ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಚೀನಾ ಗ್ರಾಮವೊಂದನ್ನು ನಿರ್ಮಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅವರ ಭರವಸೆಯನ್ನು ನೆನಪಿಡಿ. ನಾನು ದೇಶ ತಲೆ ಬಾಗಲು ಬೀಡುವುದಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಚೀನಾ ಗ್ರಾಮ ನಿರ್ಮಿಸಿದೆ ಎಂದು ಹೇಳಲಾದ ಸುದ್ದಿಯ ವರದಿಯ ಲಿಂಕ್ ಅನ್ನು ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೆವಾಲಾ ಕೂಡ ಈ ಬಗ್ಗೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿ, ಮೋದಿಜಿ 56 ಇಂಚಿನ ಎದೆ ಎಲ್ಲಿದೆ ಎಂದು ಅವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.
ವರದಿಗಳ ಬಗ್ಗೆ ಎಚ್ಚರಿಕೆಯ ಪ್ರತಿಕ್ರಿಯೆಯಾಗಿ ಭಾರತವು ದೇಶದ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ನಿರಂತರ ನಿಗಾ ಇಡುತ್ತದೆ. ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಕಾಪಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸೋಮವಾರ ಹೇಳಿತ್ತು.
ಅರುಣಾಚಲ ಪ್ರದೇಶದ ವಿವಾದಿತ ಪ್ರದೇಶದಲ್ಲಿ ಚೀನಾ 100 ಮನೆಗಳ ಗ್ರಾಮವನ್ನು ನಿರ್ಮಿಸಿದೆ ಎಂದು ಬಿಜೆಪಿ ಸಂಸದ ತಪೀರ್ ಗಾವೊ ಹೇಳಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು ಸೋಮವಾರ ಸರ್ಕಾರದಿಂದ ಉತ್ತರ ಕೋರಿದ್ದರು.
ಬಿಜೆಪಿ ಸಂಸದರು ಮಾಡಿದ ಆರೋಪ ನಿಜವಾಗಿದ್ದರೆ, ಸರ್ಕಾರ ಮತ್ತೆ ಚೀನಾಕ್ಕೆ ಕ್ಲೀನ್ ಚಿಟ್ ನೀಡುತ್ತದೆಯೇ ಅಥವಾ ಹಿಂದಿನ ಸರ್ಕಾರಗಳನ್ನು ದೂಷಿಸುತ್ತದೆ ಎಂದರು.
ಬಿಜೆಪಿಗೆ ಸೇರಿದ ತಪೀರ್ ಗಾವೊ ಸಂಸದ, ಅರುಣಾಚಲ ಪ್ರದೇಶ ವ್ಯಾಪ್ತಿಯಲ್ಲಿ ಭಾರತದ ಭೂಪ್ರದೇಶಕ್ಕೆ ಸೇರಿದ ವಿವಾದಿತ ಪ್ರದೇಶದಲ್ಲಿ ಚೀನಿಯರು 100 ಮನೆಗಳ ಗ್ರಾಮ, ಬಜಾರ್ ಮತ್ತು ಎರಡು ಪಥದ ರಸ್ತೆ ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರ ಗ್ರಾಪಂ ಚುನಾವಣಾ ಫಲಿತಾಂಶದ ಅಚ್ಚರಿ: ಗಂಡನನ್ನೇ ಹೊತ್ತುಕೊಂಡ ಪತ್ನಿ..!
ಇದು ನಿಜವಾಗಿದ್ದರೆ ವಿವಾದಿತ ಪ್ರದೇಶವನ್ನು ಚೀನಾದ ಪ್ರಜೆಗಳ ಶಾಶ್ವತ ವಸಾಹತು ಪ್ರದೇಶವನ್ನಾಗಿ ಪರಿವರ್ತಿಸುವ ಮೂಲಕ ಚೀನಿಯರು ಯಥಾಸ್ಥಿತಿಯನ್ನು ಬದಲಾಯಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಅಚ್ಚರಿಯ ಸಂಗತಿಗಳ ಬಗ್ಗೆ ಸರ್ಕಾರಕ್ಕೆ ಏನು ಹೇಳಬೇಕು" ಎಂದು ಅವರು ಟ್ವಿಟರ್‌ನಲ್ಲಿ ಕೇಳಿದರು.
ಭಾರತ-ಚೀನಾ ಗಡಿ ವಿವಾದವು 3,488 ಕಿ.ಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಒಳಗೊಂಡಿದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಹೇಳಿಕೊಳ್ಳುತ್ತಿದೆ.