ನವದೆಹಲಿ: ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳಿಗೆ ಎಕ್ಸ್ ಗ್ರೇಷಿಯಾ ಪಾವತಿಸದ ಕಾರಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೀವಕ್ಕೆ ಬೆಲೆ ಕಟ್ಟಲು ಅಸಾಧ್ಯ, ಸರ್ಕಾರ ಈ ಪರಿಹಾರ ನೀಡಿದ್ರೆ ಸಣ್ಣ ಸಹಾಯವಾಗುತ್ತದೆ. ಆದರೆ, ಮೋದಿ ಸರ್ಕಾರ ಅದನ್ನು ಮಾಡಲು ಸಹ ಸಿದ್ಧವಾಗಿಲ್ಲ ಎಂದು ಕಿಡಿ ಕಾರಿದ್ದಾರೆ.
ಕೋವಿಡ್ ಸಮಯದಲ್ಲಿ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಒದಗಿಸದೇ ಸುಳ್ಳು ಅಂಕಿ - ಅಂಶಗಳನ್ನು ನೀಡಿ ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳುತ್ತಿದೆ ಎಂದು ರಾಗಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರೈತರಿಗೆ ಸಹಾಯ ಮಾಡಿ: ಪತ್ರ ಬರೆದ ಪ್ರಿಯಾಂಕಾ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಪತ್ರ ಬರೆದು ರೈತರಿಂದ ಗೋಧಿ ಖರೀದಿಸಿ ಎಂದು ಒತ್ತಾಯಿಸಿದ್ದಾರೆ.
ಜುಲೈ 15ರೊಳಗೆ ರಾಜ್ಯದ ಎಲ್ಲಾ ಖರೀದಿ ಕೇಂದ್ರಗಳನ್ನು ತೆರೆಯಲು ಯೋಗಿಗೆ ಕೋರಿದ್ದಾರೆ. ರೈತರು ತಮ್ಮ ಆಹಾರ ಧಾನ್ಯಗಳನ್ನು ಮಾರಾಟ ಮಾಡಲು ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಖರೀದಿ ಕೇಂದ್ರಗಳನ್ನು ನಿರ್ಮಿಸಿ ರೈತರಿಗೆ ನೆರವಾಗಿ ಎಂದು ಪತ್ರದ ಮುಖೇನಾ ಒತ್ತಾಯಿಸಿದ್ದಾರೆ.
ಓದಿ:ಪಾರಂಪರಿಕ ಕಟ್ಟಡ ನವೀಕರಣ ಆರೋಪ; ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ