ETV Bharat / bharat

ಪಾಕಿಸ್ತಾನದಲ್ಲಿ ಮೊಳಗಿದ ​'ಚೌಕೀದಾರ್​ ಚೋರ್​ ಹೈ' ಘೋಷಣೆ

ಪಾಕಿಸ್ತಾನದಲ್ಲಿ ಮಾಜಿ ಸಚಿವ ಶೇಖ್ ರಶೀದ್ ಅಹ್ಮದ್ ಅವರು ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ನೆರೆದಿದ್ದ ಜನರು ಪಾಕಿಸ್ತಾನದ ಸೇನೆಯ ವಿರುದ್ಧ 'ಚೌಕಿದಾರ್ ಚೋರ್ ಹೈ' (ಕಾವಲುಗಾರ ಕಳ್ಳ) ಎಂದು ಕೂಗಲು ಆರಂಭಿಸಿದರು.

author img

By

Published : Apr 11, 2022, 4:12 PM IST

Updated : Apr 11, 2022, 5:15 PM IST

chowkidar-chor-hai
ಚೌಕೀದಾರ್​ ಚೋರ್​ ಹೈ

ಇಸ್ಲಾಮಾಬಾದ್ ​: ಪಾಕಿಸ್ತಾನದಲ್ಲಿ 'ಚೌಕೀದಾರ್​ ಚೋರ್ ಹೈ' ಎಂಬ ಟೀಕೆ ಮೊಳಗಿದೆ. ಇಮ್ರಾನ್​ ಖಾನ್ ಸರ್ಕಾರವನ್ನು ಪತನಗೊಳಿಸಿದ ಪಾಕ್​​ ಸೇನೆಯ ವಿರುದ್ಧ ಮಾಜಿ ಪ್ರಧಾನಿಯ ಬೆಂಬಲಿಗರು ತಿರುಗಿಬಿದ್ದಿದ್ದು, ಸೇನೆಯನ್ನು 'ಚೋರ್​' ಎಂದು ಟೀಕಿಸಿದ್ದಾರೆ.

ಮಾಜಿ ಸಚಿವ ಶೇಖ್ ರಶೀದ್ ಅಹ್ಮದ್ ಅವರು ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ನೆರೆದಿದ್ದ ಜನರು ಪಾಕಿಸ್ತಾನದ ಸೇನೆಯ ವಿರುದ್ಧ 'ಚೌಕಿದಾರ್ ಚೋರ್ ಹೈ' (ಕಾವಲುಗಾರ ಕಳ್ಳ) ಎಂದು ಕೂಗಲು ಆರಂಭಿಸಿದರು. ಸುದ್ದಿ ಸಂಸ್ಥೆ ವರದಿ ಪ್ರಕಾರ, ಇಮ್ರಾನ್​ ಖಾನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿರುವುದನ್ನು ಖಂಡಿಸಿ ಪ್ರತಿಭಟನಾಕಾರರು ಪಾಕಿಸ್ತಾನದ ಸೇನೆಯನ್ನು "ಕಳ್ಳರು" ಎಂದು ಜರಿದಿದ್ದಾರೆ. ಆದರೆ ಇದೇ ವೇಳೆ ಇಂತಹ ಘೋಷಣೆ ಕೂಗಬೇಡಿ ಎಂದು ಬೆಂಬಲಿಗರನ್ನು ಕೋರಿದ ಅಹ್ಮದ್, 'ಶಾಂತಿಯೊಂದಿಗೆ ಹೋರಾಟ ಮಾಡೋಣ' ಎಂದು ಕರೆ ನೀಡಿದ್ಧಾರೆ.

  • راولپنڈی /10 اپریل
    پنڈی کی عوام کا شکریہ 🇵🇰✌️
    عمران خان سے اظہار یکجہتی کے سلسلے میں لال حویلی سے براہ راست عوام کے جام غفیر سے خطاب🇵🇰👇https://t.co/Tc0IG0n2DJ@ImranKhanPTI pic.twitter.com/BG7uYtTOqv

    — Sheikh Rashid Ahmed (@ShkhRasheed) April 10, 2022 " class="align-text-top noRightClick twitterSection" data=" ">

ಪಾಕ್​ನಲ್ಲಿ ಇಮ್ರಾನ್​ ಖಾನ್​ ಅವಿಶ್ವಾಸ ಮತದಲ್ಲಿ ಸೋತ ಬಳಿಕ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಬೆಂಬಲಿಗರು ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ಮ್ಯಾಜಿಕ್ ನಂಬರ್ 172 ಆಗಿದ್ದು 174 ಸಂಸದರ ಬೆಂಬಲ ಹೊಂದಿರುವ ಶಹಬಾಜ್ ಷರೀಫ್ ಸುಲಭವಾಗಿ ಪ್ರಧಾನ ಮಂತ್ರಿ ಆಗಬಹುದು. ಪಾಕಿಸ್ತಾನ ಮುಸ್ಲಿಂ ಲೀಗ್ ಅಧ್ಯಕ್ಷ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರರಾಗಿರುವ ಶಹಬಾಜ್ ಷರೀಫ್ ಇಂದು ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆ ಇದೆ.

ಓದಿ: ಟ್ವಿಟರ್​ ಆಡಳಿತ ಮಂಡಳಿ ಸದಸ್ಯತ್ವ ಸ್ಥಾನ ನಿರಾಕರಿಸಿದ ಟೆಸ್ಲಾ ಸಿಇಒ ಎಲಾನ್​​ ಮಸ್ಕ್​

Last Updated : Apr 11, 2022, 5:15 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.