ನವದೆಹಲಿ : ರಫೇಲ್ ರಕ್ಷಣಾ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಮತ್ತೆ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. ಈ ಬಗ್ಗೆ ರಾಹುಲ್ ಗಾಂಧಿ ಮಾತು ಹೀಗಿದೆ.. ’’ಅವರು ಮಾಡಿರುವ ಕರ್ಮದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ವಿಮಾನ ತಯಾರಕ ಸಂಸ್ಥೆ ಡಸಾಲ್ಟ್ನಿಂದ ಮಧ್ಯವರ್ತಿಗಳಿಗೆ 1.1 ಮಿಲಿಯನ್ ಯೂರೋ ಪಾವತಿ ಮಾಡಲಾಗಿದೆ ಎಂಬ ವಿಷಯವನ್ನ ಪ್ರೆಂಚ್ ಮಾಧ್ಯಮವೊಂದು ವರದಿ ಮಾಡಿತ್ತು.
ಈ ಹಿನ್ನೆಲೆಯಲ್ಲಿ ರಫೇಲ್ ವಿವಾದ ಮತ್ತೆ ಸದ್ದು ಮಾಡುತ್ತಿದೆ. ಪ್ರೆಂಚ್ ಮಾಧ್ಯಮವೊಂದರ ಆರೋಪವನ್ನ ಕೇಂದ್ರ ಸರ್ಕಾರ ಮತ್ತೆ ಮತ್ತೆ ಅಲ್ಲಗಳೆದಿದೆ. ಈ ನಡುವೆ ಪ್ರತಿಪಕ್ಷ ರಾಹುಲ್ ಗಾಂಧಿ ಮಾತ್ರ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಲೇ ಇದ್ದಾರೆ. ಇದಕ್ಕೆ ಇಂಬು ನೀಡುವಂತೆ ಫ್ರಾನ್ಸನ್ ಮಾಧ್ಯಮ ಡಸಾಲ್ಟ್ ಕಂಪನಿ ಮಧ್ಯವರ್ತಿಗಳಿಗೆ ಹಣ ಸಂದಾಯ ಮಾಡಿರುವುದಾಗಿ ಆರೋಪಿಸಿದೆ.
-
Karma = The ledger of one's actions.
— Rahul Gandhi (@RahulGandhi) April 6, 2021 " class="align-text-top noRightClick twitterSection" data="
Nobody escapes it.#Rafale
">Karma = The ledger of one's actions.
— Rahul Gandhi (@RahulGandhi) April 6, 2021
Nobody escapes it.#RafaleKarma = The ledger of one's actions.
— Rahul Gandhi (@RahulGandhi) April 6, 2021
Nobody escapes it.#Rafale
ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಮಾಡಿರುವ ಆರೋಪ ನಿಜ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. 'ಮಾಡಿದ ಕರ್ಮ ಅವರವರ ಖಾತೆಯಲ್ಲಿ ಬರೆದಿಡಲಾಗುತ್ತೆ. ಅದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವೇ ಇಲ್ಲ' ಎಂದು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಟ್ವೀಟ್ ಮಾಡಿ ರಫೇಲ್ ಹಗರಣದ ಬಗ್ಗೆ ಮತ್ತೆ ಪ್ರಸ್ತಾಪಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಫೇಲ್ ಒಪ್ಪಂದದ ಬಗ್ಗೆ ಭಾರಿ ಪ್ರಚಾರ ನಡೆಸಿತ್ತು. ಮೋದಿ ಸರ್ಕಾರವನ್ನ ಇದೇ ವಿಷಯ ಇಟ್ಟುಕೊಂಡು ಇಕ್ಕಟ್ಟಿಗೆ ಸಿಲುಕಿಸಿತ್ತು.
ಇದನ್ನೂ ಓದಿ: ಕಾಂಗ್ರೆಸ್-ಸಿಪಿಎಂ ಘರ್ಷಣೆ ನೋಡಿದ ವೃದ್ಧ ಕುಸಿದು ಬಿದ್ದು ಸಾವು