ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಸೈನಿಕರ ಪಿಂಚಣಿ ಕಡಿತಗೊಳಿಸಿರುವುದು ಕೇಂದ್ರ ಸರ್ಕಾರದ ತಪ್ಪೆಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರವು ಕೇವಲ ಮೂರರಿಂದ ನಾಲ್ಕು ಕೈಗಾರಿಕೋದ್ಯಮಿ ಸ್ನೇಹಿತರನ್ನು ಹೊಂದಿದ್ದು, ಅವರಷ್ಟೇ ಮೋದಿಗೆ 'ದೇವರು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
बजट में सैनिकों की पेंशन में कटौती।
— Rahul Gandhi (@RahulGandhi) February 8, 2021 " class="align-text-top noRightClick twitterSection" data="
ना जवान ना किसान
मोदी सरकार के लिए
3-4 उद्योगपति मित्र ही भगवान!
">बजट में सैनिकों की पेंशन में कटौती।
— Rahul Gandhi (@RahulGandhi) February 8, 2021
ना जवान ना किसान
मोदी सरकार के लिए
3-4 उद्योगपति मित्र ही भगवान!बजट में सैनिकों की पेंशन में कटौती।
— Rahul Gandhi (@RahulGandhi) February 8, 2021
ना जवान ना किसान
मोदी सरकार के लिए
3-4 उद्योगपति मित्र ही भगवान!
ಬಜೆಟ್‌ನಲ್ಲಿ ಸೈನಿಕರ ಪಿಂಚಣಿ ಕಡಿತಗೊಳಿಸಲಾಗಿದೆ. ಯುವಕರು, ರೈತರು ಮೋದಿ ಸರ್ಕಾರಕ್ಕೆ ಸ್ನೇಹಿಗಳಲ್ಲ, ಕೇವಲ 3-4 ಕೈಗಾರಿಕೋದ್ಯಮಿಗಳೇ ಅವರಿಗೆ ಸ್ನೇಹಿತರು, ಅವರೇ ಅವರಿಗೆ ದೇವರು, ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಇದಕ್ಕೂ ಮೊದಲು ಬಜೆಟ್ ಕುರಿತು ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿದ್ದ ರಾಹುಲ್, ಅವರದ್ದು ಹೇಡಿತನದ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: ಬಜೆಟ್‌ನಲ್ಲಿ 'ಭಾರತದ ರಕ್ಷಕರಿಗೆ ದ್ರೋಹ'- ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ
ಈ ವರ್ಷದ ತನ್ನ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವರು 'ಪ್ರಧಾನಿ' ಎಂಬ ಪದವನ್ನು ಆರು ಬಾರಿ ಮತ್ತು 'ಕಾರ್ಪೊರೇಟ್ / ಕಂಪನಿಗಳು' ಎಂಬ ಪದವನ್ನು 17 ಬಾರಿ ಬಳಸಿದ್ದಾರೆ. ಆದರೆ, ರಕ್ಷಣೆ ಮತ್ತು ಚೀನಾ ಪದಗಳನ್ನು ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ಟ್ವಿಟರ್ನಲ್ಲಿ ರಾಹುಲ್ ಬರೆದುಕೊಂಡಿದ್ದಾರೆ.
2021-22ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವರು ಫೆಬ್ರವರಿ 1 ರಂದು ಲೋಕಸಭೆಯಲ್ಲಿ ಮಂಡಿಸಿದ್ದರು.