ನವದೆಹಲಿ: ಪ್ರತಿಭಟನೆಯ ಸಂದರ್ಭದಲ್ಲಿ ಮೃತಪಟ್ಟ ರೈತರಿಗೆ ಗೌರವ ಸಲ್ಲಿಸದ ಕಾರಣ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಪ್ರಾಣ ತ್ಯಾಗ ಮಾಡಿದ 300 ರೈತರ ನೆನಪಿಗಾಗಿ ನಮ್ಮ ಎರಡು ನಿಮಿಷಗಳ ಮೌನವನ್ನು ಬಿಜೆಪಿ ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ರೈತರ ಆಂದೋಲನದಲ್ಲಿ 300 ರೈತರು ಈವರೆಗೆ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದನ್ನು ತಿಳಿಸಲು ಅವರು ‘300DeathsAtProtest’ ಎಂಬ ಹ್ಯಾಶ್‌ಟ್ಯಾಗ್ ಆರಂಭ ಮಾಡಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ ರಾಹುಲ್, ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಇಪಿಎಫ್ ಖಾತೆಗಳನ್ನು ಮುಚ್ಚಲಾಗಿದೆ ಎಂದು ವರದಿಯನ್ನು ಉಲ್ಲೇಖಿಸಿ, ಇದು ಬಿಜೆಪಿ ಸರ್ಕಾರದ “ಉದ್ಯೋಗ ನಿರ್ಮೂಲನೆ” ಯ ಮತ್ತೊಂದು ಸಾಧನೆ ಎಂದು ಕಿಡಿಕಾರಿದ್ದಾರೆ.