ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 'ಸ್ವಜನ ಬಂಡವಾಳಶಾಹಿ'ಗಳಿಗಾಗಿ ಹಣ ಸಂಪಾದಿಸುತ್ತಿದ್ದಾರೆ. ಮೋದಿ ವಿರುದ್ಧ ದನಿ ಎತ್ತುವವರನ್ನು 'ಭಯೋತ್ಪಾದಕರು' ಎಂದು ಬಿಂಬಿಸಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂತನ ಕೃಷಿ ಕಾಯ್ದೆಗಳ ವಿರುದ್ಧ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗವು ರಾಷ್ಟ್ರಪತಿ ಭವನಕ್ಕೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದರು. ಕಾಯ್ದೆಗಳನ್ನು ಹಿಂಪಡೆಯಬೇಕು ಹಾಗೂ ರೈತರ ಪ್ರತಿಭಟನೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮಧ್ಯಸ್ಥಿಕೆ ವಹಿಸಬೇಕೆಂದು ಕೋರಿ ದೇಶದ 2 ಕೋಟಿ ಜನರ ಸಹಿಯುಳ್ಳ ಪತ್ರ ಸಲ್ಲಿಸಲು ಹೊರಟಿದ್ದರು. ಆದರೆ ಈ ವೇಳೆ ಕೈ ನಾಯಕಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಪಕ್ಷದ ಮುಖಂಡರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
-
PM Modi is making money for the crony capitalists. Whoever will try to stand against him will be called terrorist - be it farmers, labourers and even Mohan Bhagwat: Congress leader Rahul Gandhi pic.twitter.com/BnasthQBiX
— ANI (@ANI) December 24, 2020 " class="align-text-top noRightClick twitterSection" data="
">PM Modi is making money for the crony capitalists. Whoever will try to stand against him will be called terrorist - be it farmers, labourers and even Mohan Bhagwat: Congress leader Rahul Gandhi pic.twitter.com/BnasthQBiX
— ANI (@ANI) December 24, 2020PM Modi is making money for the crony capitalists. Whoever will try to stand against him will be called terrorist - be it farmers, labourers and even Mohan Bhagwat: Congress leader Rahul Gandhi pic.twitter.com/BnasthQBiX
— ANI (@ANI) December 24, 2020
ಇತ್ತ ರಾಷ್ಟ್ರಪತಿ ಭವನಕ್ಕೆ ರಾಹುಲ್ ಗಾಂಧಿ, ಗುಲಾಮ್ ನಬಿ ಆಜಾದ್ ಮತ್ತು ಅಧೀರ್ ರಂಜನ್ ಚೌಧರಿ ಭೇಟಿ ನೀಡಿದ್ದಾರೆ. ಭೇಟಿ ಬಳಿಕ ಪ್ರತಿಕ್ರಿಯೆ ನೀಡಿರುವ ರಾಗಾ, ಈ ಕೃಷಿ ಕಾನೂನುಗಳು ರೈತ ವಿರೋಧಿ. ರೈತರೇ ಇದರ ವಿರುದ್ಧವಾಗಿ ನಿಂತಿದ್ದಾರೆ. ಇದರಲ್ಲಿ ನಿಮ್ಮ ಮಧ್ಯಸ್ಥಿಕೆ ಅವಶ್ಯಕ ಎಂದು ರಾಷ್ಟ್ರಪತಿ ಅವರಿಗೆ ನಾನು ಮನವರಿಕೆ ಮಾಡಿಸಿದ್ದೇನೆ. ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ರೈತರು ಪ್ರತಿಭಟನಾ ಸ್ಥಳಿದಿಂದ ಮನೆಗೆ ಹಿಂದಿರುಗುವುದಿಲ್ಲ. ಸರ್ಕಾರವು ಸಂಸತ್ತಿನ ಜಂಟಿ ಅಧಿವೇಶನ ಕರೆಯಬೇಕು ಮತ್ತು ಈ ಕಾನೂನುಗಳನ್ನು ಹಿಂಪಡೆಯಬೇಕು ಎಂದು ನಾನು ಪಿಎಂ ಮೋದಿಗೆ ಆಗ್ರಹಿಸುತ್ತೇನೆ ಎಂದರು.
ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಮತ್ತಿತರ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರು
ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ಕೈ ನಾಯಕ, ಪಿಎಂ ಮೋದಿ ಸ್ವಜನ (ತಮಗೆ ಬೇಕಾದ) ಬಂಡವಾಳಶಾಹಿಗಳಿಗಾಗಿ ಹಣ ಸಂಪಾದಿಸುತ್ತಿದ್ದಾರೆ. ರೈತರು, ಕಾರ್ಮಿಕರು ಅಥವಾ ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಆಗಿರಲಿ, ಮೋದಿ ವಿರುದ್ಧವಾಗಿ ಯಾರೇ ನಿಂತರೂ ಅವರನ್ನು ಭಯೋತ್ಪಾದಕರು ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ. ಇದು ನಿಮ್ಮ ಕಲ್ಪನೆಯಲ್ಲಿರಬಹುದು, ಆದರೆ ವಾಸ್ತವದಲ್ಲಿ ಅಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ನೀವು ಏನನ್ನೂ ಅರ್ಥಮಾಡಿಕೊಳ್ಳದ ಅಸಮರ್ಥ ವ್ಯಕ್ತಿಯನ್ನು ಹೊಂದಿದ್ದೀರಿ ಮತ್ತು ಎಲ್ಲವನ್ನೂ ಅರ್ಥಮಾಡಿಕೊಳ್ಳುವ 3 ಅಥವಾ 4 ಜನರ ಪರವಾಗಿ ದೇಶದ ವ್ಯವಸ್ಥೆ ನಡೆಯುತ್ತಿದೆ ಎಂದು ರಾಗಾ ವ್ಯಂಗ್ಯವಾಡಿದರು. ಇನ್ನು ಭಾರತದ ಸಾವಿರಾರು ಕಿ.ಮೀ ಭೂಮಿಯನ್ನು ಚೀನಾ ಕಸಿದುಕೊಂಡಿದೆ. ಆದರೆ ಇದರ ಬಗ್ಗೆ ಪ್ರಧಾನಿ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.