ನವದೆಹಲಿ: ಕೇಂದ್ರ ಬಜೆಟ್ ಕುರಿತ ಚರ್ಚೆಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಪಕ್ಷದ ನೇತೃತ್ವ ವಹಿಸಲಿದ್ದು, ಬುಧವಾರ ಲೋಕಸಭೆ ಕೈಗೆತ್ತಿಕೊಳ್ಳುವ ಚರ್ಚೆಯಲ್ಲಿ ತಮ್ಮ ಪಕ್ಷದ ಮೊದಲ ಭಾಷಣಕಾರರಾಗಿ ಇರಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾರ್ಪಣೆಗೆ ಉತ್ತರಿಸಿದ ನಂತರ ಕೇಂದ್ರ ಬಜೆಟ್ 2021-22ರ ಚರ್ಚೆ ಕೈಗೊಳ್ಳಲಾಗುವುದು.
ಇದನ್ನೂ ಓದಿ: ಲೋಕಸಭೆಯಲ್ಲಿ ಪಿ.ಸಿ.ಮೋಹನ್ ಮಾತು... ಹೆಚ್ಎಎಲ್ ಸೇವೆ ನೆನೆದ ಸಂಸದ
ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಸಂಸದರು ಟೀಕೆ ವ್ಯಕ್ತಪಸಿಸಿದ್ದರು. ಬಜೆಟ್ ಪ್ರಸ್ತಾಪಗಳು ಸಾಮಾನ್ಯ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದು ಹೇಳಿದರು. ಅವರು ಸರ್ಕಾರದ ಆರ್ಥಿಕ ನೀತಿಗಳನ್ನು ದೂಷಿಸಿದ್ದಾರೆ. ಬಡ ವರ್ಗಗಳಿಗೆ ನೇರ ನಗದು ವರ್ಗಾವಣೆಯನ್ನು ಪ್ರತಿಪಾದಿಸಿ, ಆರ್ಥಿಕತೆಗೆ ಉತ್ತೇಜನ ನೀಡಲು ಒತ್ತಾಯಿಸಿದರು.
ಕೈಗಾರಿಕೋದ್ಯಮಿಗಳ ಒಂದು ಭಾಗಕ್ಕೆ ಅನುಕೂಲವಾಗುವ ನೀತಿಗಳನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.