ನವದೆಹಲಿ: ದೇಶದಲ್ಲಿನ ಹಣದುಬ್ಬರ ಹಾಗೂ ಅಡುಗೆ ಅನಿಲ ದರ ಏರಿಕೆ ವಿಚಾರವಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
-
जैसे-जैसे महंगाई बढ़ी,
— Rahul Gandhi (@RahulGandhi) December 1, 2021 " class="align-text-top noRightClick twitterSection" data="
जुमलों के भाव गिर गए।#LPG #Pricehike pic.twitter.com/iuu751S8ZY
">जैसे-जैसे महंगाई बढ़ी,
— Rahul Gandhi (@RahulGandhi) December 1, 2021
जुमलों के भाव गिर गए।#LPG #Pricehike pic.twitter.com/iuu751S8ZYजैसे-जैसे महंगाई बढ़ी,
— Rahul Gandhi (@RahulGandhi) December 1, 2021
जुमलों के भाव गिर गए।#LPG #Pricehike pic.twitter.com/iuu751S8ZY
ದೇಶದಲ್ಲಿ ಹಣದುಬ್ಬರ ಏರಿಕೆಯೊಂದಿಗೆ ಕೇಂದ್ರದ ವಾಕ್ಚಾತುರ್ಯದ ಮಾತುಗಳು ಕುಸಿತಗೊಂಡಿವೆ ಎಂದು ಟ್ವೀಟ್ ಮಾಡಿ, ಕೇಂದ್ರದ ಕಾಲೆಳೆದಿದ್ದಾರೆ. ರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ಗಳ ಮೇಲೆ 100.50 ಪೈಸೆ ಏರಿಕೆಯಾಗಿದ್ದು, ಈ ಮೂಲಕ 2,101 ರೂ. ಆಗಿದೆ.
ಈ ದರ ಇಂದಿನಿಂದಲೇ ಜಾರಿಗೊಂಡಿರುವ ಕಾರಣ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಿದೆ. 2012-13ರ ನಂತರ 19 ಕೆಜಿ ವಾಣಿಜ್ಯ ಸಿಲಿಂಡರ್ನ ಬೆಲೆಯಲ್ಲಿ ಅತಿ ಹೆಚ್ಚಿನ ಏರಿಕೆ ಕಂಡು ಬಂದಿದ್ದು, ಹೀಗಾಗಿ ಕೇಂದ್ರದ ವಿರುದ್ಧ ಆಕ್ರೋಶ ಕೇಳಿ ಬರುತ್ತಿದೆ. ಮನೆಯಲ್ಲಿ ಬಳಕೆಯಾಗುತ್ತಿರುವ 14.2 ಕೆಜಿ ಸಿಲಿಂಡರ್ ಬೆಲೆ 899.50 ಪೈಸೆ ಆಗಿದ್ದು, ಇದರಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ.
ಇದನ್ನೂ ಓದಿರಿ: ದೆಹಲಿಯಲ್ಲಿ ಪೆಟ್ರೋಲ್ ದರ 8 ರೂಪಾಯಿ ಇಳಿಕೆ.. ಮಧ್ಯರಾತ್ರಿಯಿಂದಲೇ ಜಾರಿ..
ಕಳೆದ ಕೆಲ ದಿನಗಳ ಹಿಂದೆ ಒಮಿಕ್ರೋನ್ ವಿಚಾರವಾಗಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ದೇಶದ ಜನರಿಗೆ ಲಸಿಕೆಯ ಭದ್ರತೆ ಒದಗಿಸುವಂತೆ ಟ್ವೀಟ್ ಮಾಡಿದ್ದರು. ಜೊತೆಗೆ ಓರ್ವ ವ್ಯಕ್ತಿಯ ಫೋಟೋದೊಂದಿಗೆ ವ್ಯಾಕ್ಸಿನೇಷನ್ನ ನಿಜವಾದ ಅಂಕಿ - ಅಂಶ ಹೆಚ್ಚಿನ ಕಾಲ ಮುಚ್ಚಿಡಲು ಸಾಧ್ಯವಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು.