗಳ ಕಾಲ ಮಣಿಪುರಕ್ಕೆ ಪ್ರವಾಸ  ರಾಹುಲ್ ಗಾಂಧಿ ಮೊದಲು ಚುರಚಂದಪುರಕ್ಕೆ ಭೇಟಿ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರವಾಸ  ಜಾತಿ ಹಿಂಸಾಚಾರದಿಂದ ಸ್ಥಳಾಂತರಗೊಂಡ ಜನ  ಮಣಿಪುರದಲ್ಲಿ ಹಿಂಸಾಚಾರ ಆರಂಭ  ಮಣಿಪುರದಲ್ಲಿ ಜನಾಂಗೀಯ ಸಂಘರ್ಷ
ಇಂದಿನಿಂದ ರಾಹುಲ್​ ಗಾಂಧಿ ಮಣಿಪುರ ಪ್ರವಾಸ
author img

By

Published : Jun 29, 2023, 10:24 AM IST

ಇಂಫಾಲ, ಮಣಿಪುರ: ಇಂದಿನಿಂದ ಎರಡು ದಿನಗಳ ಕಾಲ ಮಣಿಪುರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ, ಅವರು ಪರಿಹಾರ ಶಿಬಿರಗಳಲ್ಲಿ ಜಾತಿ ಹಿಂಸಾಚಾರದಿಂದ ಸ್ಥಳಾಂತರಗೊಂಡ ಜನರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಅವರು ನಾಗರಿಕ ಸಮಾಜ ಸಂಸ್ಥೆಗಳೊಂದಿಗೆ ಸಂವಾದ ನಡೆಸಲಿದ್ದಾರೆ.

  • #WATCH | Congress leader Rahul Gandhi leaves for Manipur from his residence in Delhi

    Rahul will be in Manipur on June 29 and 30 during which he will visit relief camps and interact with civil society representatives in Imphal and Churachandpur. pic.twitter.com/DuZLWQSR2L

    — ANI (@ANI) June 29, 2023 " class="align-text-top noRightClick twitterSection" data=" ">

ಪಕ್ಷದ ಮೂಲವೊಂದು ಈ ಮಾಹಿತಿ ನೀಡಿದ್ದು, ಮೇ 3 ರಿಂದ ಮಣಿಪುರದಲ್ಲಿ ಹಿಂಸಾಚಾರ ಆರಂಭವಾದ ನಂತರ ಈಶಾನ್ಯ ರಾಜ್ಯಕ್ಕೆ ಕಾಂಗ್ರೆಸ್ ನಾಯಕರ ಮೊದಲ ಭೇಟಿ ಇದಾಗಿದೆ. ಇದಕ್ಕೂ ಮುನ್ನ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಬುಧವಾರ, ಇಂಫಾಲ್ ತಲುಪಿದ ನಂತರ ರಾಹುಲ್ ಗಾಂಧಿ ಚುರಾಚಂದಪುರಕ್ಕೆ ತೆರಳಲಿದ್ದು, ಅಲ್ಲಿ ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದ್ದಾರೆ. ಇದಾದ ಬಳಿಕ ವಿಷ್ಣುಪುರ ಜಿಲ್ಲೆಯ ಮೊಯಿರಾಂಗ್‌ಗೆ ತೆರಳಿ ನಿರಾಶ್ರಿತ ಜನರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಹೇಳಿದರು.

ಈ ವರ್ಷದ ಮೇನಲ್ಲಿ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಭುಗಿಲೆದ್ದ ನಂತರ ಸುಮಾರು 50,000 ಜನರು 300 ಕ್ಕೂ ಹೆಚ್ಚು ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ರಾಜ್ಯದಲ್ಲಿ ಮೈತೆ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ ಇದುವರೆಗೆ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮೇ 3 ರಂದು ಮಣಿಪುರದಲ್ಲಿ ಮೈತೆ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನದ ಬೇಡಿಕೆಯನ್ನು ವಿರೋಧಿಸಿ ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಐಕಮತ್ಯದ ಮೆರವಣಿಗೆ' ನಡೆಸಲಾಯಿತು. ಇದಾದ ನಂತರ ಹಿಂಸಾತ್ಮಕ ಘರ್ಷಣೆಗಳು ಸಂಭವಿಸಿದವು.

  • #WATCH | Congress leader Rahul Gandhi leaves for Manipur from Delhi airport.

    Rahul will be in Manipur on June 29 and 30 during which he will visit relief camps and interact with civil society representatives in Imphal and Churachandpur. pic.twitter.com/9o8Ipw6djz

ಮಣಿಪುರದ ಜನಸಂಖ್ಯೆಯ ಶೇಕಡಾ 53 ರಷ್ಟಿರುವ ಮೈತೆ ಸಮುದಾಯವು ಮುಖ್ಯವಾಗಿ ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದೆ. ಅದೇ ಸಮಯದಲ್ಲಿ, ನಾಗಾ ಮತ್ತು ಕುಕಿಯಂತಹ ಬುಡಕಟ್ಟು ಸಮುದಾಯಗಳು ಜನಸಂಖ್ಯೆಯ ಶೇಕಡಾ 40 ರಷ್ಟಿದೆ ಮತ್ತು ಮುಖ್ಯವಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಈ ಹಿಂದೆ ಗೃಹ ಸಚಿವ ಅಮಿತ್ ಶಾ ಕೂಡ ರಾಜ್ಯದಲ್ಲಿ ಹಿಂಸಾಚಾರದ ಬಗ್ಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಉನ್ನತಾಧಿಕಾರಿಗಳೊಂದಿಗೆ ಸಭೆ ಕೂಡಾ ನಡೆಸಿದ್ದರು. ಸಭೆಯ ನಂತರ ಅವರು ರಾಜ್ಯದ ಜನತೆಗೆ ಭರವಸೆ ನೀಡಿದ್ದು, ಈಗ ಯಾವುದೇ ಹಿಂಸಾಚಾರ ನಡೆಯುವುದಿಲ್ಲ ಮತ್ತು ರಾಜ್ಯದಲ್ಲಿ ವಾತಾವರಣವನ್ನು ಹದಗೆಡಿಸಲು ಯಾರೇ ಪ್ರಯತ್ನಿಸಿದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

ಇನ್ನು ಇದೇ ಶನಿವಾರ ಮಣಿಪುರ ಪರಿಸ್ಥಿತಿ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಂಸತ್ ಭವನದಲ್ಲಿ ಸರ್ವಪಕ್ಷ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಮಣಿಪುರದಲ್ಲಿ ಶಾಂತಿ ಮತ್ತು ಸಹಜ ಸ್ಥಿತಿಗೆ ಮರಳಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಅಮಿತ್​ ಶಾ ವಿಪಕ್ಷ ನಾಯಕರಿಗೆ ಭರವಸೆ ನೀಡಿದ್ದರು.

ಓದಿ: Manipur Violence: ಉಗ್ರರು ನಿರ್ಮಿಸಿದ್ದ 12 ಬಂಕರ್‌ಗಳು ಧ್ವಂಸಗೊಳಿಸಿದ ಭದ್ರತಾಪಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.