ಪುರಿ(ಒಡಿಶಾ): ಇಂದಿನಿಂದ ಭಕ್ತರು ಕೋವಿಡ್ ಲಸಿಕೆ ಪ್ರಮಾಣಪತ್ರವಿಲ್ಲದೆ ಪುರಿ ಶ್ರೀಮಂದಿರಕ್ಕೆ ಭೇಟಿ ನೀಡಬಹುದು. ಮುಕ್ತ ದರ್ಶನ ವ್ಯವಸ್ಥೆ ಆರಂಭವಾಗಿದ್ದು, ಭಕ್ತರು ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಹೊಸ ಮಾರ್ಗಸೂಚಿಯ ಪ್ರಕಾರ ಭಕ್ತರು ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ ಭೇಟಿ ನೀಡಬಹುದಾಗಿದೆ.
ಹಿರಿಯ ನಾಗರಿಕರಿಗಾಗಿ ಆಡಳಿತದಿಂದ ವಿಶೇಷ ಮಾರ್ಗಗಳನ್ನು ಸ್ಥಾಪಿಸಲಾಗಿದ್ದು, ಸರತಿ ಸಾಲಿನಲ್ಲಿ ಬರುವ ಭಕ್ತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಭಾನುವಾರ ಹೊರತುಪಡಿಸಿ ವಾರದಲ್ಲಿ 6 ದಿನ ಭಕ್ತರು ದೇವರ ದರ್ಶನ ಮಾಡಬಹುದು. ಸ್ವಚ್ಛತೆಯ ಉದ್ದೇಶದಿಂದ ಭಾನುವಾರ ದೇಗುಲವನ್ನು ಮುಚ್ಚಲು ಆಡಳಿತ ಮಂಡಳಿ ನಿರ್ಧರಿಸಿದೆ. ಈ ಹಿಂದೆ, ಆಗಸ್ಟ್ 2021 ರಲ್ಲಿ ನಾಲ್ಕು ತಿಂಗಳ ದೀರ್ಘ ಮುಚ್ಚುವಿಕೆಯ ನಂತರ ದೇವಾಲಯವನ್ನು ಪುನಃ ಮುಕ್ತವಾಗಿ ತೆರೆಯಲಾಗಿದೆ.
ಇದನ್ನೂ ಓದಿ: ಸ್ವಪ್ನಾ ಸುರೇಶ್ಗೆ ಉದ್ಯೋಗ ನೀಡಿದ್ದ ಎಚ್‌ಆರ್‌ಡಿಎಸ್ ವಿರುದ್ಧ ಪ್ರಕರಣ ದಾಖಲಿಸಿದ ಎಸ್‌ಸಿ/ಎಸ್‌ಟಿ ಆಯೋಗ: ಕಾರಣ?
ಕೊರೊನಾ ಸಾಂಕ್ರಾಮಿಕದ ತೀವ್ರತೆಯ ದೃಷ್ಟಿಯಿಂದ ಎರಡು ಡೋಸ್ ಲಸಿಕೆ ಅಥವಾ ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ತೋರಿಸುವುದು ಈ ಹಿಂದೆ ಕಡ್ಡಾಯವಾಗಿತ್ತು.