ETV Bharat / bharat

ಗೋವಾಕ್ಕೆ ತೆರಳಿದ ರಾಹುಲ್ ಗಾಂಧಿ: ಮೀನುಗಾರರೊಂದಿಗೆ ಮಾತುಕತೆ

ಇಂದು ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಗೋವಾಗೆ ಭೇಟಿ ನೀಡಿ ಮೀನುಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಿಜೆಪಿ ನೀತಿಯ ವಿರುದ್ಧ ಕಿಡಿ ಕಾರಿದ್ದಾರೆ.

Rahul Gandhi
ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ
author img

By

Published : Oct 30, 2021, 2:21 PM IST

ಗೋವಾ: 2022ರಲ್ಲಿ ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳ ಸಿದ್ಧತೆ ಶುರುವಾಗಿದೆ. ಇಂದು ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಗೋವಾಗೆ ಭೇಟಿ ನೀಡಿ ಮೀನುಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ.

ಗೋವಾದಲ್ಲಿ ಸದ್ಯ ಬಿಜೆಪಿ ಸರ್ಕಾರವಿದೆ. 2022ಕ್ಕೆ ಅದರ ಅವಧಿ ಮುಗಿಯಲಿದ್ದು, ಫೆಬ್ರವರಿ - ಮಾರ್ಚ್​​ನಲ್ಲಿ ಚುನಾವಣೆ ನಡೆಯಲಿದೆ. ಗೋವಾದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಬಿಡಬಾರದು ಎಂದು ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್​ ಸೇರಿ ವಿವಿಧ ಪಕ್ಷಗಳು ಪಣತೊಟ್ಟಿವೆ.

  • Congress leader Rahul Gandhi interacts with members of the fishermen community in Velsao, Goa.

    We will not allow Goa to become a polluted place. We will not allow it to become a Coal hub. We are protecting the environment for everyone: Congress leader Rahul Gandhi pic.twitter.com/8EyU1b54Sj

    — ANI (@ANI) October 30, 2021 " class="align-text-top noRightClick twitterSection" data=" ">

ಗೋವಾದ ವೆಲ್ಸಾವೊದಲ್ಲಿ ಮೀನುಗಾರರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದರು. ಗೋವಾವನ್ನು ಕಲುಷಿತ ಪ್ರದೇಶವಾಗಲು ಬಿಡುವುದಿಲ್ಲ. ಕಲ್ಲಿದ್ದಲು ಹಬ್ ಆಗಲು ನಾವು ಬಿಡುವುದಿಲ್ಲ. ನಾವು ಎಲ್ಲರಿಗಾಗಿ ಪರಿಸರವನ್ನು ರಕ್ಷಣೆ ಮಾಡುವ ಕಾರ್ಯ ಮಾಡುತ್ತಿದ್ದೇವೆ. ಪರಿಸರ ರಕ್ಷಣೆ ಆಗಿಲಿದೆ ಎಂದರು.

ಇದನ್ನೂ ಓದಿ: ಇಟಲಿಯ ಟಾಪ್​-25 ವಿದ್ಯಾರ್ಥಿ ಲಿಸ್ಟ್​ನಲ್ಲಿ ಪಂಜಾಬಿ​ ಹುಡುಗಿ: ಆ ದೇಶದ ಅಧ್ಯಕ್ಷರಿಂದ ಸನ್ಮಾನ

ಛತ್ತೀಸ್‌ಗಢದಲ್ಲಿ ಚುನಾವಣೆ ಎದುರಿಸಿದೆವು. ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದೆವು. ಇದನ್ನು ಪಂಜಾಬ್, ಕರ್ನಾಟಕಕ್ಕೂ ಹೋಗಿ ನೀವು ಖಚಿತಪಡಿಸಿಕೊಳ್ಳಬಹುದು. ನಮ್ಮ ಪ್ರಣಾಳಿಕೆಯಲ್ಲಿ ಏನೇ ತಿಳಿಸಿದರೂ ಅದು ಖಾಲಿ ಭರವಸೆ ಮಾತ್ರವಲ್ಲ, ಅದನ್ನು ಈಡೇರಿಸುತ್ತೇವೆಂದು ಹೇಳಿದರು.

  • We fought elections in Chhattisgarh and promised to waive the loan of farmers and we did it. You can go and confirm it in Punjab, Karnataka also. Whatever goes in our manifesto is a guarantee, not only a promise: Congress leader Rahul Gandhi in Goa pic.twitter.com/fc2YCZCarb

ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ತುಂಬಾ ಕಡಿಮೆಯಾಗಿದೆ. ಆದರೆ, ನೀವು ಇನ್ನೂ ಹೆಚ್ಚು ಪಾವತಿಸುತ್ತಿದ್ದೀರ. ಇಂದು ಭಾರತವು ಇಂಧನಕ್ಕೆ ವಿಶ್ವದಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸುತ್ತಿದೆ. ನೀವು ಗಮನಿಸಿದರೆ, 4-5 ಉದ್ಯಮಿಗಳು ಇದರಿಂದ ಲಾಭ ಪಡೆಯುತ್ತಿದ್ದಾರೆಂದು ಆರೋಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.