ಚೆನ್ನೈ: ಮಾರ್ಚ್ 1 ರಂದು ತಮಿಳುನಾಡಿಗೆ ಬಂದಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕನ್ಯಾಕುಮಾರಿಯಲ್ಲಿ ಪ್ರಚಾರ ನಡೆಸಿದ್ದರು. ಅಲ್ಲಿನ ಬಂಬೂ ಪ್ರದೇಶಕ್ಕೆ ಹೋದಾಗ ಕೆಲವು ಹುಡುಗರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದರು. ಆ ವೇಳೆ ರಾಹುಲ್ ಗಾಂಧಿ ಕಾರಿನಿಂದ ಈ ಹುಡುಗನೊಂದಿಗೆ ಮಾತನಾಡಿದ್ದರು.
ಹುಡುಗ ತನ್ನ ಹೆಸರು ಆಂಥೋನಿ ಫೆಲಿಕ್ಸ್, ಖಾಸಗಿ ಶಾಲೆಯಲ್ಲಿ ಆರನೇ ತರಗತಿ ಓದತ್ತಿದ್ದೇನೆ. ಓಟದಲ್ಲಿ ಹೆಚ್ಚು ಆಸಕ್ತಿ ಇದೆ ಹಾಗೆ ತರಬೇತುದಾರರು ಸಿಕ್ಕರೆ ಸ್ಫರ್ಧೆಗಳಲ್ಲಿ ಗೆಲ್ಲಬಹುದು ಎಂದು ರಾಹುಲ್ಗಾಂಧಿಯವರ ಜೊತೆ ಮಾತನಾಡಿದ್ದ.
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಹುಲ್ ಗಾಂಧಿ, ಹುಡುಗನಿಗೆ ಕೋಚ್ ವ್ಯವಸ್ಥೆ ಮಾಡಿ ಶೂ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ರಾಹುಲ್ ಗಾಂಧಿ ಭರವಸೆ ಈಡೇರಿಸಿದ್ದಾರೆ. ಅಷ್ಟೇ ಅಲ್ಲದೆ, ಆ ಬಾಲಕನ ಜೊತೆ ಫೋನ್ನಲ್ಲೂ ಕೂಡ ಮಾತನಾಡಿ ಶೂ ತಲುಪಿತಾ? ಕಾಲಿನ ಸೈಜ್ಗೆ ಸರಿಯಾಗುತ್ತಾ ಎಂದು ಕೇಳಿದ್ದಾರೆ. ಇದು ಬಾಲಕನಲ್ಲಿ ಅತೀವ ಸಂತಸ ಉಂಟುಮಾಡಿದೆ.