ETV Bharat / bharat

ನೋಡಿ.. ಮೇಕೆಯನ್ನು ನುಂಗಲು ಯತ್ನಿಸಿದ ಹೆಬ್ಬಾವು.. - ಮೇಕೆಯನ್ನು ನುಂಗಲು ಯತ್ನಿಸಿದ ಹೆಬ್ಬಾವು

ಬಿಹಾರದಲ್ಲಿರುವ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿರುವ ವಾಲ್ಮೀಕಿ ಹುಲಿ ಸಂರಕ್ಷಿತ ತಾಣದ ಬಳಿ ಹೆಬ್ಬಾವೊಂದು ಮೇಕೆಯನ್ನು ಕೊಂದಿದ್ದು, ನುಂಗಲು ಯತ್ನಿಸಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ..

python-trying-to-swallow-a-goat-in- Bihar
ನೋಡಿ.. ಮೇಕೆಯನ್ನು ನುಂಗಲು ಯತ್ನಿಸಿದ ಹೆಬ್ಬಾವು..
author img

By

Published : Mar 26, 2022, 3:12 PM IST

Updated : Mar 26, 2022, 3:33 PM IST

ಪಶ್ಚಿಮ ಚಂಪಾರಣ್, ಬಿಹಾರ : ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಇದು ಮತ್ತೊಂದು ಉದಾಹರಣೆ. ಇಲ್ಲಿರುವ ವಾಲ್ಮೀಕಿ ಹುಲಿ ಸಂರಕ್ಷಿತ ತಾಣದ ಪ್ರಾಣಿಗಳು ಸುತ್ತಮುತ್ತಲಿನ ಹಳ್ಳಿಗಳಿಗೆ ಆಗಾಗ ಪ್ರವೇಶಿಸಿ, ಜನರಲ್ಲಿ ಆತಂಕವನ್ನು ಉಂಟು ಮಾಡುತ್ತಿವೆ. ಕೆಲವೊಮ್ಮೆ ಕರಡಿ ಮತ್ತು ಚಿರತೆ ಸೇರಿದಂತೆ ಕಾಡುಪ್ರಾಣಿಗಳು ಗ್ರಾಮಸ್ಥರ ಮೇಲೆ ಮತ್ತು ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಹೆಬ್ಬಾವೊಂದು ಮೇಕೆಯೊಂದನ್ನು ಕೊಂದಿದೆ.

ವಾಲ್ಮೀಕಿನಗರದ ಟೀನಾ ಶೆಡ್‌ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಮೇಕೆಯನ್ನು ಹೆಬ್ಬಾವು ನುಂಗುವ ಯತ್ನವನ್ನು ಸ್ಥಳೀಯರು ವಿಫಲಗೊಳಿಸಿದ್ದಾರೆ. ಹೆಬ್ಬಾವು ಸುಮಾರು 13ರಿಂದ 14 ಅಡಿ ಉದ್ದವಿತ್ತು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಮೊಬೈಲ್​​ನಲ್ಲಿ ವಿಡಿಯೋವನ್ನು ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾಲಕನೋರ್ವ ಮೇಕೆಗಳನ್ನು ಮೇಯಿಸಲು ಬಂದಿದ್ದನು.

ಈ ವೇಳೆ ಪೊದೆಯಲ್ಲಿದ್ದ ಹೆಬ್ಬಾವು ಮೇಕೆ ಮೇಲೆ ದಾಳಿ ಮಾಡಿದೆ. ಮೇಕೆಯ ಚೀರಾಟ ಕೇಳಿ ಗ್ರಾಮಸ್ಥರು ಅಲ್ಲಿಗೆ ತಲುಪುವಷ್ಟರಲ್ಲಿ ಮೇಕೆ ಸಾವನ್ನಪ್ಪಿತ್ತು. ಸ್ಥಳೀಯರು ಹೆಬ್ಬಾವಿನ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳನ್ನು ಎಸೆದಿದ್ದಾರೆ. ಸಾಕಷ್ಟು ಪ್ರಯತ್ನದ ನಂತರ ಬೃಹತ್ ಹೆಬ್ಬಾವನ್ನು ಜನರು ಓಡಿಸಿದ್ದಾರೆ.

ಮೇಕೆಯನ್ನು ನುಂಗಲು ಯತ್ನಿಸಿದ ಹೆಬ್ಬಾವು..

ಈ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಆಗಾಗ್ಗೆ ವಸತಿ ಪ್ರದೇಶಗಳ ಮೇಲೆ ದಾಳಿ ಮಾಡುತ್ತವೆ. ಫೆಬ್ರವರಿ 5ರಂದು ವ್ಯಕ್ತಿಯೊಬ್ಬರ ಮನೆಯ ಹಿಂದೆ ದೈತ್ಯ ಹೆಬ್ಬಾವು ಪತ್ತೆಯಾಗಿತ್ತು. ಸುಮಾರು 20 ಅಡಿ ಇದ್ದ ಹೆಬ್ಬಾವನ್ನು ಗ್ರಾಮಸ್ಥರು ಹಿಡಿದು, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಫೆಬ್ರವರಿ 2ರಂದು ಎರಡು ಹೆಬ್ಬಾವುಗಳು ಪತ್ತೆಯಾಗಿದ್ದವು.

ಇತ್ತೀಚೆಗಷ್ಟೆ ಮನೆಯೊಂದಕ್ಕೆ ನುಗ್ಗಿದ ಕರಡಿ ಮಹಿಳೆ ಮೇಲೆ ದಾಳಿ ನಡೆಸಿತ್ತು. ಮಹಿಳೆ ಪ್ರಾಣಾಪಾಯದಿಂದ ಪಾರಾದರೂ, ಗಂಭೀರ ಗಾಯಗಳಾಗಿತ್ತು. ಬೇಸಿಗೆ ಆರಂಭವಾದ ಕೂಡಲೇ ವಸತಿ ಪ್ರದೇಶಗಳಲ್ಲಿ ವನ್ಯಜೀವಿಗಳ ಓಡಾಟ ಹೆಚ್ಚಾಗಿದ್ದು, ಆತಂಕ ನಿವಾರಣೆಗೆ ಸ್ಥಳೀಯರು ಸರ್ಕಾರದ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: Watch.. ನಿತ್ಯ ದೇವಸ್ಥಾನಕ್ಕೆ ಆಗಮಿಸಿ, ಘಂಟೆ ಬಾರಿಸುವ ಮೇಕೆ.. ಜನರಲ್ಲಿ ಅಚ್ಚರಿ..!

Last Updated : Mar 26, 2022, 3:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.