ನವದೆಹಲಿ: ದೇಶದಲ್ಲಿ ಕೋವಿಡ್ ಲಸಿಕೆ ಕೊರತೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
"ಕೇಂದ್ರ ಸರ್ಕಾರದ ಲಸಿಕೆ ತಂತ್ರವು ನೋಟು ಅಮಾನ್ಯೀಕರಣಕ್ಕಿಂತ ಕಡಿಮೆಯಿಲ್ಲ. ಸಾಮಾನ್ಯ ಜನಸಮೂಹವು ಸರದಿಯಲ್ಲಿ ನಿಲ್ಲುತ್ತಿದೆ. ಹಣ, ಆರೋಗ್ಯ ಮತ್ತು ಜೀವದ ನಷ್ಟ ಅನುಭವಿಸುತ್ತದೆ. ಕೊನೆಯಲ್ಲಿ ಕೆಲವೇ ಕೆಲವು ಕೈಗಾರಿಕೋದ್ಯಮಿಗಳು ಮಾತ್ರ ಈ ಲಸಿಕಾ ಅಭಿಯಾನದ ಪ್ರಯೋಜನ ಪಡೆಯುತ್ತಾರೆ" ಎಂದು ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಇದನ್ನೂ ಓದಿ: 'ಐಎಸ್‌ಐ ಜತೆ ಮಾತನಾಡುವ ಕೇಂದ್ರ ವಿಪಕ್ಷಗಳ ಜೊತೆ ಕೊರೊನಾ ಕುರಿತು ಸಂವಾದ ನಡೆಸುತ್ತಿಲ್ಲ'
ದೇಶದಲ್ಲಿ ಕೊರೊನಾ ಲಸಿಕೆ ಪ್ರಮಾಣವು ಬುಧವಾರ 13,01,19,310 ದಾಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 2,95,041 ಜನರಿಗೆ ಸೋಂಕು ತಗುಲಿದ್ದು, ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.