ದೌಸಾ, ರಾಜಸ್ಥಾನ: ಕಾಂಗ್ರೆಸ್‌ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಿನ್ನೆ ದೌಸಾ ತಲುಪಿತ್ತು. ಭಾರತ್ ಜೋಡೋ ಯಾತ್ರೆಗೆ ಬೆಂಬಲ ನೀಡಲು ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಪ್ರಾಣಿಗಳಿಗೆ ಮೇವು ಕಟ್ ಮಾಡಿ ನೀಡಿದ ರಾಗಾ: ಕಳೆದ ದಿನ ರಾಹುಲ್ ಗಾಂಧಿ ನೇತೃತ್ವದ ಯಾತ್ರೆ ದೌಸಾ ತಲುಪಿತು. ಈ ವೇಳೆ, ರೈತ ಕುಟುಂಬದವರು ಕುಟ್ಟಿ ಯಂತ್ರದಲ್ಲಿ ಪಶುಗಳಿಗೆ ಮೇವು ಕಟ್ ಮಾಡುತ್ತಿದ್ದರು. ಇದನ್ನು ಗಮನಿಸಿದ ರಾಹುಲ್ ಗಾಂಧಿ ಅವರು ಯಂತ್ರವನ್ನು ಚಲಾಯಿಸಿ ಮೇವು ಕಟ್ ಮಾಡಿದಲ್ಲದೇ ಪ್ರಾಣಿಗಳಿಗೆ ವಿತರಿಸಿದರು.
ಇದಾದ ಬಳಿಕ ರಾಹುಲ್ ಗಾಂಧಿ ಬಳಿ ನಿಂತಿದ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಅವರನ್ನು ನೋಡಿ ಮುಂದೆ ಬಂದರು. ರಾಹುಲ್ ಗಾಂಧಿ ಬಳಿಕ ಕುಟ್ಟಿ ಯಂತ್ರಕ್ಕೆ ಕೈ ಹಾಕಿ ಪ್ರಾಣಿಗಳಿಗೆ ಮೇವು ಕಟ್ ಮಾಡಿ ನೀಡಿದರು. ಇದೇ ವೇಳೆ, ಸರ್ಕಾರದ ಯೋಜನೆಗಳ ಬಗ್ಗೆ ರೈತರಿಗೆ ರಾಹುಲ್ ಗಾಂಧಿ ಮಾಹಿತಿ ನೀಡಿದರು.
ದಲಿತ ಕುಟುಂಬಸ್ಥರ ಮನೆಯಲ್ಲಿ ಉಪಹಾರ ಸೇವನೆ: ಮಧ್ಯಾಹ್ನ ರೈತರ ಭೇಟಿ ನಂತರ ರಾಹುಲ್ ಗಾಂಧಿ ಗ್ರಾಮದ ದಲಿತರ ಮನೆಗೆ ಭೇಟಿ ನೀಡಿ ಉಪಹಾರ ಸಹ ಸೇವಿಸಿದರು. ಇದರಿಂದ ಇಡೀ ದಲಿತ ಕುಟುಂಬ ಸಂತಸದಲ್ಲಿ ತೇಲಿತ್ತು.
ಕೀಡಾಪಟುಗಳ ಜೊತೆ ರಾಹುಲ್ ಚರ್ಚೆ: ಭಾರತ್ ಜೋಡೋ ಯಾತ್ರೆಯಲ್ಲಿ ರೈತರನ್ನು ಭೇಟಿ ಮಾಡುವುದರ ಜೊತೆಗೆ ರಾಹುಲ್ ಗಾಂಧಿ ರಾಷ್ಟ್ರೀಯ ಕಬಡ್ಡಿ ತಂಡದ ಕ್ಯಾಪ್ಟನ್ ದೀಪಕ್ ರಾಮ್ ನಿವಾಸ್ ಹೂಡಾ ಮತ್ತು ಭಾರತದ ಬಾಕ್ಸರ್ ಸ್ವೀಟಿ ಬೋರಾ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಇದಾದ ಬಳಿಕ ಭಾರತ್ ಜೋಡೋ ಯಾತ್ರೆಗೆ ಚಿತ್ರ ನಿರ್ಮಾಪಕ ಆನಂದ್ ಪಟವರ್ಧನ್ ಕೂಡ ಸಾಥ್ ನೀಡಿದರು.
ಓದಿ: ಭಾರತ್ ಜೋಡೋ ಯಾತ್ರೆ: ಸಹೋದರಿಯೊಂದಿಗೆ ದೀರ್ಘ ಸಂವಾದ ನಡೆಸಿದ ರಾಹುಲ್ ಗಾಂಧಿ