ನವದೆಹಲಿ/ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಮತ್ತು ಜಿ20 ಸಭೆಗಳು ಸೇರಿದಂತೆ ದ್ವಿಪಕ್ಷೀಯ ವಿಷಯಗಳ ಕುರಿತು ಉಭಯ ನಾಯಕರು ಚರ್ಚಿಸಿದರು. ಉಕ್ರೇನ್ ಪರಿಸ್ಥಿತಿ ಬಗ್ಗೆ ಚರ್ಚಿಸುವಾಗ ಮಾತುಕತೆ ಮತ್ತು ರಾಜತಾಂತ್ರಿಕತೆ ಮಾರ್ಗದ ಪ್ರಧಾನಿ ಮೋದಿ ಪುನರುಚ್ಚರಿಸಿದರು.
ದ್ವಿಪಕ್ಷೀಯ ಸಹಕಾರದಲ್ಲಿನ ಪ್ರಗತಿ ಪರಿಶೀಲನೆ ಮತ್ತು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಪ್ರಧಾನಿ ಮೋದಿ ಹಾಗೂ ಪುಟಿನ್ ವಿಚಾರ ವಿನಿಮಯ ಮಾಡಿಕೊಂಡರು. ಈ ಮಾತುಕತೆಯ ಸಮಯದಲ್ಲಿ ಭಾರತ ಅಧ್ಯಕ್ಷತೆ ವಹಿಸಿರುವ ಜಿ20 ಮತ್ತು ಎಸ್‌ಸಿಒ ವಿಶೇಷ ಒತ್ತು ನೀಡಲಾಯಿತು. ಇದಲ್ಲದೆ, ಇತ್ತೀಚೆಗೆ ಅಮೆರಿಕ ಭೇಟಿ ಪ್ರಧಾನಿ ಮಾಹಿತಿ ನೀಡಿದರು. ಈ ಕುರಿತು ಎರಡೂ ರಾಷ್ಟ್ರಗಳು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿವೆ.
''ಶಾಂಘೈ ಸಹಕಾರ ಸಂಸ್ಥೆ ಮತ್ತು ಜಿ20 ಕುರಿತು ನಿರ್ದಿಷ್ಟ ಗಮನ ನೀಡಲಾಗುತ್ತದೆ. ಭಾರತವು ಪ್ರಸ್ತುತ ಎರಡರ ಅಧ್ಯಕ್ಷ ಸ್ಥಾನವನ್ನು ಹೊಂದಿದೆ. ಜೊತೆಗೆ ಇದು ಬ್ರಿಕ್ಸ್ ಸ್ವರೂಪದಲ್ಲಿದೆ. ನರೇಂದ್ರ ಮೋದಿ ಅವರ ಇತ್ತೀಚಿನ ವಾಷಿಂಗ್ಟನ್ ಭೇಟಿ ಸೇರಿದಂತೆ ಅವರ ಅಂತಾರಾಷ್ಟ್ರೀಯ ಸಂಪರ್ಕಗಳ ಬಗ್ಗೆ ತಿಳಿಸಿದರು" ಎಂದು ರಷ್ಯಾದ ಅಧ್ಯಕ್ಷ ಕಚೇರಿ ಕ್ರೆಮ್ಲಿನ್ ವಿವರಿಸಿದೆ.
ಇದನ್ನೂ ಓದಿ: ವಿಶ್ವದಲ್ಲಿಯೇ ಭಾರತ & ಅಮೆರಿಕ ನಡುವಣ ಸ್ನೇಹ ಅತ್ಯಂತ ಪರಿಣಾಮಕಾರಿಯಾಗಿದೆ: ಬೈಡನ್ ಟ್ವೀಟ್
ಮಂದುವರೆದು, ''ಉಕ್ರೇನ್ ಸುತ್ತಲಿನ ಪರಿಸ್ಥಿತಿ ಬಗ್ಗೆ ಚರ್ಚಿಸಲಾಯಿತು. ರಷ್ಯಾ ಅಧ್ಯಕ್ಷರು ವಿಶೇಷ ಮಿಲಿಟರಿ ಕಾರ್ಯಾಚರಣೆಯ ವಲಯದಲ್ಲಿನ ವ್ಯವಹಾರಗಳ ಪ್ರಸ್ತುತ ಸ್ಥಿತಿಯನ್ನು ಮಾಹಿತಿ ಹಂಚಿಕೊಂಡರು. ಮಿಲಿಟರಿ ಸಂಘರ್ಷವನ್ನು ಪರಿಹರಿಸಲು ತೆಗೆದುಕೊಂಡ ರಾಜಕೀಯ ಮತ್ತು ರಾಜತಾಂತ್ರಿಕ ಕ್ರಮಗಳನ್ನು ವಿವರಿಸಿದರು'' ಎಂದು ಕ್ರೆಮ್ಲಿನ್ ಮಾಹಿತಿ ನೀಡಿದೆ.
ಪ್ರಧಾನಿ ಕಾರ್ಯಾಲಯ ಸಹ ಪ್ರಟಕಣೆ ನೀಡಿ, ರಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಧ್ಯಕ್ಷ ಪುಟಿನ್ ಅವರು ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದರು. ಉಕ್ರೇನ್‌ನಲ್ಲಿನ ಪರಿಸ್ಥಿತಿಯನ್ನು ಚರ್ಚಿಸುತ್ತಿರುವಾಗ ಪ್ರಧಾನಿ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮಾರ್ಗದ ಬಗ್ಗೆ ಪುನರುಚ್ಚರಿಸಿದರು. ಇಬ್ಬರೂ ನಾಯಕರು ಸಂಪರ್ಕದಲ್ಲಿರಲು ನಿರ್ಧರಿಸಿದರು. ಉಭಯ ದೇಶಗಳ ನಡುವಿನ ವಿಶೇಷವಾದ ಕಾರ್ಯತಂತ್ರದ ಪಾಲುದಾರಿಕೆಯನ್ನು ನಿರಂತರವಾಗಿ ಮತ್ತಷ್ಟು ಬಲಪಡಿಸಲು ಪ್ರಯತ್ನಗಳನ್ನು ಮುಂದುವರಿಸಲು ಸಮ್ಮತಿಸಿದರು'' ಎಂದು ತಿಳಿಸಿದೆ.
ಇತ್ತೀಚೆಗೆ ರಷ್ಯಾದಲ್ಲಿ ಸೇನಾ ಬಿಕ್ಕಟ್ಟು ತಲೆದೂರಿತ್ತು. ಅಧ್ಯಕ್ಷ ಪುಟಿನ್ ವಿರುದ್ಧವೇ ಖಾಸಗಿ ವ್ಯಾಗ್ನರ್ ಪಡೆ ತಿರುಗಿ ಬಿದ್ದಿತ್ತು. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಪುಟಿನ್ ಹೊಗಳಿದ್ದರು. ರಷ್ಯಾದ ಉತ್ತಮ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು ವರ್ಷಗಳ ಹಿಂದೆ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಪ್ರಸ್ತುತಪಡಿಸಿದರು. ಇದು ಭಾರತದ ಆರ್ಥಿಕತೆಯ ಮೇಲೆ ಬಹಳ ಗೋಚರ ಪರಿಣಾಮ ಬೀರಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇತ್ತ, ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ಎಲ್ಲ ಬೆಳೆವಣಿಗೆಗಳ ನಂತರ ಭಾರತ ಹಾಗೂ ರಷ್ಯಾ ನಾಯಕರ ನಡುವೆ ಈ ಮಾತುಕತೆ ನೀಡಿದೆ.
ಇದನ್ನೂ ಓದಿ: ರಷ್ಯಾದಲ್ಲಿ ಆಂತರಿಕ ಪ್ರಕ್ಷುಬ್ಧತೆ ಉಂಟುಮಾಡುವ ಯಾವುದೇ ಪ್ರಯತ್ನ ವಿಫಲಗೊಳ್ಳತ್ತೆ: ಪುಟಿನ್ ವಾರ್ನಿಂಗ್