ತ್ರಿಶೂರ್(ಕೇರಳ) : ಬೃಹತ್ ಹೆಬ್ಬಾವೊಂದು ಬೀದಿ ನಾಯಿ ನುಂಗಿ ಒದ್ದಾಡಿರುವ ಘಟನೆ ಕೇರಳದ ತ್ರಿಶೂರ್ದಲ್ಲಿ ನಡೆದಿದೆ. ಅದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.ತಾಳಿಕ್ಕುಲಂನ ನಟ್ಟಿಕಾ ಬಳಿಕ ಇಯ್ಯಾನಿ ದೇವಸ್ಥಾನದ ಬಳಿ ಹೊಟ್ಟೆ ಉದಿಕೊಂಡಿರುವ ಬೃಹತ್ ಹೆಬ್ಬಾವು ಕಂಡು ಬಂದಿದೆ. ಬೀದಿ ನಾಯಿ ನುಂಗಿರುವ ಕಾರಣ ಅದಕ್ಕೆ ಚಲಿಸಲು ಸಾಧ್ಯವಾಗದೇ ಒದ್ದಾಡುತ್ತಿತ್ತು.
ಇದನ್ನ ನೋಡಿರುವ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ, ಹೆಬ್ಬಾವಿನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದು, ತದ ನಂತರ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.
ಇದನ್ನೂ ಓದಿರಿ: Live Video: ಕುಳ್ಳ ವೆಂಕಟೇಶ್ ಭೀಕರ ಹತ್ಯೆ.. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ಕಳೆದ ಎರಡು ದಿನಗಳ ಹಿಂದೆ ಇಯ್ಯಾನಿ ದೇವಸ್ಥಾನದ ಬಳಿ ಈ ಹೆಬ್ಬಾವು ಕಂಡು ಬಂದಿತ್ತು. ಆದರೆ, ಈ ವೇಳೆ ತಪ್ಪಿಸಿಕೊಂಡಿತು. ನಿನ್ನೆ ದೇವಸ್ಥಾನದ ಪಕ್ಕದಲ್ಲೇ ಬೀದಿನಾಯಿ ನುಂಗಿ ಒದ್ದಾಡಿದೆ. ಈ ವೇಳೆ ಗ್ರಾಮಸ್ಥರು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.