ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ದೆಹಲಿಯ ಜನನಿಬಿಡ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಹಮಾಲರನ್ನು ಭೇಟಿ ಮಾಡಿ ಸಂವಾದ ನಡೆಸಿದರು. ಕೂಲಿಗಳ ಕೆಂಪು ಶರ್ಟ್ ಧರಿಸಿ ತಲೆ ಮೇಲೆ ಸೂಟ್ಕೇಸ್ ಹೊತ್ತುಕೊಂಡು ರಾಹುಲ್ ಗಾಂಧಿ ಹಮಾಲರ ಶ್ರಮ ಹಾಗೂ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು.
-
जनता का नायक ❤️ pic.twitter.com/6MRkPTmlUM
— Srinivas BV (@srinivasiyc) September 21, 2023 " class="align-text-top noRightClick twitterSection" data="
">जनता का नायक ❤️ pic.twitter.com/6MRkPTmlUM
— Srinivas BV (@srinivasiyc) September 21, 2023जनता का नायक ❤️ pic.twitter.com/6MRkPTmlUM
— Srinivas BV (@srinivasiyc) September 21, 2023
ರೈಲು ನಿಲ್ದಾಣಕ್ಕೆ ಕಾಂಗ್ರೆಸ್ ಸಂಸದ ರಾಹುಲ್ ತೆರಳಿ ಸಂವಾದ ನಡೆಸಿರುವ ವಿಡಿಯೋ ತುಣುಕುಗಳನ್ನು ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ಗಮನ ಸೆಳೆಯುವ ಹಲವು ವಿಡಿಯೋಗಳು ವೈರಲ್ ಆಗಿವೆ. ರೈಲು ನಿಲ್ದಾಣದ ಕೂಲಿಗಳ ಸಮಸ್ಯೆಗಳ ಆಲಿಸಲು ಆಗಮಿಸಿದ್ದ ರಾಹುಲ್ ಗಾಂಧಿ ಅವರನ್ನು ಕಾರ್ಮಿಕರು ಆತ್ಮೀಯವಾಗಿ ಸ್ವಾಗತಿಸಿದರು.
-
कुली भाइयों के बीच जननायक pic.twitter.com/nor4tSyoR8
— Congress (@INCIndia) September 21, 2023 " class="align-text-top noRightClick twitterSection" data="
">कुली भाइयों के बीच जननायक pic.twitter.com/nor4tSyoR8
— Congress (@INCIndia) September 21, 2023कुली भाइयों के बीच जननायक pic.twitter.com/nor4tSyoR8
— Congress (@INCIndia) September 21, 2023
ಕೆಂಪು ಅಂಗಿ ತೊಟ್ಟು ತಲೆಯ ಮೇಲೆ ಟ್ರಾಲಿ ಬ್ಯಾಗ್ ಹೊತ್ತ ಸ್ವಲ್ಪ ದೂರ ಸಾಗಿಸಿದ ರಾಹುಲ್ ಅವರನ್ನು ಹಲವು ಹಮಾಲರು ಸುತ್ತುವರೆದಿದ್ದರು. ಈ ವೇಳೆ, ರಾಹುಲ್ ಗಾಂಧಿ ಜಿಂದಾಬಾದ್ ಎಂಬ ಘೋಷಣೆಗಳು ಕೂಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ನಂತರ ರಾಹುಲ್ ಕೂಲಿಗಳು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಂವಾದ ನಡೆಸಿದರು. ಕೂಲಿಗಳ ಗುಂಪಿನಲ್ಲಿ ಕುಳಿತು ಸಮಚಿತ್ತದಿಂದ ಸಮಸ್ಯೆಗಳನ್ನು ಆಲಿಸಿದರು. ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ಅವರನ್ನು ಜನನಾಯಕ ಎಂದು ಬಣ್ಣಿಸಿದೆ. ಶ್ರಮಿಕ ವರ್ಗದ ಹಮಾಲಿಗಳ ಕಷ್ಟಗಳಿಗೆ ಕಿವಿಗೊಡಲು ರಾಹುಲ್ ಇದ್ದಾರೆ ಎಂದೂ ಒತ್ತಿ ಹೇಳಿದೆ.
-
जननायक राहुल गांधी जी आज दिल्ली के आनंद विहार रेलवे स्टेशन पर कुली साथियों से मिले।
— Congress (@INCIndia) September 21, 2023 " class="align-text-top noRightClick twitterSection" data="
पिछले दिनों एक वीडियो वायरल हुआ था जिसमें रेलवे स्टेशन के कुली साथियों ने उनसे मिलने की इच्छा जाहिर की थी।
आज राहुल जी उनके बीच पहुंचे और इत्मीनान से उनकी बात सुनी।
भारत जोड़ो यात्रा जारी है.. pic.twitter.com/QrjtmEMXmZ
">जननायक राहुल गांधी जी आज दिल्ली के आनंद विहार रेलवे स्टेशन पर कुली साथियों से मिले।
— Congress (@INCIndia) September 21, 2023
पिछले दिनों एक वीडियो वायरल हुआ था जिसमें रेलवे स्टेशन के कुली साथियों ने उनसे मिलने की इच्छा जाहिर की थी।
आज राहुल जी उनके बीच पहुंचे और इत्मीनान से उनकी बात सुनी।
भारत जोड़ो यात्रा जारी है.. pic.twitter.com/QrjtmEMXmZजननायक राहुल गांधी जी आज दिल्ली के आनंद विहार रेलवे स्टेशन पर कुली साथियों से मिले।
— Congress (@INCIndia) September 21, 2023
पिछले दिनों एक वीडियो वायरल हुआ था जिसमें रेलवे स्टेशन के कुली साथियों ने उनसे मिलने की इच्छा जाहिर की थी।
आज राहुल जी उनके बीच पहुंचे और इत्मीनान से उनकी बात सुनी।
भारत जोड़ो यात्रा जारी है.. pic.twitter.com/QrjtmEMXmZ
''ಜನನಾಯಕ ರಾಹುಲ್ ಗಾಂಧಿ ಅವರು ಇಂದು ದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಕೂಲಿ ಸಹೋದ್ಯೋಗಿಗಳನ್ನು ಭೇಟಿ ಮಾಡಿದರು. ಇತ್ತೀಚೆಗೆ, ರೈಲ್ವೆ ನಿಲ್ದಾಣದ ಹಮಾಲರ ಸಹೋದ್ಯೋಗಿಗಳು ರಾಹುಲ್ ಅವರನ್ನು ಭೇಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗಿತ್ತು. ಅಂತೆಯೇ, ಇಂದು ರಾಹುಲ್ ಅವರು ಕೂಲಿಗಳ ಮಧ್ಯೆ ಹೋಗಿ ಶಾಂತವಾಗಿ ಅವರ ಸಮಸ್ಯೆಗಳನ್ನು ಆಲಿಸಿದರು.. ಭಾರತ್ ಜೋಡೋ ಪಯಣ ಮುಂದುವರೆಯುತ್ತದೆ'' ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿದೆ.
ರಾಹುಲ್ ಗಾಂಧಿ ಅವರ ಕೂಲಿಗಳ ಭೇಟಿಯು ಸಮಾಜದ ವಿವಿಧ ವರ್ಗಗಳೊಂದಿಗೆ ತೊಡಗಿಸಿಕೊಳ್ಳುವುದು ಮತ್ತು ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳ ಭಾಗವಾಗಿದೆ. ಈ ಹಿಂದೆ, ಬೆಂಗಳೂರಿನಲ್ಲಿ ಡೆಲಿವರಿ ಬಾಯ್ಸ್ಗಳನ್ನು ರಾಹುಲ್ ಗಾಂಧಿ ಭೇಟಿಯಾಗಿದ್ದರು. ಅಲ್ಲದೇ, ನಿತ್ಯದ ಸವಾಲುಗಳನ್ನು ಅರಿತುಕೊಳ್ಳಲು ಸ್ಕೂಟರ್‌ನಲ್ಲಿ ಪ್ರಯಾಣಿಸಿದ್ದರು. ಇದಾದ ಬಳಿಕ ದೆಹಲಿಯ ಆಜಾದ್‌ಪುರ ಮಂಡಿಗೂ ರಾಹುಲ್ ಭೇಟಿ ನೀಡಿದ್ದರು. ಅಲ್ಲಿ ವ್ಯಾಪಾರಿಗಳು ಮತ್ತು ಕಾರ್ಮಿಕರೊಂದಿಗೆ ಸಂವಾದ ನಡೆಸಿದ್ದರು. ಟ್ರಕ್ ಚಾಲಕರು ಹಾಗೂ ರೈತರ ಸಮಸ್ಯೆಗಳ ಆಲಿಸಲು ಅವರನ್ನೂ ರಾಹುಲ್ ಗಾಂಧಿ ಭೇಟಿ ಮಾಡಿದ್ದರು.
ಇದನ್ನೂ ಓದಿ: ಟ್ರಕ್‌ನಲ್ಲಿ ಪ್ರಯಾಣಿಸಿ ಚಾಲಕರ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ: ವಿಡಿಯೋ ವೈರಲ್