ಚಂಡಿಘಡ: ದೇಶಾದ್ಯಂತ ಕೊರೊನಾ ವೈರಸ್ ಹಾವಳಿ ಕಡಿಮೆಯಾಗ್ತಿದ್ದಂತೆ ಈ ಹಿಂದಿನಂತೆ ಶಾಲಾ-ಕಾಲೇಜು ಆರಂಭಗೊಳ್ಳುತ್ತಿದ್ದು, ಇದೀಗ ಪಂಜಾಬ್ನಲ್ಲೂ ನಾಳೆಯಿಂದ ಶಾಲಾ-ಕಾಲೇಜುಗಳು ಪುನಾರಂಭಗೊಳ್ಳಲಿವೆ.
ಓದಿ: ಭಾಗಶಃ ತೆರೆದ ಕೇರಳದ ಶಾಲೆಗಳು.. ಹೊಸ ಹುರುಪಿನೊಂದಿಗೆ ತರಗತಿಗೆ ಹಾಜರಾದ ವಿದ್ಯಾರ್ಥಿಗಳು!
ಶಾಲೆ ಪುನಾರಂಭಕ್ಕೆ ಸಂಬಂಧಿಸಿದಂತೆ ಅಲ್ಲಿನ ಸರ್ಕಾರ ಮಹತ್ವದ ನಿರ್ಧಾರ ಹೊರಹಾಕಿದ್ದು, 5ನೇ ತರಗತಿಯಿಂದ 12ನೇ ತರಗತಿವರೆಗಿನ ಶಾಲಾ-ಕಾಲೇಜು ಆರಂಭ ಮಾಡಲಾಗುವುದು ಎಂದು ಸುತ್ತೋಲೆ ಹೊರಡಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಶಾಲಾ-ಕಾಲೇಜು ಕಾರ್ಯಾರಂಭ ಮಾಡಲಿವೆ ಎಂದು ಅಲ್ಲಿನ ಶಿಕ್ಷಣ ಸಚಿವ ವಿಜಯ್ ಇಂದಿರಾ ಸಿಘಲ್ ತಿಳಿಸಿದ್ದಾರೆ.
ಕರ್ನಾಟಕ, ಕೇರಳ ಹಾಗೂ ಆಂಧ್ರಪ್ರದೇಶ ಸೇರಿದಂತೆ ಈಗಾಗಲೇ ಅನೇಕ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳು ಪುನಾರಂಭಗೊಂಡಿದ್ದು, ವಿದ್ಯಾರ್ಥಿಗಳು ಎಂದಿನಂತೆ ಶಾಲೆಗೆ ತೆರಳುತ್ತಿದ್ದಾರೆ.