ETV Bharat / bharat

3 ವರ್ಷದ ಅವಧಿಗೆ ರಾಹುಲ್ ಗಾಂಧಿಗೆ ಸಾಮಾನ್ಯ ಪಾಸ್‌ಪೋರ್ಟ್: ಎನ್‌ಒಸಿ ನೀಡಿದ ಕೋರ್ಟ್ - ಎನ್‌ಒಸಿ ನೀಡಿದ ಕೋರ್ಟ್

ಜೂನ್ ಮೊದಲ ವಾರದಲ್ಲಿ ರಾಹುಲ್​ ಗಾಂಧಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ಸಾಮಾನ್ಯ ಪಾಸ್‌ಪೋರ್ಟ್​ಗೆ ನ್ಯಾಯಾಲಯದ ಮೊರೆ ಹೋಗಿದ್ದರು.

Rahul Gandhi
ರಾಹುಲ್ ಗಾಂಧಿ
author img

By

Published : May 26, 2023, 7:31 PM IST

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮೂರು ವರ್ಷಗಳ ಕಾಲ ಸಾಮಾನ್ಯ ಪಾಸ್‌ಪೋರ್ಟ್ ನೀಡುವುದಕ್ಕೆ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‌ಒಸಿ) ನೀಡಲು ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಮಂಜೂರು ಮಾಡಿದೆ. ಎನ್‌ಒಸಿ ನೀಡಲು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ರಾಹುಲ್​ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್​ ಅನ್ನೂ ಒಪ್ಪಿಸಿದ್ದರು. ಹೀಗಾಗಿ ಸಾಮಾನ್ಯ ಪಾಸ್‌ಪೋರ್ಟ್​ಗೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವೈಭವ್ ಮೆಹ್ತಾ, ''ನಾವು ನಿಮ್ಮ ಅರ್ಜಿಯನ್ನು ಭಾಗಶಃ ಅನುಮತಿಸುತ್ತಿದ್ದೇವೆ. ಆದರೆ, 10 ವರ್ಷಗಳಲ್ಲ ಅವಧಿಗೆ ಅಲ್ಲ ಬದಲಿಗೆ ಮೂರು ವರ್ಷಕ್ಕೆ ಮಾತ್ರ'' ಎಂದು ರಾಹುಲ್​ ಗಾಂಧಿ ಪರ ವಕೀಲರಿಗೆ ತಿಳಿಸಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್​ ಗಾಂಧಿ ಆರೋಪಿಯಾಗಿದ್ದು, ಈ ಪ್ರಕರಣದ ದೂರುದಾರರಾದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ರಾಹುಲ್ ಪಾಸ್‌ಪೋರ್ಟ್​ಗೆ ಆಕ್ಷೇಪಣೆ ಸಲ್ಲಿಸಿದ್ದರು. ಆದರೆ, ನ್ಯಾಯಾಲಯವು ನ್ಯಾಷನಲ್ ಹೆರಾಲ್ಡ್ ಪ್ರಕರಣವು ದೂರುದಾರರ ಕ್ರಾಸ್ ಎಕ್ಸಾಮಿನೇಷನ್ ಹಂತದಲ್ಲಿ ಬಾಕಿ ಉಳಿದಿದೆ. ಅಲ್ಲದೇ, ರಾಹುಲ್​ ಗಾಂಧಿಯವರು ನಿಯಮಿತವಾಗಿ ವೈಯಕ್ತಿಕ ಅಥವಾ ಅವರ ವಕೀಲರ ಮೂಲಕ ಹಾಜರಾಗುತ್ತಿದ್ದಾರೆ. ಆದ್ದರಿಂದ ವಿಚಾರಣೆಗೆ ಅಡ್ಡಿಯಾಗುವುದಿಲ್ಲ ಅಥವಾ ವಿಳಂಬ ಆಗಲ್ಲ ಎಂಬುವುದನ್ನು ಗಮನಿಸಿತು.

ಮುಂದುವರೆದು, ''ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ವಿದೇಶಕ್ಕೆ ಪ್ರಯಾಣಿಸಲು ಅರ್ಜಿದಾರರ ಹಕ್ಕುಗಳನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕು. ಆದ್ದರಿಂದ, ಎರಡೂ ಕಡೆಯ ಅರ್ಜಿಗಳು ಮತ್ತು ದಾಖಲೆಯ ಪರಿಶೀಲನೆಯ ನಂತರ ತೀರ್ಮಾನದ ದೃಷ್ಟಿಕೋನವನ್ನು ಹೊಂದಲಾಗಿದೆ. ಮೂರು ವರ್ಷಗಳ ಅವಧಿಗೆ ನಿಯಮಗಳ ಪ್ರಕಾರ ಅರ್ಜಿದಾರರ ಪಾಸ್‌ಪೋರ್ಟ್​ಅನ್ನು ನವೀಕರಿಸಲು ಎನ್‌ಒಸಿ ನೀಡಿದರೆ ಸಾಕು'' ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಸ್ವಾಮಿ ಆಕ್ಷೇಪ ಏನು?: ಇದಕ್ಕೆ ಮುನ್ನ ರಾಹುಲ್​ ಪಾಸ್‌ಪೋರ್ಟ್​ಗೆ ಸುಬ್ರಮಣಿಯನ್ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಈ ಅರ್ಜಿ ಯಾವುದೇ ಅರ್ಹತೆ ಹೊಂದಿಲ್ಲ. ಒಂದು ವರ್ಷ ಅವಧಿಗೆ ಮಾತ್ರ ಪಾಸ್‌ಪೋರ್ಟ್​ ನೀಡಬೇಕು. ನಂತರ ಪ್ರತಿ ವರ್ಷ ನವೀಕರಿಸಬೇಕು. ಇದೊಂದು ವಿಶೇಷ ಪ್ರಕರಣವಾಗಿದ್ದು, 10 ವರ್ಷಗಳವರೆಗೆ ನೀಡಬಾರದು. ಅಲ್ಲದೇ, ರಾಹುಲ್​ ಗಾಂಧಿಯವರ ಭಾರತೀಯ ಪೌರತ್ವದ ಬಗ್ಗೆಯೂ ಪ್ರಶ್ನಿಸಲಾಗಿದೆ. ಅವರು ಬ್ರಿಟಿಷ್ ಪ್ರಜೆ ಎಂದು ಆರೋಪಿಸಿದರು.

ಮತ್ತೊಂದೆಡೆ, ರಾಹುಲ್​ ಪರ ವಕೀಲ ತರನ್ನುಮ್ ಚೀಮಾ ವಾದ ಮಂಡಿಸಿ, ಪೌರತ್ವ ವಿಷಯದ ಕುರಿತ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಾರಂಭಿಸುವಂತೆ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಈಗಾಗಲೇ ಉನ್ನತ ನ್ಯಾಯಾಲಯಗಳು ವಜಾಗೊಳಿಸಿವೆ. ಹೆಚ್ಚು ಗಂಭೀರವಾದ ಅಪರಾಧಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಉನ್ನತ ನ್ಯಾಯಾಲಯಗಳು ಇಂತಹ ಪರಿಹಾರವನ್ನು ನೀಡಿರುವುದರಿಂದ 10 ವರ್ಷಗಳವರೆಗೆ ಪಾಸ್‌ಪೋರ್ಟ್ ನೀಡಲು ಅನುಮತಿಸುವಂತೆ ಮನವಿ ಮಾಡಿದರು. ಎರಡೂ ಕಡೆಗಳ ವಾದ - ಪ್ರತಿವಾದ ಆಲಿಸಿದ್ದ ನ್ಯಾಯಾಲಯವು ಈ ಅಂತಿಮವಾಗಿ ಮೂರು ವರ್ಷಗಳಿಗೆ ಎನ್‌ಒಸಿ ನೀಡಲು ಒಪ್ಪಿತು.

ಜೂನ್ ಮೊದಲ ವಾರದಲ್ಲಿ ರಾಹುಲ್​ ಗಾಂಧಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ಭೇಟಿ ನೀಡಲಿದ್ದಾರೆ. ಈ ಸಮಯದಲ್ಲಿ ಹಲವು ಸಭೆಗಳಲ್ಲಿ ಭಾಗವಹಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಇದನ್ನೂ ಓದಿ: ಮೋದಿ ಭೇಟಿಗೂ ಮುನ್ನ ಜೂನ್‌ನಲ್ಲಿ ರಾಹುಲ್ ಗಾಂಧಿ ಅಮೆರಿಕ ಪ್ರವಾಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.