ಪುದುಚೇರಿ: ಕೇಂದ್ರ ಸರ್ಕಾರ ದೇಶದ ಬೆನ್ನೆಲುಬಾದ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಮೂರು ಕೃಷಿ ಕಾಯ್ದೆಗಳನ್ನು ಜಾರಿ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಆರಂಭಕ್ಕೆ ಹಸಿರು ನಿಶಾನೆ ತೋರಲು ಪುದುಚೇರಿಗೆ ಆಗಮಿಸಿದ ರಾಹುಲ್ ಗಾಂಧಿ, ಮೀನುಗಾರ ಸಮುದಾಯದ ಜನರ ಜೊತೆ ಸಂವಾದ ನಡೆಸುವ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 11,610 ಕೊರೊನಾ ಸೋಂಕಿತರು ಪತ್ತೆ
ಪ್ರಸ್ತುತ ಸರ್ಕಾರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ದಾಳಿ ಮಾಡುತ್ತಿದೆ. ಎಲ್ಲಾ ವ್ಯವಹಾರವನ್ನು ದೊಡ್ಡ ಉದ್ಯಮಗಳು ನಿಯಂತ್ರಣ ಮಾಡಬೇಕೆಂಬ ದುರಾಲೋಚನೆ ಸರ್ಕಾರದ್ದಾಗಿದೆ. ನಾವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಬಲಪಡಿಸಬೇಕು. ಏಕೆಂದರೆ ಅವುಗಳೇ ದೇಶದ ಶಕ್ತಿ ಎಂದು ನಾವು ನಂಬುತ್ತೇವೆ ಎಂದಿದ್ದಾರೆ.
ಮೀನುಗಾರರೊಂದಿಗಿನ ಸಂವಾದದಲ್ಲಿ ರೈತರ ವಿಚಾರ ಪ್ರಸ್ತಾಪಿಸುತ್ತಿರುವ ಬಗ್ಗೆ ನಿಮಗೆ ಆಶ್ಚರ್ಯವಾಗಬಹುದು. ಮೀನುಗಾರರಾದ ನೀವು ಸಮುದ್ರದ ರೈತರು ಎಂದು ನಾನು ಅಂದುಕೊಂಡಿದ್ದೇನೆ ಎಂದರು.