ETV Bharat / bharat

ಛತ್ತೀಸ್‌ಗಢ ಸಿಎಂ ಬಘೇಲ್ - ಸಿಂಗ್‌ದೇವ್ ಮನಸ್ತಾಪ.. ಉಭಯ ನಾಯಕರ ಭೇಟಿಯಾದ ರಾಹುಲ್ ಗಾಂಧಿ - ಛತ್ತೀಸ್‌ಗಢ ಸಿಎಂ ಬಾಘೇಲ್ ಸಿಂಗ್‌ದೇವ್ ಮನಸ್ತಾಪ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ರಾಜ್ಯ ಆರೋಗ್ಯ ಸಚಿವ ಟಿಎಸ್ ಸಿಂಗ್ ದೇವ್ ಅವರನ್ನು ಭೇಟಿ ಮಾಡಿದರು.

ಕೈ ನಾಯಕ ರಾಹುಲ್ ಗಾಂಧಿ
ಕೈ ನಾಯಕ ರಾಹುಲ್ ಗಾಂಧಿ
author img

By

Published : Aug 24, 2021, 3:18 PM IST

ನವದೆಹಲಿ: ಉಭಯ ನಾಯಕರ ನಡುವೆ ನಡೆಯುತ್ತಿರುವ ಜಗಳವನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ರಾಜ್ಯ ಆರೋಗ್ಯ ಸಚಿವ ಟಿ.ಎಸ್.ಸಿಂಗ್‌ದೇವ್ ಅವರನ್ನು ಭೇಟಿ ಮಾಡಿದರು. ಛತ್ತೀಸ್‌ಗಢ ಕಾಂಗ್ರೆಸ್ ಉಸ್ತುವಾರಿ ಪಿಎಲ್ ಪುನಿಯಾ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಜೂನ್​ನಲ್ಲಿ ಭೂಪೇಶ್ ಬಘೇಲ್ ಸರ್ಕಾರವು ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದ್ದರೂ, ರಾಜ್ಯ ಆರೋಗ್ಯ ಸಚಿವ ಟಿ.ಎಸ್. ಸಿಂಗ್‌ದೇವ್ ಅವರ ಬೆಂಬಲಿಗರು ಮುಖ್ಯಮಂತ್ರಿ ಹುದ್ದೆಯ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಂದಿಗೂ ಈ ವಿಷಯದ ಬಗ್ಗೆ ಪ್ರಸ್ತಾಪಿಸದಿದ್ದರೂ, 2018 ರ ಚುನಾವಣೆಯ ನಂತರ ಪ್ರಸ್ತುತ ಸರ್ಕಾರದ ಆಡಳಿತದ ಕೊನೆಯ ಎರಡೂವರೆ ವರ್ಷಗಳಲ್ಲಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ದೇವ್ ಅವರ ಬೆಂಬಲಿಗರು ಹೇಳಿಕೊಂಡಿದ್ದಾರೆ.

ಓದಿ: ಅಫ್ಘನ್​ ಬಿಕ್ಕಟ್ಟು.. 45 ನಿಮಿಷಗಳ ಕಾಲ ರಷ್ಯಾ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ಮಾತುಕತೆ

ಈಗ ರಾಹುಲ್ ಗಾಂಧಿಯೊಂದಿಗೆ ಇಬ್ಬರೂ ನಾಯಕರ ಭೇಟಿಯು ಇಬ್ಬರು ನಾಯಕರ ನಡುವಿನ ವಿವಾದವನ್ನು ಕೊನೆಗೊಳಿಸುವ ನಿರೀಕ್ಷೆಯಿದೆ. ಪಂಜಾಬ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಕಾಂಗ್ರೆಸ್ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.