ನವದೆಹಲಿ: ದೇಶದಲ್ಲಿ ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್) ಅಥವಾ ಮ್ಯೂಕಾರ್ಮೈಕೋಸಿಸ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
"ಬ್ಲ್ಯಾಕ್ ಫಂಗಸ್ ಮಹಾಮಾರಿ ಬಗ್ಗೆ ಕೇಂದ್ರ ಸರ್ಕಾರ ಮೂರು ವಿಚಾರಗಳನ್ನು ಸ್ಪಷ್ಟಪಡಿಸಬೇಕು - 1.ಆಂಫೊಟೆರಿಸಿನ್ ಬಿ ಔಷಧಿ ಕೊರತೆಗೆ ಏನು ಮಾಡಲಾಗುತ್ತಿದೆ? 2.ಔಷಧಿಯನ್ನು ರೋಗಿಗಳಿಗೆ ನೀಡುವ ವಿಧಾನವೇನು? 3.ಚಿಕಿತ್ಸೆ ನೀಡುವ ಬದಲು ಜನರಿಗೆ ಏಕೆ ಮೋದಿ ಸರ್ಕಾರ ತೊಂದರೆಗೆ ಒಳಗಾಗುವಂತೆ ಮಾಡುತ್ತಿದೆ?" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
-
Black fungus महामारी के बारे में केंद्र सरकार स्पष्ट करे-
— Rahul Gandhi (@RahulGandhi) June 1, 2021 " class="align-text-top noRightClick twitterSection" data="
1. Amphotericin B दवाई की कमी के लिए क्या किया जा रहा है?
2. मरीज़ को ये दवा दिलाने की क्या प्रक्रिया है?
3. इलाज देने की बजाय मोदी सरकार जनता को औपचारिकताओं में क्यों फँसा रही है?
">Black fungus महामारी के बारे में केंद्र सरकार स्पष्ट करे-
— Rahul Gandhi (@RahulGandhi) June 1, 2021
1. Amphotericin B दवाई की कमी के लिए क्या किया जा रहा है?
2. मरीज़ को ये दवा दिलाने की क्या प्रक्रिया है?
3. इलाज देने की बजाय मोदी सरकार जनता को औपचारिकताओं में क्यों फँसा रही है?Black fungus महामारी के बारे में केंद्र सरकार स्पष्ट करे-
— Rahul Gandhi (@RahulGandhi) June 1, 2021
1. Amphotericin B दवाई की कमी के लिए क्या किया जा रहा है?
2. मरीज़ को ये दवा दिलाने की क्या प्रक्रिया है?
3. इलाज देने की बजाय मोदी सरकार जनता को औपचारिकताओं में क्यों फँसा रही है?
ಇದನ್ನೂ ಓದಿ: ಬ್ಲ್ಯಾಕ್ ಫಂಗಸ್ ಮಾರಿಗೆ ಸಿಗದ ಔಷಧಿ.. ಚಿಕಿತ್ಸೆ ನೀಡಬೇಕಾದ ವೈದ್ಯರ ಅಸಹಾಯಕತೆ..
ಭೀಕರ ಪರಿಸ್ಥಿತಿಗೆ ಕಾರಣವಾಗಿರುವ ಕೋವಿಡ್ ಜೊತೆಗೆ ಭಾರತ ಈಗ ಬಣ್ಣ ಬಣ್ಣದ ಶಿಲೀಂಧ್ರ ಸೋಂಕಿಗೂ ಸಾಕ್ಷಿಯಾಗಿದೆ. ಕಪ್ಪು, ಬಿಳಿ, ಹಳದಿ, ಕ್ರೀಮ್ ಬಣ್ಣದ ಫಂಗಸ್ ಪ್ರಕರಣಗಳು ಈಗಾಗಲೇ ವರದಿಯಾಗಿದ್ದು, ಸಾವಿನ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಿದೆ.
ಕರ್ನಾಟಕದಲ್ಲಿ ಈವರೆಗೆ 1,250 ಮಂದಿಗೆ ಬ್ಲ್ಯಾಕ್ ಫಂಗಸ್ ಅಂಟಿರುವುದು ವರದಿಯಾಗಿದ್ದು, ಇವರಲ್ಲಿ 39 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಮಧ್ಯಪ್ರದೇಶದಲ್ಲಿ 39 ಜನರು ಸಾವನ್ನಪ್ಪಿದ್ದಾರೆ.