ನವದೆಹಲಿ: ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಮುಗ್ಗಟ್ಟನ್ನು ಪರಿಹರಿಸಲು ಕೇಂದ್ರ ಸರ್ಕಾರ ಘೋಷಿಸಿದ ಪರಿಹಾರ ಕ್ರಮಗಳನ್ನು ಕಾಂಗ್ರೆಸ್ ಟೀಕಿಸಿದೆ. ಪಕ್ಷದ ನಾಯಕ ರಾಹುಲ್ ಗಾಂಧಿ, ಯಾವುದೇ ಕುಟುಂಬವು ತನ್ನ ದೈನಂದಿನ ಅಗತ್ಯತೆಗಳಿಗಾಗಿ ಕೇಂದ್ರದ ಈ ಆರ್ಥಿಕ ಪ್ಯಾಕೇಜ್ ಅನ್ನು ಉಪಯೋಗಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
-
FM के ‘आर्थिक पैकेज’ को कोई परिवार अपने रहने-खाने-दवा-बच्चे की स्कूल फ़ीस पर ख़र्च नहीं कर सकता।
— Rahul Gandhi (@RahulGandhi) June 29, 2021 " class="align-text-top noRightClick twitterSection" data="
पैकेज नहीं, एक और ढकोसला!
">FM के ‘आर्थिक पैकेज’ को कोई परिवार अपने रहने-खाने-दवा-बच्चे की स्कूल फ़ीस पर ख़र्च नहीं कर सकता।
— Rahul Gandhi (@RahulGandhi) June 29, 2021
पैकेज नहीं, एक और ढकोसला!FM के ‘आर्थिक पैकेज’ को कोई परिवार अपने रहने-खाने-दवा-बच्चे की स्कूल फ़ीस पर ख़र्च नहीं कर सकता।
— Rahul Gandhi (@RahulGandhi) June 29, 2021
पैकेज नहीं, एक और ढकोसला!
ನಿನ್ನೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಆರ್ಥಿಕ ಪ್ಯಾಕೇಜ್ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, "ಯಾವುದೇ ಕುಟುಂಬವು ತಮ್ಮ ಜೀವನ-ಆಹಾರ-ಔಷಧಿ-ಮಗುವಿನ ಶಾಲಾ ಶುಲ್ಕಕ್ಕಾಗಿ ಈ ಹಣವನ್ನು ಖರ್ಚು ಮಾಡಲು ಸಾಧ್ಯವಿಲ್ಲ. ಇದು ಪ್ಯಾಕೇಜ್ ಅಲ್ಲ" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ಈ ಬಿಕ್ಕಟ್ಟಿಗೆ ಬಡ, ಕೆಳ ಹಾಗು ಮಧ್ಯಮ ವರ್ಗದವರ ಖಾತೆಗಳಿಗೆ ಹಣವನ್ನು ಹಾಕುವುದೇ ಪರಿಹಾರ. ಉದ್ಯೋಗಗಳನ್ನು ಕಳೆದುಕೊಂಡಿರುವ ಮತ್ತು ಆದಾಯ ಅಥವಾ ವೇತನವನ್ನು ಕಡಿಮೆಗೊಳಿಸಿದ ಆರ್ಥಿಕತೆಯಲ್ಲಿ ಬೇಡಿಕೆ ಬೆಳೆಯುವುದಿಲ್ಲ. ಹಾಗಾಗಿ, ಜನರ ಕೈಯಲ್ಲಿ ಹಣವನ್ನು ನೀಡುವುದೇ ಪರಿಹಾರ" ಎಂದು ಪುನರುಚ್ಚರಿಸಿದ್ದಾರೆ.