ನವದೆಹಲಿ: ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮತ್ತೊಮ್ಮೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಸಾರ್ವಜನಿಕ ರಂಗದ ಉದ್ಯಮಗಳ ಖಾಸಗಿಕರಣ ಮಾಡುತ್ತಿರುವ ಕೇಂದ್ರದ ನೀತಿಯ ವಿರುದ್ಧ ಹರಿಹಾಯ್ದಿದ್ದಾರೆ.
ಈ ಕುರಿತು ಟ್ವಿಟರ್ನಲ್ಲಿ ಬರೆದುಕೊಂಡಿರುವ ರಾಹುಲ್, ಮತ್ತೊಮ್ಮೆ ‘ನಾವಿಬ್ಬರು ನಮಗಿಬ್ಬರು’ ಎಂದು ಟೀಕಿಸಿದ್ದಾರೆ. ‘ಸಿರ್ಫ್ ಹಮಾರೆ ದೋ ಕಾ ಕಲ್ಯಾಣ್’ ಎಂದು ಟೀಕಿಸಿದ್ದಾರೆ.
ಇದಲ್ಲದೇ ಅಹಮದಾಬಾದ್ ಕ್ರಿಕೆಟ್ ಮೈದಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಎಂದು ಮರುನಾಮಕರಣ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ರಾಹುಲ್, ಸತ್ಯ ಹೇಗೆ ಬಹಿರಂಗವಾಗುತ್ತದೆ, ನರೇಂದ್ರ ಮೋದಿ ಕ್ರೀಡಾಂಗಣ, ಅದಾನಿ ಎಂಡ್ - ಅಂಬಾನಿ ಎಂಡ್ ಅದು ಸಹ ಜಯ್ ಶಾ ಅಧ್ಯಕ್ಷತೆಯಲ್ಲಿ ಎಂದು ಟ್ವೀಟ್ ಮಾಡಿದ್ದಾರೆ.
-
Dear PM,
— Rahul Gandhi (@RahulGandhi) February 25, 2021 " class="align-text-top noRightClick twitterSection" data="
Fisherfolk need an independent and dedicated ministry of fisheries, not just a department within a ministry.
PS- “Hum do Humare do” obviously hurt bad.
">Dear PM,
— Rahul Gandhi (@RahulGandhi) February 25, 2021
Fisherfolk need an independent and dedicated ministry of fisheries, not just a department within a ministry.
PS- “Hum do Humare do” obviously hurt bad.Dear PM,
— Rahul Gandhi (@RahulGandhi) February 25, 2021
Fisherfolk need an independent and dedicated ministry of fisheries, not just a department within a ministry.
PS- “Hum do Humare do” obviously hurt bad.
ಇದಾದ ಬಳಿಕ ಇನ್ನೊಂದು ಟ್ವೀಟ್ನಲ್ಲಿ, ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯದ ಅಗತ್ಯತೆ ಇದೆ. ಸಚಿವಾಲಯದೊಳಗಿನ ಒಂದು ವಿಭಾಗ ಮಾತ್ರವಲ್ಲ ಎಂದಿದ್ದು, ಇಲ್ಲಿಯೂ ‘ನಾವಿಬ್ಬರೂ ನಮಗಿಬ್ಬರು’ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: "ಜನರ ಆದೇಶವು ಬೇಜವಾಬ್ದಾರಿಯಿಂದ ವರ್ತಿಸುವ ಪರವಾನಗಿಯಲ್ಲ": ಬಿಜೆಪಿ ವಿರುದ್ಧ 'ಸೇನಾ' ಸವಾರಿ