ETV Bharat / bharat

ಭಾರತದ ಕಲ್ಪನೆ ಕೊಲೆ ಮಾಡುವ ಯಾರೇ ಆಗಿದ್ದರೂ ರಾಷ್ಟ್ರೀಯವಾದಿಯಾಗಲು ಸಾಧ್ಯವಿಲ್ಲ: ಮೋದಿ ವಿರುದ್ಧ ರಾಹುಲ್​ ವಾಗ್ಬಾಣ - Modi laughed and joked says Rahul Gandhi

Rahul Gandhi in Wayanad: ಭಾರತದ ಕಲ್ಪನೆಯನ್ನು ಕೊಲೆ ಮಾಡುವ ಯಾರೇ ಆಗಿದ್ದರೂ ರಾಷ್ಟ್ರೀಯವಾದಿಯಾಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಪ್ರಧಾನಿ ಮೋದಿ ವಾಗ್ದಾಳಿ ಮಾಡಿದ್ದಾರೆ.

Rahul Gandhi steps up attack on PM Modi over raging Manipur violence
ಭಾರತದ ಕಲ್ಪನೆ ಕೊಲೆ ಮಾಡುವ ಯಾರೇ ಆಗಿದ್ದರೂ ರಾಷ್ಟ್ರೀಯವಾದಿಯಾಗಲು ಸಾಧ್ಯವಿಲ್ಲ: ಮೋದಿ ವಿರುದ್ಧ ರಾಹುಲ್​ ವಾಗ್ಬಾಣ
author img

By

Published : Aug 12, 2023, 10:00 PM IST

ವಯನಾಡು (ಕೇರಳ): ಈಶಾನ್ಯ ರಾಜ್ಯ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ''ಭಾರತೀಯ ಕಲ್ಪನೆಯನ್ನು ಕೊಲೆ ಮಾಡುವ ಯಾರೇ ಆಗಿದ್ದರೂ ರಾಷ್ಟ್ರೀಯವಾದಿಯಾಗಲು ಸಾಧ್ಯವಿಲ್ಲ'' ಎಂದು ಕೇರಳದ ವಯನಾಡು ಸಂಸದರಾದ ರಾಹುಲ್​ ಹೇಳಿದ್ದಾರೆ.

ಲೋಕಸಭೆ ಸದಸ್ಯತ್ವವನ್ನು ಮರುಸ್ಥಾಪಿಸಿದ ನಂತರ ಶನಿವಾರ ವಯನಾಡಿಗೆ ಮೊದಲ ಬಾರಿಗೆ ರಾಹುಲ್​ ಗಾಂಧಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಲ್ಪೆಟ್ಟಾದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಹಿಂಸಾಚಾರದ ಕುರಿತ ಚರ್ಚೆ ವೇಳೆಯೂ ಮಣಿಪುರದ ಸಮಸ್ಯೆಯ ಬಗ್ಗೆ ಪ್ರಧಾನಿ ಮೋದಿ ಮಾತನಾಡಲಿಲ್ಲ ಎಂದು ಆರೋಪಿಸಿದರು.

''ಲೋಕಸಭೆಯಲ್ಲಿ ಅವರು (ಪ್ರಧಾನಿ ಮೋದಿ) 2 ಗಂಟೆ 13 ನಿಮಿಷಗಳ ಕಾಲ ಭಾಷಣ ಮಾಡಿದರು. ಭಾಷಣ ಮಾಡುತ್ತಾ ನಗುತ್ತಿದ್ದರು.. ಜೋಕ್​ಗಳನ್ನು ಮಾಡಿದರು.. ತಮಾಷೆ ಮಾಡಿದರು.. ಅವರ ಕ್ಯಾಬಿನೆಟ್ ಸಚಿವರು ನಕ್ಕರು. ಅವರೂ ತಮಾಷೆ ಮಾಡಿದರು.. ಕಾಂಗ್ರೆಸ್​ ಹಾಗೂ ಇಂಡಿಯಾ ಮೈತ್ರಿಕೂಟ.. ಹೇಗೆ ಎಲ್ಲದರ ಬಗ್ಗೆ ಪ್ರಧಾನಿ ಎರಡು ಗಂಟೆ ಮಾತನಾಡಿದರು. ಆದರೆ, ಮಣಿಪುರದ ಬಗ್ಗೆ ಕೇವಲ ಎರಡು ನಿಮಿಷ ಮಾತನಾಡಿದರು" ಎಂದು ರಾಹುಲ್​ ಗಾಂಧಿ ಟೀಕಿಸಿದರು.

ಮುಂದುವರೆದು, ''ಬಿಜೆಪಿ ಮತ್ತು ಅದರ ನೇತೃತ್ವದ ಸರ್ಕಾರವು ಮಣಿಪುರದಲ್ಲಿ ಭಾರತದ ಕಲ್ಪನೆಯನ್ನು ಕೊಲೆ ಮಾಡಿದೆ" ಎಂದು ದೂರಿದ ರಾಹುಲ್​ ಗಾಂಧಿ, "ನೀವು (ಮೋದಿ) ಸಾವಿರಾರು ಕುಟುಂಬಗಳನ್ನು ನಾಶ ಮಾಡಿದ್ದೀರಿ. ನೀವು ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಅವಕಾಶ ನೀಡಿದ್ದೀರಿ. ನೀವು ಸಾವಿರಾರು ಜನರ ಕೊಲೆಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಆದರೂ, ದೇಶದ ಪ್ರಧಾನಿಯಾಗಿ ನೀವು ನಗುತ್ತಿದ್ದೀರಾ?'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ, ''ಭಾರತದ ಕಲ್ಪನೆಯನ್ನು ಕೊಲೆ ಮಾಡುವ ಯಾರಾದರೂ ರಾಷ್ಟ್ರೀಯವಾದಿಯಾಗಲು ಸಾಧ್ಯವಿಲ್ಲ'' ಎಂದ ಕಾಂಗ್ರೆಸ್​ ನಾಯಕ, "ನೀವು (ಮೋದಿ) ಭಾರತ್ ಮಾತೆಯ ಹತ್ಯೆಯ ಬಗ್ಗೆ ಮಾತನಾಡಲು ಕೇವಲ ಎರಡು ನಿಮಿಷಗಳ ಕಾಲ ಕಳೆದಿದ್ದೀರಿ. ನಿಮಗೆ ಎಷ್ಟು ಧೈರ್ಯ?, ಭಾರತದ ಕಲ್ಪನೆಯನ್ನು ನೀವು ಹೇಗೆ ತಳ್ಳಿಹಾಕಬಹುದು?. ಕಳೆದ ನಾಲ್ಕು ತಿಂಗಳಿಂದ ನೀವು ಏನು ಮಾಡುತ್ತಿದ್ದೀರಿ?, ನೀವು ಯಾಕೆ ಮಣಿಪುರಕ್ಕೆ ಭೇಟಿ ನೀಡಲಿಲ್ಲ?, ನೀವು ಯಾಕೆ ಹಿಂಸಾಚಾರವನ್ನು ತಡೆಯಲು ಪ್ರಯತ್ನಿಸಲಿಲ್ಲ?, ನೀವು ರಾಷ್ಟ್ರೀಯವಾದಿಗಳಲ್ಲ. ಏಕೆಂದರೆ, ಭಾರತದ ಕಲ್ಪನೆಯನ್ನು ಕೊಲೆ ಮಾಡುವ ಯಾರೇ ಆಗಿದ್ದರೂ ರಾಷ್ಟ್ರೀಯವಾದಿಯಾಗಲು ಸಾಧ್ಯವಿಲ್ಲ" ಎಂದು ಪ್ರಧಾನಿ ಮೋದಿ ವಿರುದ್ಧ ಮತ್ತಷ್ಟು ವಾಗ್ಬಾಣ ಬಿಟ್ಟರು.

ಇದನ್ನೂ ಓದಿ: Rahul Gandhi: ಮಣಿಪುರ ಹೊತ್ತಿ ಉರೀತಿದ್ರೆ, ಪ್ರಧಾನಿ ಲೋಕಸಭೆಯಲ್ಲಿ ಜೋಕ್​ ಮಾಡ್ತಿದ್ರು: ರಾಹುಲ್​ ಗಾಂಧಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.